Bhagat Singh Birth Anniversary: ಕ್ರಾಂತಿಕಾರಿ ಭಗತ್ ಸಿಂಗ್ರ ವಿಚಾರ, ಆದರ್ಶ, ಸಿದ್ದಾಂತ ಇಂದಿಗೂ ಜೀವಂತ
"ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ" ಎಂದು ಭಗತ್ ಸಿಂಗ್ ನುಡಿದರು. ಇಂದು ಭಗತ್ ನಮ್ಮೊಂದಿಗೆ ಇಲ್ಲವೆಂದರೂ ಅವರ ವಿಚಾರ, ಆದರ್ಶ ಸಿದ್ದಾಂತ ಇಂದಿಗೂ ಜೀವಂತವಾಗಿದೆ. ಭಗತ್ ಸಿಂಗ್ ಎಂದರೆ "ದೇಶಪ್ರೇಮಿ" "ಹುತಾತ್ಮ" ಇಂದು ಬಿಂಬಿಸುವ ಮೂಲಕ ಆರಾಧನೆ ಮಾಡುವುದಲ್ಲ. ಅವರ ಅಮೋಘ ಶಕ್ತಿ, ಕ್ರಾಂತಿಯ ಬಗ್ಗೆ ಅರಿಯಬೇಕು.
ಭಗತ್ ಸಿಂಗ್ ಎಂದರೆ ಅಪ್ರತಿಮ ದೇಶಪ್ರೇಮಿ. ಬಹಳಷ್ಟು ಮನಸ್ಸನ್ನು ಗೆದ್ದು ಸ್ಪೂರ್ತಿಯತ್ತ ಕೊಂಡೂಯ್ದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. ಪ್ರತಿಯೊಬ್ಬರ ಮನದಲಿ ಭಗತ್ ಸಿಂಗ್ ಇಂದಿಗೂ ಅಮರ. ಬ್ರಿಟಿಷರ ನೇಣಿಗೆ ನಗುನಗುತ್ತಲೆ ಕೊರಳೊಡ್ಡಿದ ಭಾರತದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ ಎಂದರೆ ಭಗತ್. ಭಗತ್ ಸಿಂಗ್ ಜನಿಸಿದ್ದು ಸೆಪ್ಟೆಂಬರ್ 28 , 1907 ರಂದು. ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಮೂರನೆಯ ಮಗನಾಗಿ ಭಗತ್ ಜನಿಸಿದರು. ಇವರು ಸಣ್ಣ ವಯಸಿನಲ್ಲೇ ಒಬ್ಬ ಉತ್ತಮ ಓದುಗಾರ ಮಾತ್ರವಲ್ಲದೆ, ಅದ್ಭುತ ಬರಹಗಾರರು ಕೂಡ ಹೌದು. ತನ್ನ ಮನೆಯ ಜಮೀನಿನಲ್ಲಿ ಬೆಳೆ ಬೆಳೆಯುವ ಬದಲು ಬ್ರಿಟಿಷರ ವಿರುದ್ಧ ಹೋರಾಡಲು ಬಂದೂಕು, ಶಸ್ತ್ರಗಳ ಬೆಳೆ ಬೆಳೆಯುತ್ತೇನೆಂದು ಹೇಳಿದ ದೈರ್ಯಶಾಲಿ ಬಾಲಕ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಗತ್ ಸಿಂಗ್ ನ ಜೀವನದ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಭಗತ್ ಸಿಂಗ್ ಆಗ ಪುಟ್ಟ ಬಾಲಕ.
ಹತ್ಯೆ ನಡೆದ ಸ್ಥಳಕ್ಕೆ ಹೋಗಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದನ್ನು ಕಂಡು ದುಃಖಿತನಾಗಿ ಅಲ್ಲಿಂದ ಮಣ್ಣನ್ನು ತಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ತಾನು ಪೂಜಿಸುವ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದ. ಅವರ ಮನಸ್ಸು ಚಿಕ್ಕದಿನಿಂದಲೇ ದೇಶ ಸೇವೆಗಾಗಿ ಮಿಡಿಯುತ್ತಿತ್ತು. ಮುಂದೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಬಿಟ್ಟರು. ಬ್ರಿಟಿಷರ ಮುಂದೆ ತಲೆಬಾಗದೆ ತನ್ನ ಕೊನೆಯ ಉಸಿರಿನ ತನಕ ಹೋರಾಡಿದರು. ಭಗತ್ ಸಿಂಗ್ನ ಆಳವಾದ ಚಿಂತನೆ, ಆತನ ಮಾನವೀಯ ಮೌಲ್ಯಗಳು ಎಲ್ಲರ ಮನಸ್ಸಿನ ಮೇಲೆ ಪ್ರಭಾವ ಬೀರಿವೆ. ಭವಿಷ್ಯದ ಭಾರತದ ದೇಶಕ್ಕೆ ಭಗತ್ ಎನ್ನುವ ವೀರ ಸದಾ ಆದರ್ಶವಾಗಿರುತ್ತಾನೆ.
“ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದು ಭಗತ್ ಸಿಂಗ್ ನುಡಿದರು. ಇಂದು ಭಗತ್ ನಮ್ಮೊಂದಿಗೆ ಇಲ್ಲವೆಂದರೂ ಅವರ ವಿಚಾರ, ಆದರ್ಶ ಸಿದ್ದಾಂತ ಇಂದಿಗೂ ಜೀವಂತವಾಗಿದೆ. ಭಗತ್ ಸಿಂಗ್ ಎಂದರೆ “ದೇಶಪ್ರೇಮಿ” “ಹುತಾತ್ಮ” ಇಂದು ಬಿಂಬಿಸುವ ಮೂಲಕ ಆರಾಧನೆ ಮಾಡುವುದಲ್ಲ. ಅವರ ಅಮೋಘ ಶಕ್ತಿ, ಕ್ರಾಂತಿಯ ಬಗ್ಗೆ ಅರಿಯಬೇಕು. ಅವರ ಚಿಂತನೆಗಳನ್ನು ನೆನಪಿಸಿ, ನಾವೆಲ್ಲರೂ ಮುನ್ನಡೆಯಬೇಕು. ಭಗತ್ ಸಿಂಗ್ ಕೇವಲ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡಲಿಲ್ಲ. ದೇಶದ ಶಾಂತಿ ಮತ್ತು ಸಹಬಾಳ್ವೆಗಾಗಿ ಹೋರಾಡಿದರು.
ಭಾರತದ ಸ್ವಾತಂತ್ರ್ಯ ಚಳುವಳಿಗೆ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ರಾಜಗುರು, ಸುಖದೇವ್ ಮೊದಲಿಗರು. ಶಾಸನಸಭೆಯಲ್ಲಿ ಬಾಂಬ್ ಸ್ಪೋಟ ಮಾಡಿದರ ಪರಿಣಾಮ ಬ್ರಿಟಿಷ್ ಸರಕಾರ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಗಲ್ಲು ಶಿಕ್ಷೆಗೆ ಗುರಿಯಾದರು. ತಮ್ಮ ಕೊರಳು ನೇಣಿಗೆ ಹಾಕುವ ಮೊದಲು ಕೊರಳು ಕುಣಿಗೇಕೆ ಮುತ್ತಿಕ್ಕಿ ಸಾವಿನ ಕ್ಷಣದಲ್ಲೂ ಸಾವಿಗೆ ಸವಾಲಾಗಿ ನಿಂತವರು. ಕ್ರಾಂತಿ ಚಿರವಾಗಲಿ ಘೋಷಣೆಯೊಂದಿಗೆ ನೇಣುಗಂಬಕ್ಕೆ ಕೊರಳೊಡ್ಡಿದರು. ದೇಶದ ಜನತೆಗೆ ಯಾವುದೇ ಗಲ್ಲು ಶಿಕ್ಷೆ ಮಾಹಿತಿ ನೀಡದೆ ತರಾತುರಿಯಲ್ಲಿ ಗಲ್ಲು ಶಿಕ್ಷೆ ನೀಡಿದರು. ನಂತರದಲ್ಲಿ ರಹಸ್ಯವಾಗಿ ಸಟ್ಲೆಜ್ ನದಿ ತೀರದಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್, ದೇಹವನ್ನು ರಹಸ್ಯವಾಗಿ ಸುಡುವ ಪ್ರಯತ್ನದಲ್ಲಿದ್ದರು ಆದರೆ ಈ ವಿಷಯ ಅಲ್ಲಿಯ ಜನರಿಗೆ ತಿಳಿಯಿತು. ಅಷ್ಟರಲ್ಲೇ ಸಾವಿರಾರು ದೇಶಭಕ್ತರು ಆ ಸ್ಥಳಕ್ಕೆ ಬಂದರು. ಇದರ ಪರಿಣಾಮದಿಂದ ವೀರಪುತ್ರ ತ್ಯಾಗ ಬಲಿದಾನ ದೇಶದಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ಬಿಸಿಮುಟ್ಟಿತ್ತು. ನಂತರದ ಸ್ವಾತಂತ್ರ್ಯ ಹೋರಾಟದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂತವರು ಸಾಯಲೇ ಬೇಕೆಂದು ಭಗತ್ ಸಿಂಗ್ ನಂಬಿದ್ದರು ಎಂಬ ಉಲ್ಲೇಖವಿದೆ. ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಸೇರಿದಂತೆ ಅಸಂಖ್ಯಾತ ವ್ಯಕ್ತಿಗಳನ್ನು ನಾವು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಆದರೆ ಇಂದಿನ ಯುವ ಸಮುದಾಯವನ್ನು ಒಗ್ಗೂಡಿಸಿ ಕ್ರಾಂತಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯ ಇರುವುದು ಭಗತ್ ಸಿಂಗ್ ಚಿಂತನೆಗಳಲ್ಲಿ ಮಾತ್ರ. ಅಂದಿನ ಧೀರರೆ ಇಂದಿನ ಯುವ ಜನಾಂಗಕ್ಕೆ ಪೂರ್ತಿಯ ರಿಯಲ್ ಹೀರೋ ಗಳು. ಚಿಕ್ಕ ವಯಸ್ಸಿನಲ್ಲಿ ಭಾರತದ ಭವಿಷ್ಯಕ್ಕಾಗಿ ಗಲ್ಲು ಶಿಕ್ಷೆಗೆ ಗುರಿಯದ ಭಗತ್ ಸಿಂಗ್ ಸಮಾಜಕ್ಕೆ ಹಲವಾರು ಸೇವೆ ಮಾಡಲು ಬಯಸಿದರು. ಭಗತ್ ಸಿಂಗ್ ನ ಪ್ರತಿಯೊಂದು ವಿಷಯವು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಪ್ರಭಾವ ಬೀರಿದೆ. ಇಂದು ಭಗತ್ ಸಿಂಗ್ನ 115ನೇ ಜನ್ಮದಿನ. ಭಗತ್ ಸಿಂಗ್ ನಂತಹ ವೀರಯೋಧರು ಇನ್ನಷ್ಟು ಹುಟ್ಟಿ ಬರಲಿ ಎಂದು ಆಶಿಸೋಣ.
ಪ್ರಣಮ್ಯ ಟಿ. ಯಾದವ್, ಪೆರುವಾಯಿ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಆಳ್ವಾಸ್ ಕಾಲೇಜ್ ಮೂಡುಬಿದ್ರೆ
Published On - 9:54 am, Wed, 28 September 22