ನವದೆಹಲಿ, ಜುಲೈ 23: ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 5 ರಷ್ಟು ಕಡಿಮೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಕಾರ್ಪೊರೇಟ್ ತೆರಿಗೆಯನ್ನು ಶೇ. 40ರಿಂದ ಶೇ. 35ಕ್ಕೆ ಇಳಿಸಲಾಗಿದೆ. ಇಡೀ ಭಾರತೀಯ ಸ್ಟಾರ್ಟಪ್ ಸಮುದಾಯಕ್ಕೆ ದುಸ್ವಪ್ನವಾಗಿದ್ದ ಏಂಜೆಲ್ ತೆರಿಗೆಯನ್ನು ರದ್ದುಪಡಿಸಲಾಗುತ್ತಿದೆ. ಕಂಪನಿ ಆಫ್ ಮಾರ್ಕೆಟ್ ವಹಿವಾಟುಗಳು ಮತ್ತು ಷೇರುಗಳ ವಿತರಣೆಯ ಮೂಲಕ ಸಂಗ್ರಹಿಸಿದ ಬಂಡವಾಳದ ಮೇಲೆ ಪಾವತಿಸಬೇಕಾದ ಈ ತೆರಿಗೆಯನ್ನು ಸ್ಟಾರ್ಟಪ್‌ಗಳನ್ನ ಉತ್ತೇಜಿಸುವ ಉದ್ದೇಶದಿಂದ ರದ್ದು ಮಾಡಲಾಗಿದೆ ಎಂದಿದ್ದಾರೆ.
ಇಲ್ಲಿ ಏಂಜೆಲ್ ತೆರಿಗೆ ಎಂದರೆ, ಲಿಸ್ಟ್ ಆಗಿಲ್ಲದ ಷೇರುಗಳನ್ನು ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಗಳಿಸಿದ ಲಾಭಕ್ಕೆ ವಿಧಿಸಲಾಗುವ ತೆರಿಗೆ.
ಹೂಡಿಕೆ ಮತ್ತು ಉದ್ಯೋಗವನ್ನು ಮುಕ್ತವಾಗಿ ಬೆಂಬಲಿಸಲು ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ಅಭಿವೃದ್ಧಿ ಅಗತ್ಯಗಳಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಸಲುವಾಗಿ, ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 40 ರಿಂದ 35 ಕ್ಕೆ ಇಳಿಸುವುದಾಗಿ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರದ ಬಹು ದೊಡ್ಡ ಘೋಷಣೆಯಾಗಿದೆ.
ಇದನ್ನೂ ಓದಿ: ಎಸ್ಟಿಟಿ, ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ದರಗಳ ಹೆಚ್ಚಳ; ಷೇರು ಹೂಡಿಕೆದಾರರಿಗೆ ಬಜೆಟ್ ಕಹಿ
ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಈಗ 50,000 ರೂ.ಗಳಿಂದ 75,000 ರೂ.ಗೆ ಹೆಚ್ಚಿಸಲಾಗಿದ್ದು, ಇದು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇರುವವರಿಗೆ ಮಾತ್ರ ಅನ್ವಯ ಆಗುತ್ತದೆ. ಹಾಗೆಯೇ, 12,000 ರೂವರೆಗಿನ ಕೆಲ ಟ್ಯಾಕ್ಸ್ ಸ್ಲ್ಯಾಬ್ ಮತ್ತು ದರಗಳನ್ನು ಬದಲಾಯಿಸಲಾಗಿದೆ.
– ದರ್ಶಿನಿ ತಿಪ್ಪಾರೆಡ್ಡಿ
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Tue, 23 July 24