Coal Mining Auction: ಕಲ್ಲಿದ್ದಲು ಗಣಿ ಹರಾಜಿನ ಮೂರು ಹಂತಗಳಲ್ಲಿ 38 ಬಿಡ್ ಸ್ವೀಕಾರ
ಆನ್‌ಲೈನ್ ಹಾಗೂ ಆಫ್‌ಲೈನ್ ಸೇರಿದಂತೆ 38 ಬಿಡ್‌ಗಳನ್ನು ಕಲ್ಲಿದ್ದಲು ಹರಾಜಿಗಾಗಿ ಸಲ್ಲಿಕೆ ಮಾಡಲಾಗಿದೆ. ಆ ಬಗ್ಗೆ ವಿವರಗಳು ಈ ಲೇಖನದಲ್ಲಿದೆ.
ಕಲ್ಲಿದ್ದಲು (Coal) ಮಾರಾಟಕ್ಕಾಗಿ 122 ಕಲ್ಲಿದ್ದಲು/ಲಿಗ್ನೈಟ್ ಗಣಿಗಳ ಹರಾಜು ಪ್ರಕ್ರಿಯೆಯನ್ನು ನಾಮನಿರ್ದೇಶಿತ ಪ್ರಾಧಿಕಾರ, ಕಲ್ಲಿದ್ದಲು ಸಚಿವಾಲಯವು ಮಾರ್ಚ್ 30, 2022ರಂದು ಪ್ರಾರಂಭಿಸಿತು. 10 ಗಣಿಗಳನ್ನು ಹೊರತುಪಡಿಸಿ (ಪರ್ಬತ್‌ಪುರ ಕೇಂದ್ರ ಕಲ್ಲಿದ್ದಲು ಗಣಿ ಮತ್ತು 9 ಸಂಖ್ಯೆ. ಲಿಗ್ನೈಟ್ ಗಣಿಗಳು) ತಾಂತ್ರಿಕ ಬಿಡ್ ಸಲ್ಲಿಸುವ ಕೊನೆಯ ದಿನಾಂಕ ಜೂನ್ 27, 2022 ಆಗಿತ್ತು. ಹರಾಜು ಪ್ರಕ್ರಿಯೆಯ ಭಾಗವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಬಿಡ್ ದಾಖಲೆಗಳನ್ನು ಒಳಗೊಂಡಿರುವ ತಾಂತ್ರಿಕ ಬಿಡ್‌ಗಳನ್ನು ಜೂನ್ 28, 2022ರಂದು ಬೆಳಗ್ಗೆ 10 ಗಂಟೆಗೆ ನವದೆಹಲಿಯಲ್ಲಿ ಆಸಕ್ತ ಬಿಡ್‌ದಾರರ ಸಮ್ಮುಖದಲ್ಲಿ ತೆರೆಯಲಾಯಿತು.
ಆನ್‌ಲೈನ್ ಬಿಡ್‌ಗಳನ್ನು ಡೀಕ್ರಿಪ್ಟ್ ಮಾಡಲಾಗಿದೆ ಮತ್ತು ಬಿಡ್‌ದಾರರ ಸಮ್ಮುಖದಲ್ಲಿ ವಿದ್ಯುನ್ಮಾನವಾಗಿ ತೆರೆಯಲಾಯಿತು. ಆ ನಂತರ, ಬಿಡ್‌ದಾರರ ಸಮ್ಮುಖದಲ್ಲಿ ಆಫ್‌ಲೈನ್ ಬಿಡ್ ದಾಖಲೆಗಳನ್ನು ಹೊಂದಿರುವ ಮುಚ್ಚಿದ ಲಕೋಟೆಗಳನ್ನು ಸಹ ತೆರೆಯಲಾಯಿತು. ಬಿಡ್ದಾರರಿಗೆ ಸಂಪೂರ್ಣ ಪ್ರಕ್ರಿಯೆಯನ್ನು ಪರದೆಯ ಮೇಲೆ ಪ್ರದರ್ಶಿಸಲಾಯಿತು.
ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಮೂರು ಹಂತಗಳ ಅಡಿಯಲ್ಲಿ ಒಟ್ಟು 38 ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಹರಾಜಿನ ಐದನೇ ಹಂತದ ಅಡಿಯಲ್ಲಿ 15 ಕಲ್ಲಿದ್ದಲು ಗಣಿಗಳ ವಿರುದ್ಧ ಒಟ್ಟು 28 ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಅಲ್ಲಿ 8 ಕಲ್ಲಿದ್ದಲು ಗಣಿಗಳಿಗೆ 2 ಅಥವಾ ಹೆಚ್ಚಿನ ಬಿಡ್‌ಗಳನ್ನು ಸ್ವೀಕರಿಸಲಾಗಿದೆ.
ಮೂರನೇ ಕಂತಿನ 2ನೇ ಪ್ರಯತ್ನದ ಅಡಿಯಲ್ಲಿ ಒಟ್ಟು 9 ಕಲ್ಲಿದ್ದಲು ಗಣಿಗಳನ್ನು ಹರಾಜಿಗೆ ಇಡಲಾಗಿದ್ದು, 6 ಕಲ್ಲಿದ್ದಲು ಗಣಿಗಳ ವಿರುದ್ಧ 6 ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ನಾಲ್ಕನೇ ಕಂತಿನ 2ನೇ ಪ್ರಯತ್ನದ ಅಡಿಯಲ್ಲಿ ಒಟ್ಟು 4 ಕಲ್ಲಿದ್ದಲು ಗಣಿಗಳನ್ನು ಹರಾಜಿಗೆ ಇಡಲಾಗಿದ್ದು, 3 ಕಲ್ಲಿದ್ದಲು ಗಣಿಗಳ ವಿರುದ್ಧ 4 ಬಿಡ್‌ಗಳನ್ನು ಸ್ವೀಕರಿಸಲಾಗಿದೆ.
ಇದನ್ನೂ ಓದಿ: Coking Coal Production: ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಯೋಜನೆ ಸಿದ್ಧ, ಏನಿದರ ವಿವರ?
Published On - 6:18 pm, Tue, 28 June 22