Aadhaar Card Update: ಆನ್​ಲೈನ್​ನಲ್ಲಿ ಆಧಾರ್ ದಾಖಲೆ ಅಪ್​ಡೇಶನ್; 3 ತಿಂಗಳು ಶುಲ್ಕ ಇಲ್ಲ

Free Aadhaar Document Updation: ಆಧಾರ್ ದಾಖಲೆ ಅಪ್​ಡೇಟ್ ಮಾಡುವುದಿದ್ದರೆ ಆನ್​ಲೈನ್​ನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಮಾಡಬಹುದು. ಜೂನ್ 14ರವರೆಗೆ 3 ತಿಂಗಳ ಕಾಲ ಯಾವುದೇ ಶುಲ್ಕವಿಲ್ಲದೇ ಪೋರ್ಟಲ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಲು ಅವಕಾಶ ಕೊಡಲಾಗಿದೆ.

Aadhaar Card Update: ಆನ್​ಲೈನ್​ನಲ್ಲಿ ಆಧಾರ್ ದಾಖಲೆ ಅಪ್​ಡೇಶನ್; 3 ತಿಂಗಳು ಶುಲ್ಕ ಇಲ್ಲ
ಆಧಾರ್ ಅಪ್​ಡೇಟ್

Updated on: Mar 16, 2023 | 2:54 PM

ನವದೆಹಲಿ: ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿಯನ್ನು ಅಪ್​ಡೇಟ್ ಮಾಡಬೇಕೆಂದರೆ ಅಧಾರ್ ಕೇಂದ್ರಕ್ಕೆ ಹೋಗಿ ಇಂತಿಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದೀಗ ಅನ್​ಲೈನ್​ನಲ್ಲೇ ಆಧಾರ್ ಡಾಕ್ಯುಮೆಂಟ್ ಅಪ್​ಡೇಟ್ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಆದರೆ, ಮೈ ಆಧಾರ್ ಪೋರ್ಟಲ್​ನಲ್ಲಿ ಮೂರು ತಿಂಗಳವರೆಗೂ ಮಾತ್ರ ಈ ಸೇವೆ ಲಭ್ಯ ಇರುತ್ತದೆ. ಇದಕ್ಕೆ ಯಾವ ಶುಲ್ಕವೂ ಇರುವುದಿಲ್ಲ. 2023 ಮಾರ್ಚ್ 15ರಿಂದ 2023 ಜೂನ್ 14ರವರೆಗೆ ಮೈ ಆಧಾರ್ ಪೋರ್ಟಲ್​ನಲ್ಲಿ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್​ಡೇಟ್ ಮಾಡಬಹುದು.

ಇದರ ಜೊತೆಗೆ ಮಾಮೂಲಿಯಾಗಿ ಆಧಾರ್ ಕೇಂದ್ರಗಳಿಗೆ ಹೋಗಿಯೂ ಆಧಾರ್ ಮಾಹಿತಿ ಅಪ್​ಡೇಟ್ ಮಾಡುವ ಕ್ರಮ ಮುಂದುವರಿಯುತ್ತದೆ. ಆಧಾರ್ ಕೇಂದ್ರದಲ್ಲಿ ಹಿಂದಿನಂತೆ 50 ರುಪಾಯಿ ಶುಲ್ಕ ಕೊಡಬೇಕಾಗುತ್ತದೆ. ಈ ಬಗ್ಗೆ ಆಧಾರ್ ನಿರ್ವಹಣೆ ನೋಡಿಕೊಳ್ಳುತ್ತಿರುವ ನೋಡಲ್ ಏಜೆನ್ಸಿಯ ಸ್ಪಷ್ಟನೆಯೊಂದಿಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿAadhaar Limitation: ಆಧಾರ್ ಕಾರ್ಡ್​ನಲ್ಲಿರುವ ಹೆಸರು, ವಿಳಾಸ ಇತ್ಯಾದಿ ಮಾಹಿತಿ ಎಷ್ಟು ಬಾರಿ ಬದಲಿಸಬಹುದು?

ಆಧಾರ್ ದಾಖಲೆ ಅಪ್​ಡೇಟ್ ಯಾಕೆ ಮಾಡಬೇಕು?

2022ರ ನವೆಂಬರ್ 9ರಂದು ಹೊರಡಿಸಲಾದ ಅಧಿಸೂಚನೆ ಪ್ರಕಾರ ಆಧಾರ್​ಗೆ ನೊಂದಾಯಿತಗೊಂಡು ಪ್ರತೀ 10 ವರ್ಷಕ್ಕೊಮ್ಮೆ ದಾಖಲೆಗಳನ್ನು ಅಪ್​ಡೇಟ್ ಮಾಡಬೇಕು ಎಂದಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಮತ್ತೊಮ್ಮೆ ಒದಗಿಸಬೇಕು ಎಂದು ತಿಳಿಸಲಾಗಿದೆ. ಆಧಾರ್​ನಲ್ಲಿ ವಂಚನೆ ಸಾಧ್ಯತೆಯನ್ನು ತಡೆಯಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಆನ್​ಲೈನ್​ನಲ್ಲಿ ಆಧಾರ್ ದಾಖಲೆ ಅಪ್​ಡೇಟ್ ಮಾಡುವುದು ಹೇಗೆ?

ನೀವು ಆಧಾರ್ ಕೇಂದ್ರಕ್ಕೆ ಹೋಗದೇ ಆನ್​ಲೈನ್​ನಲ್ಲೇ ಆಧಾರ್ ದಾಖಲೆಗಳನ್ನು ಅಪ್​ಡೇಟ್ ಮಾಡಬೇಕೆಂದರೆ ಮೈ ಆಧಾರ್ ಪೋರ್ಟಲ್​ಗೆ ಹೋಗಬೇಕಾಗುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ಯೂಸರ್ ನೇಮ್ ಆಗಿರುತ್ತದೆ. ಆಧಾರ್ ಜೊತೆಗೆ ನೊಂದಾಯಿತವಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಅಂಕಿ ನಮೂದಿಸಿ ಮೈ ಆಧಾರ್ ಪೋರ್ಟಲ್​ಗೆ ಲಾಗಿನ್ ಆಗಬಹುದು.

ಇದನ್ನೂ ಓದಿPM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?

ಆನ್​ಲೈನ್​ನಲ್ಲಿ ಶುಲ್ಕವಿಲ್ಲದೇ ಆಧಾರ್ ಮಾಹಿತಿ ಅಪ್​ಡೇಟ್ ಮಾಡಲು ಅವಕಾಶ ಇರುವುದು ಮೈ ಆಧಾರ್ ಪೋರ್ಟಲ್​ನಲ್ಲಿ ಮಾತ್ರವೇ. 2023 ಮಾರ್ಚ್ 15ರಿಂದ 2023 ಜೂನ್ 14ರವರೆಗೆ ಮೂರು ತಿಂಗಳವರೆಗೆ ಈ ಅವಕಾಶ ಕಲ್ಪಿಸಲಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Thu, 16 March 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us