Interim Budget 2024: ಮೊಬೈಲ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡುವ ಸಾಧ್ಯತೆ; ಆ್ಯಪಲ್​ನಂತಹ ಕಂಪನಿಗಳಿಗೆ ಅನುಕೂಲ

Import duty on Mobile components: ಹತ್ತಕ್ಕೂ ಹೆಚ್ಚು ಮೊಬೈಲ್ ಬಿಡಿಭಾಗಗಳಿಗೆ ಆಮದು ಸುಂಕ ಇಳಿಸಬೇಕೆಂದು ಮೊಬೈಲ್ ಉತ್ಪಾದನಾ ವಲಯದವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶೇ. 20ರವರೆಗೂ ಇರುವ ಆಮದು ಸುಂಕವನ್ನು ಇಳಿಸುವ ಕ್ರಮವನ್ನು ಮಧ್ಯಂತರ ಬಜೆಟ್​ನಲ್ಲಿ ಘೋಷಿಸಬಹುದು. ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.

Interim Budget 2024: ಮೊಬೈಲ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡುವ ಸಾಧ್ಯತೆ; ಆ್ಯಪಲ್​ನಂತಹ ಕಂಪನಿಗಳಿಗೆ ಅನುಕೂಲ
ಮ್ಯಾನುಫ್ಯಾಕ್ಚರಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jan 12, 2024 | 2:20 PM

ನವದೆಹಲಿ, ಜನವರಿ 12: ಮುಂದಿನ ತಿಂಗಳು ಮೊದಲ ತಾರೀಖಿನಂದು ಮಂಡನೆಯಾಗಲಿರುವ ಮಧ್ಯಂತರ ಬಜೆಟ್​ನಲ್ಲಿ (Interim budget 2024) ಆಮದು ಸುಂಕಗಳಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗೆ ಪುಷ್ಟಿ ಕೊಡಲು ಆಮದು ಸುಂಕ ಕಡಿಮೆ ಮಾಡಬಹುದು ಎನ್ನಲಾಗಿದೆ. ಹೈ ಎಂಡ್ ಮೊಬೈಲ್ ಫೋನ್​ಗಳ ಉತ್ಪಾದನೆಯಲ್ಲಿ (mobile manufacturing) ಬಳಸುವ ಪ್ರಮುಖ ಬಿಡಿಭಾಗಗಳಿಗೆ ಆಮದು ಸುಂಕದಲ್ಲಿ ಇಳಿಕೆ ಮಾಡಲು ಸರ್ಕಾರ ಯೋಜಿಸುತ್ತಿರುವ ಸುದ್ದಿ ಇದೆ. ಬಜೆಟ್​ನಲ್ಲಿ ಸುಂಕ ಇಳಿಕೆ ಪ್ರಕಟಿಸಬಹುದು ಎನ್ನಲಾಗಿದೆ. ಒಂದು ವೇಳೆ ಇದು ನಡೆದಲ್ಲಿ ಆ್ಯಪಲ್​ನಂತಹ ಕಂಪನಿಗಳಿಗೆ ಭಾರತದಲ್ಲಿ ಮೊಬೈಲ್ ತಯಾರಿಕೆಗೆ ಇನ್ನಷ್ಟು ಅನುಕೂಲವಾಗುವ ನಿರೀಕ್ಷೆ ಇದೆ.

ಹತ್ತಕ್ಕೂ ಹೆಚ್ಚು ಬಿಡಿಭಾಗಗಳಿಗೆ ಆಮದು ಸುಂಕ ಇಳಿಸಬೇಕೆಂದು ಮೊಬೈಲ್ ಉತ್ಪಾದನೆಯ ಉದ್ಯಮ ವಲಯದವರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಪ್ರಸ್ತಾವನೆಗಳನ್ನು ಪರಿಗಣಿಸುತ್ತಿದ್ದು, ಯಾವ್ಯಾವ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಬಹುದು ಎಂಬುದನ್ನು ಅವಲೋಕಿಸುತ್ತಿದೆ.

ಇದನ್ನೂ ಓದಿ: ಫೆ. 1ಕ್ಕೆ ಮಧ್ಯಂತರ ಬಜೆಟ್ ಮಂಡನೆ; ಜನವರಿ 31ರಿಂದ ಫೆಬ್ರುವರಿ 9ರವರೆಗೆ ಬಜೆಟ್ ಅಧಿವೇಶನ: ವರದಿ

ಮ್ಯಾನುಫ್ಯಾಕ್ಚರಿಂಗ್ ವಲಯದಲ್ಲಿ ಭಾರತ ಹೆಚ್ಚು ಗಮನ ಹರಿಸಲು ಶುರು ಮಾಡಿದ್ದು ಇತ್ತೀಚೆಗೆ. ಚೀನಾ ಎಲ್ಲರಿಗಿಂತ ಬಹಳ ಮುಂದಿದೆ. ಚೀನಾ ಈಗ ಅಕ್ಷರಶಃ ವಿಶ್ವದ ಫ್ಯಾಕ್ಟರಿಯಾಗಿದೆ. ವಿಯೆಟ್ನಾಂ, ಇಂಡೋನೇಷ್ಯಾ, ಫಿಲಿಪ್ಪೈನ್ಸ್ ಮೊದಲಾದ ದೇಶಗಳು ಉತ್ಪಾದನಾ ವಲಯದಲ್ಲಿ ಪ್ರಮುಖ ಪಾತ್ರಧಾರಿಗಳಾಗಿವೆ. ಈ ತೀವ್ರ ಪೈಪೋಟಿಯಲ್ಲಿ ಭಾರತ ಉಳಿಯಬೇಕಾದರೆ ಕೆಲ ಪ್ರಮುಖ ವಸ್ತುಗಳಿಗೆ ಆಮದು ಸುಂಕ ಇಳಿಸುವುದೂ ಒಳಗೊಂಡಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ಸದ್ಯ, ಕ್ಯಾಮರಾ ಮಾಡ್ಯೂಲ್, ಚಾರ್ಜರ್ ಸೇರಿದಂತೆ ವಿವಿಧ ಮೊಬೈಲ್ ಫೋನ್ ಬಿಡಿಭಾಗಗಳಿಗೆ ಭಾರತ ಶೇ. 20ರವರೆಗೆ ಆಮದು ಸುಂಕ ವಿಧಿಸುತ್ತದೆ. ಇದರಿಂದ ಮೊಬೈಲ್ ಉತ್ಪಾದನೆಯ ವೆಚ್ಚ ಸಹಜವಾಗಿ ಹೆಚ್ಚುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ಮೊಬೈಲ್ ಫೋನ್​ಗಳ ರಫ್ತು ಹೆಚ್ಚು ಮಾಡಲು ಕಷ್ಟವಾಗಬಹುದು ಎಂದು ಉದ್ಯಮ ಪರಿಣಿತರು ಎಚ್ಚರಿಸುತ್ತಾರೆ.

ಇದನ್ನೂ ಓದಿ: Union Budget: ಮುಂಬರುವ ಮಧ್ಯಂತರ ಬಜೆಟ್​ನಲ್ಲಿ ಟ್ಯಾಕ್ಸ್ ರಿಬೇಟ್ 7.5 ಲಕ್ಷ ರೂಗೆ ಹೆಚ್ಚಿಸುವ ಸಾಧ್ಯತೆ ಇಲ್ಲ: ವರದಿ

ಭಾರತದಲ್ಲಿ ಆ್ಯಪಲ್ ಮಾತ್ರವಲ್ಲ, ದಕ್ಷಿಣ ಕೊರಿಯಾದ ಸ್ಯಾಮ್ಸುಂಗ್ ಮತ್ತು ಚೀನಾದ ಶಿಯೋಮಿ ಮೊಬೈಲ್ ಸೆಟ್​​ಗಳೂ ಭಾರತದಲ್ಲಿ ತಯಾರಾಗುತ್ತಿವೆ. ಇಲ್ಲಿ ನಿರ್ಮಿಸಲಾಗುವ ಫೋನ್​ಗಳನ್ನು ಭಾರತದ ಮಾರುಕಟ್ಟೆಗೆ ಮಾತ್ರವಲ್ಲ ಬೇರೆ ಬೇರೆ ದೇಶಗಳಿಗೂ ಈ ಕಂಪನಿಗಳು ರಫ್ತು ಮಾಡುತ್ತವೆ. 2022-23ರಲ್ಲಿ ಭಾರತದಿಂದ ರಫ್ತಾದ ಮೊಬೈಲ್ ಫೋನ್​ಗಳ ಮೌಲ್ಯ 11.1 ಬಿಲಿಯನ್ ಡಾಲರ್ ಇದೆ. 2023-24ರಲ್ಲಿ ಇದು 15 ಬಿಲಿಯನ್ ಡಾಲರ್ ಮುಟ್ಟಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Fri, 12 January 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್