ಪರಶುರಾಮನ ಸೃಷ್ಟಿ ಎಂದು ಹೆಸರಾಗಿರುವ ತುಳುನಾಡಿನಲ್ಲಿ ಅನೇಕ ಆಚರಣೆಯನ್ನು ಅತ್ಯಂತ ಶ್ರದ್ದೆ ಭಕ್ತಿಯಿಂದ ಅಲ್ಲಿನ ಜನರು ಆಚರಣೆರಿಸುತ್ತಾ ಬರುತ್ತಿದ್ದಾರೆ. ಯಕ್ಷಗಾನ, ಭರತನಾಟ್ಯ, ನಾಟಕ, ನಾಗಾರಾಧನೆ, ಹೀಗೆ ಅನೇಕ ಆಚರಣೆಗಳನ್ನು ಮಾಡುವ ಈ ತುಳುನಾಡಿನಲ್ಲಿ ದೈವಾರಾಧನೆಗೆ ಹೆಚ್ಚಿನ ಮಹತ್ವವಿದೆ. ತುಳುನಾಡಿನಲ್ಲಿ ಆ ಶಕ್ತಿ ಹೆಸರೇ ಒಂದು ಕಾರ್ಣಿಕ . ಭಕ್ತಿಯಿಂದ ಅಜ್ಜ ಎಂದು ಕೂಗಿದರೆ ಸಾಕು ಎಂಥಾ ಸಂಕಷ್ಟದಲ್ಲಿರುವವರಿಗೆ ನಗು ನಗುತ್ತಲೇ ಪರಿಹಾರ ನೀಡುವ ಶಕ್ತಿ ಕೊರಗಜ್ಜ ಎನ್ನುವ ಪದಕ್ಕೆ ಇದೆ. ಏಕೆಂದರೆ ಅನೇಕ ಶತಮಾನಗಳಿಂದ ಕೊರಗಜ್ಜನನ್ನು ಅತ್ಯಂತ ನಿಷ್ಠೆಯಿಂದ ಅಲ್ಲಿನ ಜನರು ಪೂಜಿಸುತ್ತಾ ಕೊರಗಜ್ಜನನ್ನು ಪ್ರೀತಿಯಿಂದ ಅಜ್ಜ ತನಿಯ ಎಂದು ಕೂಡ ಕರೆಯುತ್ತಾ ಬರುತ್ತಿದ್ದಾರೆ.ಅದು ಮಾತ್ರವಲ್ಲವೇ ಅಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ನಂಬಿಕೆ. ಯಾರು ಕೈಬಿಟ್ಟರೂ ಅಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಪ್ರತಿಯೊಬ್ಬ ಭಕ್ತರ ಮನಸ್ಸಿನಲ್ಲಿದೆ.
ಕೊರಗಜ್ಜ ಎಂಬ ದೈವಕ್ಕೆ ಅದರದ್ದೇ ಆದ ಒಂದು ಇತಿಹಾಸವಿದೆ. ಮೂಲತ: ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗೆ ಜನಿಸಿದ ಮಗನೇ ತನಿಯ. ಆದರೆ ಕೇವಲ 20 ದಿನಗಳಲ್ಲಿ ತನ್ನ ತಂದೆ ತಾಯಿಯಿಂದ ದೂರವಾಗಿ ಅನಾಥನಾಗುತ್ತಾನೆ. ಅದರ ನಂತರ ತನಿಯ ಭೈದರ ಪಂಗಡಕ್ಕೆ ಸೇರಿದ್ದ ಮೈರಕ್ಕ ಬೈದೆದಿಯನ್ನು ನೋಡಿ ಅಮ್ಮ ಎಂದು ಕರೆದು ಒಂದು ಕೆಲಸವನ್ನು ಕೊಡಿ ಎಂದು ಕೇಳಿದ ತನಿಯನಿಗೆ ಮೈರಕ್ಕ ತನ್ನ ತಲೆಗೆ ಇಟ್ಟಿರುವ ಬಟ್ಟೆಯನ್ನು ನೀಡಿ ನಂತರ ಮೈರಕ್ಕ ಆತನನ್ನು ಕರೆದುಕೊಂಡು ಹೋಗುತ್ತಾಳೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಯಾವ ಕೈ ಮೇಲೆ ಹಲ್ಲಿ ಬಿದ್ದರೆ ಲಕ್? ಹಲ್ಲಿಗಳ ಮಿಲನ ನೋಡಿದರೆ ಏನನ್ನು ಸೂಚಿಸುತ್ತದೆ ಗೊತ್ತಾ?
ಮೈರಕ್ಕ ಶೇಂದಿ ಮಾರುವವರಾಗಿದ್ದು, ಈ ಕಾರಣಕ್ಕಾಗಿ ತನಿಯ ಆ ಕಾರ್ಯವನ್ನು ಮಾಡಲು ಪ್ರಾರಂಭಿಸುತ್ತಾನೆ. ಒಂದು ದಿನ ಮೈರಕ್ಕ ತನಿಯನಿಗೆ ಶೇಂದಿಯನ್ನು ತುಂಬಿಸುವಂತೆ ಕೆಲಸವನ್ನು ನೀಡುತ್ತಾಳೆ. ಅದೇ ರೀತಿ ತನಿಯ ಶೇಂದಿಯನ್ನು ತುಂಬಿಸುತ್ತಿರುವಾಗ ಒಂದು ವಿಚಿತ್ರ ಫಟನೆ ನಡೆಯುತ್ತದೆ. ಏಳು ರಾತ್ರಿ ಏಳು ಹಗಲು ಕೆಳೆದರು ಶೇಂದಿ ಖಾಲಿಯಾಗುವುದಿಲ್ಲ ಈ ಸಂದರ್ಭದಲ್ಲಿ ಮೈರಕ್ಕ ಶೇಂದಿ ಸಂಪೂರ್ಣ ಖಾಲಿಯಾದರೆ ಕದ್ರಿ ಮಂಜುನಾಥ ದೇವರಿಗೆ ಪೇಂಣಲಿ(ಕವಚ) ಯನ್ನು ಒಪ್ಪಿಸುತ್ತೇನೆ ಎಂದು ಹರಕೆ ಹೇಳಿಕೊಳ್ಳುತ್ತಾಳೆ. ಹೀಗೆ ನಂತರ ತನಿಯ ವಯಸ್ಸಿಗೆ ಬಂದ ನಂತರ ಮೈರಕ್ಕ ಹೇಳಿಕೊಂಡ ಹರಕೆಯನ್ನು ತೀರಿಸಲು ಪೇಂಣಲಿ(ಕವಚ) ಯನ್ನು ನಿರ್ಧರಿಸುತ್ತಾಳೆ . ಹೀಗೆ ರಚನೆಗೊಂಡ ಪೇಂಣಲಿ(ಕವಚ) ಯನ್ನು ತೆಗೆದುಕೊಂಡು ಹೋಗಲು 7 ಜನ ಬೇಕಾಗಿರುತ್ತದೆ. ಆದರೆ ತನಿಯ ಈ ಪೇಂಣಲಿ(ಕವಚ) ಯನ್ನು ತಾನು ಒಬ್ಬನೇ ತೆಗೆದುಕೊಂಡು ಹೋಗುತ್ತಾನೆ. ಆದರೆ 7 ಜನಗಳಿಗೆ ನೀಡುವ ಊಟ, ಶೇಂದಿ, ಎಲೆ ಅಡಿಕೆಯನ್ನು ನನಗೆ ನೀಡಬೇಕು ಎಂದು ಮೈರಕ್ಕ ಜೊತೆ ಹೇಳುತ್ತಾನೆ. ಅದರಂತೆ ಆಕೆ ಅವನಿಗೆ ಎಲ್ಲಾವನ್ನು ನೀಡುತ್ತಾಳೆ.
ಹೀಗೆ ನಂತರ ಅತ್ಯಂತ ಹೆಚ್ಚು ತೂಕದ ಕವಚಯನ್ನು ಒಬ್ಬನೇ ಕದ್ರಿ ಮಂಜುನಾಥನ ಸನ್ನಿಧಿಗೆ ಹರಕೆಯ ರೂಪದಲ್ಲಿ ಕಂಚಿನ ಬಟ್ಟಿಯನ್ನು ಸಂಧಿಸಲು ಮುಂದಾಗುತ್ತಾನೆ ಇದನ್ನು ಕಂಡ ಮೈರಕ್ಕ ಮತ್ತು ಅಲ್ಲಿನ ಜನರಿಗೆ ಆಶ್ಚರ್ಯವಾಗುತ್ತದೆ .ಮೈರಕ್ಕ
ತನಿಯನ ಜೊತೆ ಕೇಳುತ್ತಾಳೆ ನೀನು ಯಾರು ಆಗ ತನಿಯ ನಾನು ಯಾರು ಎಂಬುದು ತಿಳಿಯುತ್ತದೆ ಎಂದು ಹೇಳುತ್ತಾ ಮೈರಕ್ಕನಿಗೆ ಸಮಾಧಾನ ಮಾಡುತ್ತಾನೆ. ಹೀಗೆ ತನಿಯನ ಮಹಿಮೆಯು ಜನರಿಗೆ ತಿಳಿಯಲು ಪ್ರಾರಂಭವಾಗುತ್ತದೆ. ಹೀಗೆ ತನಿಯ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ತಲುಪುತ್ತಾನೆ.
ಅದರೆ ತನಿಯ ಒಬ್ಬ ದಲಿತ ಜನಾಂಗಕ್ಕೆ ಸೇರಿದವನ್ನಾಗಿರುವುದರಿಂದ ಬ್ರಾಹ್ಮಣರು ಆತನ್ನು ದೇವಸ್ಥಾನಕ್ಕೆ ಪ್ರವೇಶಿಸಲು ತಡೆಯುತ್ತಾರೆ. ಜಾತಿ ತಾರತಾಮ್ಯವನ್ನು ಕಂಡ ತನಿಯ ನಾನು ತಂದಿರುವ ಹರಕೆ ನಿಮಗೆ ಆಗುತ್ತದೆ, ಆದರೆ ನಾನು ದೇವಸ್ಥಾನ ಪ್ರವೇಶಿಸುವುದು ಆಗುವುದಿಲ್ಲವೇ ಎಂದು ಅಲ್ಲಿನ ಬ್ರಾಹ್ಮಣರಿಗೆ ಪ್ರಶ್ನಿಸುತ್ತಾನೆ. ಆದರೆ ಬ್ರಾಹ್ಮಣರು ನೀನು ತಂದ ಹರಕೆಯನ್ನು ಹೊರಗೆಯಿಂದಲೇ ನೀಡು ಎಂದು ಹೇಳುತ್ತಾರೆ. ಇದಕ್ಕೆ ಕೋಪಗೊಂಡ ತನಿಯ ಅತ್ಯಂತ ಬಾರವಾದ ಕಂಚಿನ ಬಟ್ಟಿಯನ್ನು ಕದ್ರಿ ಮಂಜುನಾಥ ದೇವಸ್ಥಾನದ ಒಳಗೆ ಏಸೆಯುತ್ತಾನೆ ಇದನ್ನು ಕಂಡ ಬ್ರಾಹ್ಮಣರು ಆಶ್ಚರ್ಯ ಪಡುತ್ತಾರೆ ನಂತರ ತನಿಯ ಜೊತೆ ಕ್ಷಮೆಯನ್ನು ಕೇಳುತ್ತಾರೆ.
ಹೀಗೆ ನಂತರ ತನಿಯ ತೆರಳುವ ಸಮಯದಲ್ಲಿ ಉಪ್ಪಿನ ಕಾಯಿಗಾಗಿ ಉಪಯೋಗಿಸುವ ಹುಳಿ ಕಂಡು ತನ್ನ ತಾಯಿಗೆ ಹುಳಿ ಕಿತ್ತುಕೊಂಡಲು ಮರಕ್ಕೆ ಏರುತ್ತಾನೆ, ಈ ಸಮಯದಲ್ಲಿ ಆತನ ಪಾದವು ಮೈಸಂದ್ಯ ದೈವಸ್ಥಾನದ ಮೂಗುಳಿಗೆ ಇಟ್ಟಾಗ ತನಿಯ ಮಾಯವಾಗುತ್ತಾನೆ ಎಂಬ ಮಾತಿದೆ. ಆದರೆ ಕೆಲವರ ಪ್ರಕಾರ ಅತನನ್ನು ಅಲ್ಲಿನ ಬ್ರಹ್ಮಣರು ಕೊಂದರು ಎಂದು ಕೂಡ ಹೇಳುತ್ತಾರೆ. ಆದರೆ ಇದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ತುಳುನಾಡಿನ ಜನರಿಗೆ ಅವನು ಮಾಯ ಶಕ್ತಿಯಾಗಿ ಸ್ವಾಮಿ ಕೊರಗಜ್ಜನ ರೂಪವನ್ನು ಪಡೆದಿದ್ದಾನೆ ಎಂದು ನಂಬುತ್ತಾರೆ. ಅನೇಕರು ಕೊರಗಜ್ಜನನ್ನು ಪರಶಿವನ ಅವತಾರವೆಂದೇ ಹೇಳುತ್ತಾರೆ .
ಕುತ್ತಾರು ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು ಆ ಜಾಗವನ್ನು ಆಕ್ರಮಿಸಿರುತ್ತಾರೆ , ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ ನ್ಯಾಯ ವಾಗಿ ತಮ್ಮ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ದನದ ರಕ್ತವನ್ನು ಚೆಲ್ಲಿ ಅರಸು ದೇವತೆಗಳನ್ನು ಓಡಿಸುತ್ತಾನೆ. ಹೀಗೆ ನಂತರ ಕೊರಗಜ್ಜ ಕುತ್ತಾರುನಲ್ಲಿ ನೆಲೆಗೊಳ್ಳುತ್ತಾರೆ.
ಕುತ್ತಾರುನ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ರೀತಿಯ ದೀಪಗಳನ್ನು ಹಾಕುವಂತಿಲ್ಲ. ಬೆಂಕಿ ಕಡ್ಡಿಯನ್ನು ಸಹ ಹೊತ್ತಿಸಬಾರದೆಂಬ ನಿಯಮವಿದ್ದು ಆ ಪ್ರದೇಶ ಸಂಪೂರ್ಣ ಕತ್ತಲಿನಿಂದ ಕೂಡಿರುತ್ತದೆ . ಹಾಗಾಗಿಯೇ ರಾತ್ರಿಯ ಹೊತ್ತು ಆ ರಸ್ತೆಯಲ್ಲಿ ಬರುವ ಗಾಡಿಗಳು ಸಹ ತಮ್ಮ ವಾಹನದ ದೀಪವನ್ನು ಆರಿಸಿಯೇ ಪ್ರಯಾಣಿಸುತ್ತಾರೆ. ಒಂದು ವೇಳೆ ಈ ನಿಮಯವನ್ನು ಪಾಲಿಸದಿದ್ದರೆ ಕೆಡಕು ಉಂಟಾಗುವುದು ಎಂಬ ನಂಬಿಕೆ ಇಲ್ಲಿನ ಜನರದ್ದು.
ಕೊರಗಜ್ಜನನ್ನು ದೈವವೆಂದು ನಂಬಿ ತಮ್ಮ ಕಷ್ಟ ನಷ್ಟಗಳನ್ನು ತಾವು ಕಳೆದು ಕೊಂಡ ವಸ್ತುಗಳಿಗೆ ಇಲ್ಲವೇ ಯಾವುದೇ ಕಳ್ಳತನವಾದಾಗ ಜನರು ಇದೇ ಕೊರಗಜ್ಜನನ್ನು ಮನದಲ್ಲೇ ನೆನೆದು ಹರಕೆ ಕಟ್ಟಿಕೊಂಡರೆ ಅವರ ಹರಕೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಹಾಗೆ ಅವರ ಅಭೀಲಾಷೆ ಈಡೇರಿದಾಗ ಕೊರಗಜ್ಜನ ದೇವಾಲಯಗಳಿಗೆ ಹೋಗಿ. ಹರಕೆಯ ರೂಪದಲ್ಲಿ ಕೊರಗಜ್ಜನಿಗೆ ಪ್ರಿಯವಾದ ಮತ್ತು ಆತ ಸೇವಿಸುತ್ತಿದ್ದ ತಾಂಬೂಲ, ಬೀಡಿ, ಶೇಂದಿ, ಮಧ್ಯವನ್ನು ಆತನಿಗೆ ಶ್ರದ್ಧಾ ಭಕ್ತಿಗಳಿಂದ ಸಮರ್ಪಿಸುತ್ತಾರೆ. ಏನೇ ಇರಲಿ ಅವರ ಅವರ ನಂಬಿಕೆಗೆ ತಕ್ಕಂತೆ ಕೊರಗಜ್ಜ ಎಲ್ಲಾರ ಬೇಡಿಕೆಯನ್ನು ಈಡೇರಿಸುವ ಶಕ್ತಿ.
ಕವಿತಾ
ಆಳ್ವಾಸ್ ಕಾಲೇಜು ಮೂಡಬಿದ್ರಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ