ನವದೆಹಲಿ, ಜೂನ್ 17: ಮುಂದಿನ ತಿಂಗಳು ಪ್ರಸ್ತುತಪಡಿಸಲಾಗುವ ಹೊಸ ಸರ್ಕಾರದ ಮೊದಲ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಖುಷಿಯಾಗುವ ಕೆಲ ಅಂಶಗಳು ಅಡಕವಾಗಿರಬಹುದು ಎಂದು ಹಲವರು ಅಂದಾಜು ಮಾಡುತ್ತಿದ್ದಾರೆ. ಆದಾಯ ತೆರಿಗೆಯ ಸ್ಲ್ಯಾಬ್ನಲ್ಲಿ ಈ ಬಾರಿ ಬದಲಾವಣೆ ಆಗುವ ನಿರೀಕ್ಷೆ ಇದೆ. ಭಾರತೀಯ ಉದ್ಯಮ ಮಹಾಒಕ್ಕೂಟದ (CII) ನೂತನ ಅಧ್ಯಕ್ಷರಾಗಿರುವ ಸಂಜೀವ್ ಪುರಿ (Sanjiv Puri) ಪ್ರಕಾರ ಇನ್ಕಮ್ ಟ್ಯಾಕ್ಸ್ನ ಕೆಳ ಸ್ತರದ ಸ್ಲ್ಯಾಬ್ನಲ್ಲಿ ಟ್ಯಾಕ್ಸ್ ರಿಲೀಫ್ ಕೊಡಬಹುದು.
ಇದನ್ನೂ ಓದಿ: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ
ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಹಿರಿಯ ನಾಗರಿಕರ ಐದು ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ.
ಐಟಿಸಿ ಸಂಸ್ಥೆಯ ಛೇರ್ಮನ್ ಮತ್ತು ಎಂಡಿ ಕೂಡ ಆಗಿರುವ ಸಂಜೀವ್ ಪುರಿ ಅವರು ಸರ್ಕಾರದಿಂದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕೆನ್ನವುದು ಉದ್ಯಮದ ಅಪೇಕ್ಷೆ ಎನ್ನುವ ಅಭಿಪ್ರಾಯಪಟ್ಟಿದ್ದಾರೆ.
‘ತೆರಿಗೆ ವ್ಯವಸ್ಥೆಯ ಸರಳೀಕರಣದ ಪ್ರಕ್ರಿಯೆ ಮುಂದುವರಿಯಬೇಕೆಂಬುದು ನಮ್ಮ ಸಲಹೆ. ಕ್ಯಾಟಿಪಲ್ ಗೇಯ್ನ್ ಟ್ಯಾಕ್ಸ್ನಲ್ಲೂ ಬದಲಾವಣೆ ಮಾಡಬೇಕೆನ್ನುವ ನಿರೀಕ್ಷೆ ಇದೆ. ಟಿಡಿಎಸ್ ಅನ್ವಯ ಮಾಡುವ ಪ್ರಕ್ರಿಯೆ ಕೂಡ ಸರಳಗೊಳ್ಳಬೇಕು,’ ಎಂದು ಪುರಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Union Budget 2024: ಮೋದಿ 3.0 ಸರ್ಕಾರದ ಚೊಚ್ಚಲ ಬಜೆಟ್ ಯಾವಾಗ? ಇಲ್ಲಿದೆ ಡೀಟೇಲ್ಸ್
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಐಐ ಅಧ್ಯಕ್ಷ ಸಂಜೀವ್ ಪುರಿ ಅವರು ಮಾತನಾಡುತ್ತಾ, ಈ ಬಾರಿ ಉತ್ತಮ ಮುಂಗಾರು ಮಳೆ ಇರುವುದರಿಂದ ಬೆಲೆ ಏರಿಕೆ ಸಮಸ್ಯೆ ಹೆಚ್ಚು ಕಾಡದು ಎಂದಿದ್ದಾರೆ. ಅವರ ಪ್ರಕಾರ ಈ ವರ್ಷ ಹಣದುಬ್ಬರ ಶೇ. 4.5ರ ಆಸುಪಾಸಿನಷ್ಟು ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ