‘ಮೊದಲ ಸಾವು ನಿನಗೇ ಬರಲಿ’ : ಇದು ಬದುಕಿನ ಸತ್ಯದ ವಾಕ್ಯ ಎಂದ ಗುರು
ದುಃಖದಲ್ಲಿಯೇ ದಿನಗಳನ್ನು ಕಳಿಯಬೇಕಾಗುತ್ತದೆ ಅಂಥ ಸಂದರ್ಭದಲ್ಲಿ ಯಾವ ಸಂಪತ್ತು ನಿಮ್ಮನ್ನು ಸಂತೈಸಲಾರದು ಹಾಗಾಗಿ ಸಾವಿನ ಸರದಿ ಪತ್ರದಲ್ಲಿ ನಾನು ಬರೆದು ಕೊಟ್ಟಿರುವಂತೆಯೇ ನಿನ್ನ ಬದುಕಲ್ಲೂ ಬಂದರೆ ಎಲ್ಲರೂ ಆ ಸಂಕಟವನ್ನು ಹೆಚ್ಚಿನ ದುಃಖವಿಲ್ಲದೆ ಸಹಿಸಿಕೊಳ್ಳಬಹುದು.

ಸಾವು ಎಲ್ಲರಿಗೂ ಒಂದಲ್ಲಾ ಒಂದು ದಿನ ಬಂದೇ ಬರುತ್ತದೆ . ನಮಗೆ ಬೇಕಾದಾಗ ಕರಿಯೋಕೆ ಆಗಲ್ಲಾ ಬಂದ ಮೇಲೆ ಸ್ವೀಕರಿಸಲೇ ಬೇಕಾಗುತ್ತದೆ. ಅದು ಬಡವರು ಆದರು ಸರಿಯೇ ಶ್ರೀಮಂತರು ಆದರೂ ಸರಿಯೇ ಹಿಮಾಲಯದ ತಪ್ಪಲಿನಲ್ಲಿ ತಪಸ್ಸು ಮಾಡಿದ್ದ ಆ ಗುರುಗಳು ಒಂದು ಹಳ್ಳಿಗೆ ಬಂದರು , ಊರಾಚೆಗಿನ ಬಯಲಿನಲ್ಲಿ ಉಳಿದುಕೊಂಡಿದ್ದರು. ದಿನವೂ ಹಳ್ಳಿಯ ಗ್ರಾಮಸ್ಥರು ಅವರ ಮುಂದೆ ಸಮಸ್ಯೆಗಳನ್ನು ಹೇಳಿಕೊಂಡರು ಅದಕ್ಕೆ ಪರಿಹಾರವನ್ನು ಸೂಚಿಸುತ್ತಾ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರರಾದರು. ಗುರುಗಳ ಬಳಿಗೆ ಹೋಗಿ ಬಂದ ಅವರಿಂದ ಸಲಹೆ ಪಡೆದ ಜನರಲ್ಲಿ ಸಂಭ್ರಮದಿಂದ ಬದುಕುತ್ತಿದ್ದಾರೆ ಎಂಬ ಸಂಗತಿ ಒಂದು ದಿನ ಶ್ರೀಮಂತನ ಕಿವಿಗೂ ಬಿತ್ತು. ಮರುದಿನವೇ ಗುರುಗಳ ಎದುರು ನಿಂತು ಕೇಳಿಕೊಂಡ ಸ್ವಾಮಿ ನನಗೆ ಐದಾರು ವಂಶಗಳು ಕೂತು ತಿಂದರೂ ಕರಗದಷ್ಟು ಸಂಪತ್ತಿದೆ .ನಾವು ಕುಟುಂಬದವರು ಯಾವಾಗಲೂ ಸಂತೋಷದಿಂದ ಇರಬೇಕು. ಈ ಸಂಭ್ರಮ ಎಂದೆಂದಿಗೂ ನಮ್ಮೊಂದಿಗಿರಬೇಕು ಎಂಬುದೇ ನನ್ನ ಆಸೆ ದಯಮಾಡಿ ನನಗೊಂದು ಒಳ್ಳೆಯ ಧ್ಯೇಯವಾಕ್ಯ ಬರೆದು ಕೊಡಿ.
ಒಂದು ನಿಮಿಷ ಧ್ಯಾನಾಸಕ್ತರಾದ ಗುರುಗಳು ಹಾಳೆಯೊಂದರಲ್ಲಿ ಧ್ಯೇಯವಾಕ್ಯ ಬರೆದು ಅವನ ಕೈಗಿತ್ತರು ಅದರೊಳಗೆ ನಿನ್ನ ಮನೆಯಲ್ಲಿ ಮೊದಲು ನಿನಗೆ ಸಾವು ಬರಲಿ ಆಮೇಲೆ ನಿನ್ನ ಹೆಂಡತಿ ಆನಂತರದಲ್ಲಿ ನಿನ್ನ ಮಗ ನಿಧನ ಹೊಂದಲಿ ತರುವಾಯ ನಿನ್ನ ಮೊಮ್ಮಗ ಇದು ಹೀಗೆ ಮುಂದುವರಿಯಲಿ ಎಂದು ಬರೆದರು. ಆ ಮಾತುಗಳನ್ನು ಕಂಡು ಶ್ರೀಮಂತನ ಪಿತ್ತ ನೆತ್ತಿಗೇರಿತು ಗುರುಗಳು ಇನ್ನೊಂದು ಮರೆತು ಹೊಡೆಯಲೂ ಹೋಗಿಬಿಟ್ಟಿದ ಆಗ ಗುರುಗಳು ಮೂರ್ಖ ಇದು ತಮಾಷೆಗೆ ಬರೆದುದ್ದಲ್ಲ ಬದುಕಿನ ಸತ್ಯವನ್ನೇ ನಾನು ಬರೆದಿದ್ದು ಎಂದು ಹೇಳಿದರು . ಸಾವಿಗೆ ಹಿರಿತನ ಎಂಬುವುದಿಲ್ಲ ಅದು ಯಾವಾಗ ಬೇಕಾದರು ,ಯಾರಿಗೆ ಬೇಕಾದರೂ ಬರಬಹುದು .
ನೀನು ಇರುವಾಗಲೇ ನಿನ್ನ ಹೆಂಡತಿ ಸಾಯಬಹುದು ಕೆಲವೇ ತಿಂಗಳಲ್ಲಿ ನಿನ್ನ ಮಗನೂ ಮರಣಕ್ಕೆ ತುತ್ತಾಗಬಹುದು ಹೀಗೇನಾದರೂ ಆಗಿಬಿಟ್ಟರೆ ನಿನ್ನಲ್ಲಿ ಎಷ್ಟು ಆಸ್ತಿ ಇದ್ದರೆ ತಾನೆ ಏನು ಪ್ರಯೋಜನ ಅವರು ಅಗಲಿಕೆಯಿಂದ ನೀನು ಯಾವುದನ್ನು ನೆಮ್ಮದಿಯಾಗಿ ಅನುಭವಿಸಲಾರೆ.
ದುಃಖದಲ್ಲಿಯೇ ದಿನಗಳನ್ನು ಕಳಿಯಬೇಕಾಗುತ್ತದೆ ಅಂಥ ಸಂದರ್ಭದಲ್ಲಿ ಯಾವ ಸಂಪತ್ತು ನಿಮ್ಮನ್ನು ಸಂತೈಸಲಾರದು ಹಾಗಾಗಿ ಸಾವಿನ ಸರದಿ ಪತ್ರದಲ್ಲಿ ನಾನು ಬರೆದು ಕೊಟ್ಟಿರುವಂತೆಯೇ ನಿನ್ನ ಬದುಕಲ್ಲೂ ಬಂದರೆ ಎಲ್ಲರೂ ಆ ಸಂಕಟವನ್ನು ಹೆಚ್ಚಿನ ದುಃಖವಿಲ್ಲದೆ ಸಹಿಸಿಕೊಳ್ಳಬಹುದು. ಆ ಗುರುಗಳು ಬರೆದಿರುವಂತೆಯೇ ಸಾವಿನ ಆಟ. ನಮ್ಮ ನಿಮ್ಮ ಬದುಕಲ್ಲೂ ನಡೆಯಬಾರದು ಎಂದರೆ ಇಂದೆ ನೀವು ನಿಮ್ಮ ಕುಟುಂಬ, ಪ್ರೀತಿ ಪಾತ್ರರೊಂದಿಗೆ ನಿಮ್ಮ ಉತ್ತಮ ಸಮಯ ಕಳೆಯಿರಿ. ಇದ್ದ ಸಮಯ ಬಳಸಿಕೋಳ್ಳಿ.
ರಂಜೀತಾ.ಮ.ಯಲಿಮಠ
ಆಳ್ವಾಸ್ ಕಾಲೇಜ್