AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DA Hike: ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್; ಡಿಎ ಬಾಕಿಯ ನಿರೀಕ್ಷೆಯಲ್ಲಿದ್ದವರಿಗೆ ತಣ್ಣೀರೆರಚಲಿದೆಯಾ ಸರ್ಕಾರ?

Government Not To Release DA Arrears: ಮೂರು ಕಂತುಗಳ ಡಿಎ ಬಾಕಿ ಹಣವನ್ನು ಕೇಂದ್ರ ಸರ್ಕಾರ ಈ ಬಾರಿಯೂ ಬಿಡುಗಡೆ ಮಾಡುತ್ತಿಲ್ಲ. ಡಿಎ ಅರಿಯರ್ಸ್ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಈ ಬಾರಿ ನಿರಾಸೆ ಕಾದಿದೆ. ಆದರೆ, ಡಿಎ ಹೆಚ್ಚಳಕ್ಕೆ ಸರ್ಕಾರ ತೀರ್ಮಾನ ಮಾಡಬಹುದು ಎನ್ನುವ ಪಾಸಿಟಿವ್ ಸುದ್ದಿಯೂ ಇದೆ.

DA Hike: ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್; ಡಿಎ ಬಾಕಿಯ ನಿರೀಕ್ಷೆಯಲ್ಲಿದ್ದವರಿಗೆ ತಣ್ಣೀರೆರಚಲಿದೆಯಾ ಸರ್ಕಾರ?
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 13, 2023 | 6:15 PM

Share

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಮಿಶ್ರ ಅನುಭವದ ಸುದ್ದಿಗಳನ್ನು ನೀಡುವ ಸಾಧ್ಯತೆ ಇದೆ. ಒಂದು ಕಡೆ ಸರ್ಕಾರಿ ನೌಕರರ ಡಿಎ ಮತ್ತೆ ಹೆಚ್ಚಿಸುವ ಬೇಡಿಕೆಯನ್ನು (DA Hike) ಸರ್ಕಾರ ಈಡೇರಿಸುವ ನಿರೀಕ್ಷೆ ಇದೆ. ಇನ್ನೊಂದು ಕಡೆ ಹಿಂದಿನ ಡಿಎ ಬಾಕಿ ಮೊತ್ತವನ್ನು (DA Arrears) ಈಗ ಬಿಡುಗಡೆ ಮಾಡಬೇಕೆಂಬ ಬೇಡಿಕೆಗೆ ಸರ್ಕಾರ ನಕಾರ ಹೇಳಿದೆ. 18 ತಿಂಗಳ ತುಟ್ಟಿ ಭತ್ಯೆಯ ಬಾಕಿ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಲೋಕಸಭೆಯಲ್ಲಿ ಕೇಂದ್ರ ಸಚಿವರು ಸ್ಪಷ್ಟಪಡಿಸಿರುವುದು ಕೋಟ್ಯಂತರ ಸರ್ಕಾರಿ ನೌಕರರಿಗೆ ನಿರಾಸೆ ತಂದಿದೆ.

ಮಾರ್ಚ್ 13, ಸೋಮವಾರದಂದು ಡಿಎ ಅರಿಯರ್ಸ್ ಈ ಬಾರಿ ಸಿಗಲಿದೆಯಾ ಎಂದು ಲೋಕಸಭೆಯಲ್ಲಿ ಪ್ರಶ್ನೆ ಮಾಡಲಾಯಿತು. ಈ ಬಗ್ಗೆ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ವಿತ್ತೀಯ ಕೊರತೆ ಕಾರಣದಿಂದ ಈ ಬಾರಿ ಡಿಎ ಬಾಕಿ ಹಣ ಕೊಡಲು ಆಗುವುದಿಲ್ಲ ಎಂದಿದ್ದಾರೆ.

ಕೋವಿಡ್​ನಿಂದ ಆರ್ಥಿಕವಾಗಿ ಆಘಾತವಾದ ಹಿನ್ನೆಲೆಯಲ್ಲಿ ಮತ್ತು ಸರ್ಕಾರದ ಹಣಕಾಸು ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್​ನ 3 ಕಂತುಗಳ ಬಿಡುಗಡೆ ಸ್ಥಗಿತಗೊಳಿಸಲಾಗಿತ್ತು. ಕೋವಿಡ್​ನ ಪರಿಣಾಮ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಮಾಡಲಾದ ವೆಚ್ಚಗಳ ಪರಿಣಾಮ 2020-21ರ ಹಣಕಾಸು ವರ್ಷವನ್ನೂ ಮೀರಿ ಹೋಗಿದೆ. ಆದ್ದರಿಂದ ಡಿಎ ಮತ್ತು ಡಿಆರ್​ನ ಬಾಕಿ ಹಣವನ್ನು ಸಂದಾಯ ಮಾಡಲು ಈಗ ಪರಿಸ್ಥಿತಿ ಅನುಕೂಲವಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ7th Pay Commission: ಶೀಘ್ರದಲ್ಲೇ ಡಿಎ ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ; ಏನಿದು ಫಿಟ್ಮೆಂಟ್ ಏರಿಕೆ?

ಎಫ್​ಆರ್​ಬಿಎಂ ಕಾಯ್ದೆಯ ನಿರೀಕ್ಷೆಗೆ ವ್ಯತಿರಿಕ್ತವಾಗಿ ವಿತ್ತೀಯ ಕೊರತೆ ದ್ವಿಗುಣ ಸ್ಥಿತಿಯಲ್ಲಿ ಇದೆ ಎಂದೂ ಅವರು ಹತಾಶೆ ತೋಡಿಕೊಂಡಿದ್ದಾರೆ.

2020 ಜನವರಿ 1, 2020 ಜುಲೈ 1 ಮತ್ತು 2021 ಜನವರಿ 1ರಂದು ಡಿಎ ಮತ್ತು ಡಿಆರ್ ಏರಿಕೆ ಮಾಡಲಾಗಿತ್ತು. ಆ ಮೂರು ಕಂತುಗಳ ಮೊತ್ತವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಸರ್ಕಾರ ಉಳಿಸಿಕೊಂಡಿರುವ ಡಿಎ ಡಿಆರ್ ಬಾಕಿ ಹಣ ಒಟ್ಟು 34,402.32 ಕೋಟಿ ರೂ ಇದೆ.

ಇದನ್ನೂ ಓದಿInspiring: ಟಿಸಿಎಸ್​ನಲ್ಲಿ ಇಂಟರ್ನ್ ಆಗಿದ್ದ ರೈತನ ಮಗನ ಸಂಬಳ ಈಗ 109 ಕೋಟಿ; ದಂಗುಬಡಿಸುತ್ತದೆ ಚಂದ್ರಶೇಖರನ್ ವೃತ್ತಿಜೀವನ

ಡಿಎ ಹೆಚ್ಚಳ

ಇದೇ ವೇಳೆ, ಕೇಂದ್ರ ಸರ್ಕಾರಿ ನೌಕರರಿಗೆ ಶೇ. 38ರಷ್ಟು ಇರುವ ಡಿಎ ಅನ್ನು ಶೇ. 4ರಷ್ಟು ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿರುವ ಸಮಧಾನಕರ ಸುದ್ದಿ ಇದೆ. ಡಿಆರ್ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಬಹುದು. ಆದರೆ, ಇನ್ನೂ ಅಧಿಕೃತವಾಗಿ ಇದು ದೃಢಪಟ್ಟಿಲ್ಲ. ಫಿಟ್ಮೆಂಟ್ ಫ್ಯಾಕ್ಟರ್ ಅನ್ನೂ ಈ ಬಾರಿ ಏರಿಸುವ ನಿರೀಕ್ಷೆ ಇದೆ. ಈ ತಿಂಗಳ ಅಂತ್ಯದ ವೇಳೆಗೆ ತೀರ್ಮಾನ ಆಗಬಹುದು.

ಡಿಎ ಅಥವಾ ತುಟ್ಟಿ ಭತ್ಯೆಯು ಸರ್ಕಾರಿ ನೌಕರರಿಗೆ ನೀಡುವ ಧನಸಹಾಯವಾಗಿದೆ. ಡಿಆರ್ ಅಥವಾ ಡಿಯರ್ನೆಸ್ ರಿಲೀಫ್ ಎಂಬುದು ನಿವೃತ್ತ ಸರ್ಕಾರಿ ನೌಕರರ ಪಿಂಚಣಿಗೆ ಅನ್ವಯ ಆಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Mon, 13 March 23

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?