Bank Holidays: ನವೆಂಬರ್ 21ರಿಂದ 28ರ ಮಧ್ಯೆ 5 ದಿನ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್ ರಜಾ
ನವೆಂಬರ್ 21ರಿಂದ 28ರ ಮಧ್ಯೆ 5 ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜಾ ಇದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ನವೆಂಬರ್ 21ರಿಂದ ಪ್ರಾರಂಭ ಆಗುವ ಮುಂಬರುವ ವಾರದಲ್ಲಿ, ಅಂದರೆ ಭಾನುವಾರದಿಂದ ಆರಂಭವಾಗುವಂತೆ ದೇಶದಾದ್ಯಂತ ಖಾಸಗಿ ಮತ್ತು ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳು ಏಳು ದಿನಗಳಲ್ಲಿ ಐದು ದಿನಗಳು ಮುಚ್ಚಿರುತ್ತವೆ. ಈ ತಿಂಗಳ ಆರಂಭದಲ್ಲಿ ದೀಪಾವಳಿ, ಭಾಯಿ ದೂಜ್, ಛತ್ ಪೂಜೆ ಮತ್ತು ಗುರುನಾನಕ್ ಜಯಂತಿಯಂಥದ್ದರ ಮಧ್ಯೆ 12 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿದ್ದವು. ಇದರರ್ಥ ನವೆಂಬರ್ ತಿಂಗಳಿನಲ್ಲಿ ಭಾರತದಾದ್ಯಂತ 17 ದಿನಗಳವರೆಗೆ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಮುಂದಿನ ವಾರದಲ್ಲಿ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಲು ಯೋಜಿಸಿದ್ದರೆ, ಯಾವುದೇ ವ್ಯಾಜ್ಯವನ್ನು ತಪ್ಪಿಸಲು ಮತ್ತು ಕೆಲಸವನ್ನು ಸುಗಮವಾಗಿ ನಿರ್ವಹಿಸಲು ಈ ಬ್ಯಾಂಕ್ ರಜಾದಿನಗಳನ್ನು ಗಮನಿಸಿ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಆರ್‌ಬಿಐ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ ಬ್ಯಾಂಕ್ ರಜಾದಿನಗಳು ಜಾರಿಗೆ ಬರುತ್ತವೆ. ಆದರೂ ಕೆಲವು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ, ಈ ರಜಾದಿನಗಳನ್ನು ಸಾಮಾನ್ಯವಾಗಿ ರಾಜ್ಯವಾರು ರೀತಿಯಲ್ಲಿ ಅನುಸರಿಸಲಾಗುತ್ತದೆ. ಆಯಾ ರಾಜ್ಯಗಳಲ್ಲಿನ ಬ್ಯಾಂಕ್‌ಗಳ ಕೆಲವು ಶಾಖೆಗಳು ಮಾತ್ರ ನಿರ್ದಿಷ್ಟ ದಿನದಲ್ಲಿ ಮುಚ್ಚಿರುತ್ತವೆ. ಉದಾಹರಣೆಗೆ, ಕನಕದಾಸ ಜಯಂತಿಯಂದು ಬೆಂಗಳೂರಿನಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಆದರೆ ದೇಶದ ಇತರ ಭಾಗಗಳಲ್ಲಿ ಸೇವೆಗಳು ಲಭ್ಯವಿರುತ್ತವೆ. ಇದಕ್ಕಾಗಿ, ಬ್ಯಾಂಕ್ ಗ್ರಾಹಕರು ಸಾಮಾನ್ಯವಾಗಿ ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ತಿಳಿದುಕೊಳ್ಳಲು ಹತ್ತಿರದ ಶಾಖೆಗೆ ಭೇಟಿ ನೀಡಲು ತಿಳಿಸಲಾಗುತ್ತದೆ.
ಬ್ಯಾಂಕ್‌ಗಳಿಗೆ ಮೂರು ಬಗೆಯಲ್ಲಿ ರಜಾ ಸಿಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಅವುಗಳೆಂದರೆ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ರಜಾದಿನಗಳು ಮತ್ತು ಬ್ಯಾಂಕ್‌ಗಳ ಕ್ಲೋಸಿಂಗ್ ಆಫ್ ಅಕೌಂಟ್ಸ್. ಈ ಅಧಿಸೂಚಿತ ದಿನಗಳಲ್ಲಿ ದೇಶದಾದ್ಯಂತ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಬ್ಯಾಂಕ್‌ಗಳನ್ನು ಒಳಗೊಂಡಂತೆ ಎಲ್ಲ ಬ್ಯಾಂಕ್ ಮುಚ್ಚಿರುತ್ತವೆ.
ಬ್ಯಾಂಕ್‌ಗಳ ಎಲ್ಲ ಶಾಖೆಗಳು ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15), ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್ಮಸ್ಗೆ (ಡಿಸೆಂಬರ್ 25) ಮುಚ್ಚಿರುತ್ತವೆ. ದೀಪಾವಳಿ, ಕ್ರಿಸ್‌ಮಸ್, ಈದ್, ಗುರುನಾನಕ್ ಜಯಂತಿ, ಗುಡ್ ಫ್ರೈಡೇ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಆರ್‌ಬಿಐ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಎಲ್ಲ ಬ್ಯಾಂಕ್‌ಗಳಿಗೆ ಭಾನುವಾರವನ್ನು ಕಡ್ಡಾಯ ರಜಾ ಎಂದು ಮಾಡಿದೆ. ಆದರೂ ರಾಜ್ಯವಾರು ರಜಾದಿನಗಳು ಬದಲಾಗುವುದರಿಂದ ಈ ದಿನಗಳಲ್ಲಿ ರಜಾ ನಿರ್ದಿಷ್ಟವಾಗಿ ಇರುತ್ತದೆ.
ನವೆಂಬರ್ 21ರಿಂದ ಪ್ರಾರಂಭವಾಗುವ ವಾರದಲ್ಲಿ ಆರ್‌ಬಿಐ ಪಟ್ಟಿಯ ಪ್ರಕಾರ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ: ನವೆಂಬರ್ 22: ಕನಕದಾಸ ಜಯಂತಿ – ಬೆಂಗಳೂರು
ನವೆಂಬರ್ 23: ಸೆಂಗ್ ಕುಟ್ಸ್ನೆಮ್ – ಶಿಲ್ಲಾಂಗ್
ನವೆಂಬರ್ 21: ಭಾನುವಾರ
ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ
ನವೆಂಬರ್ 28: ಭಾನುವಾರ
ಆದ್ದರಿಂದ, ನೀವು ಬ್ಯಾಂಕ್ ಸಂಬಂಧಿತ ಕೆಲಸ ಬಾಕಿಯಿದ್ದರೆ ಅಥವಾ ಮುಂಬರುವ ವಾರದಲ್ಲಿ ಹಬ್ಬದ ಸಮಯದಲ್ಲಿ ಹಣವನ್ನು ತೆಗೆದುಕೊಳ್ಳಲು ನೀವು ಬಯಸಿದರೆ, ನಿಮ್ಮ ರಾಜ್ಯದ ರಜಾದಿನಗಳ ಪಟ್ಟಿಯನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಲು ನಿಮಗೆ ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಎಲ್ಲಾ ರಜೆಗಳ ಹೊರತಾಗಿಯೂ, ಈ ದಿನಗಳಲ್ಲಿ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: RBI Ombudsman: ಆರ್ಬಿಐನಿಂದ ಹೊಸ ಒಂಬುಡ್ಸ್ಮನ್ ಯೋಜನೆ ಶುರು; ದೂರನ್ನು ಹೀಗೆ ದಾಖಲಿಸಿ