AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhar Card Update: ನಿಮ್ಮ ಆಧಾರ್ ಐಡಿ 10 ವರ್ಷಕ್ಕಿಂತ ಹಳೆಯದಾಗಿದ್ದರೆ ತಕ್ಷಣ ಈ ಕೆಲಸ ಮಾಡಿ

ನಿಮ್ಮ ಆಧಾರ್ ಕಾರ್ಡ್​​ನ್ನು ಬದಲಾವಣೆ ಮಾಡಲು ಅಥವಾ ನವೀಕರಿಸಲು ಕೇಂದ್ರ ಸರ್ಕಾರ ಒಂದು ಅವಕಾಶವನ್ನು ನೀಡಿದೆ. ನಿಮ್ಮ ಹತ್ತು ವರ್ಷಗಳ ಹಿಂದಿನ ಆಧಾರ್ ಕಾರ್ಡ್​ನಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನು ಕೂಡ ನೀಡಿದೆ.

Aadhar Card Update: ನಿಮ್ಮ ಆಧಾರ್ ಐಡಿ 10 ವರ್ಷಕ್ಕಿಂತ ಹಳೆಯದಾಗಿದ್ದರೆ ತಕ್ಷಣ ಈ ಕೆಲಸ ಮಾಡಿ
Aadhar Card Update
TV9 Web
| Edited By: |

Updated on:Oct 12, 2022 | 12:20 PM

Share

ನಿಮ್ಮ ಆಧಾರ್ ಕಾರ್ಡ್​​ನ್ನು ಬದಲಾವಣೆ ಮಾಡಲು ಅಥವಾ ನವೀಕರಿಸಲು ಕೇಂದ್ರ ಸರ್ಕಾರ ಒಂದು ಅವಕಾಶವನ್ನು ನೀಡಿದೆ. ನಿಮ್ಮ ಹತ್ತು ವರ್ಷಗಳ ಹಿಂದಿನ ಆಧಾರ್ ಕಾರ್ಡ್​ನಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಸೂಚನೆಯನ್ನು ಕೂಡ ನೀಡಿದೆ. ಈ ಹತ್ತು ವರ್ಷದಲ್ಲಿ ಅನೇಕ ಬದಲಾವಣೆಗಳು ಆಗಿರಬಹುದು, ಆಧಾರ್ ನವೀಕರಣ ಮಾಡಲು ತಕ್ಷಣ ನಿಮ್ಮ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್​ ಕಾರ್ಡ್​ನಲ್ಲಿ ನವೀಕರಣ ಮಾಡಿ. ಆಧಾರ್​ನಲ್ಲಿ ಕೆಲವೊಂದು ದಾಖಲೆಗಳನ್ನು ಅಥವಾ ಫೋನ್ ನಂಬರ್​ಗಳನ್ನು ಬದಲಾವಣೆ ಮಾಡಬೇಕಾಗುತ್ತದೆ ಅದಕ್ಕಾಗಿ ಆನ್‌ಲೈನ್ ಮತ್ತು ಆಧಾರ್ ಕೇಂದ್ರಗಳಲ್ಲಿ ನವೀಕರಣಗಳನ್ನು ಮಾಡಬಹುದು ಎಂದು ಯುಐಡಿಎಐ ಹೇಳಿದೆ.

ಯುಐಡಿಎಐ ಪ್ರಕಾರ, 10 ವರ್ಷಗಳ ಹಿಂದೆ ಆಧಾರ್ ಹೊಂದಿರುವವರು ತಮ್ಮ ದಾಖಲೆಗಳನ್ನು ನವೀಕರಿಸುವುದು ಉತ್ತಮ ಎಂದು ಹೇಳಿದೆ. UIDAI ಈ ನವೀಕರಣವು ಕಡ್ಡಾಯ ಎಂದು ತಿಳಿಸಿಲ್ಲ. ಆಧಾರ್ ಕೇಂದ್ರಗಳಲ್ಲಿ ಶುಲ್ಕವನ್ನು ಪಾವತಿಸಿದ ನಂತರ ಆಧಾರ್ ದಾಖಲೆ ಮತ್ತು ನಿವಾಸದ ಪುರಾವೆಗಳ ನವೀಕರಣವನ್ನು ಮಾಡಲಾಗುವುದು. ಈ ಸೌಲಭ್ಯವನ್ನು ಆಧಾರ್ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಇದನ್ನು ಮಾಡಿಕೊಳ್ಳಬಹುದು. ತಮ್ಮ ಗುರುತಿನ ದಾಖಲೆಗಳನ್ನು ಆಧಾರನಲ್ಲಿ ಅಪ್ಡೇಟ್ ಮಾಡಲು ಆಧಾರ್ ಐರಿಸ್, ಫಿಂಗರ್‌ಪ್ರಿಂಟ್ ಮತ್ತು ಫೋಟೋಗಳನ್ನು ಬಳಸುತ್ತದೆ.

ಕಳೆದ ಹತ್ತು ವರ್ಷಗಳಿಂದ ಆಧಾರ್ ಸಂಖ್ಯೆಯು ಜನರನ್ನು ಗುರುತಿಸುವ ಜನಪ್ರಿಯ ವಿಧಾನವಾಗಿದೆ. ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸೇವೆಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ. ಸರ್ಕಾರದ ಪ್ರಯೋಜನಗಳನ್ನು ಬಳಸಲು ಮತ್ತು ಯಾವುದೇ ಗುರುತಿನ ಅಥವಾ ಪ್ರಮಾಣೀಕರಣ ಸಮಸ್ಯೆಗಳನ್ನು ತಡೆಗಟ್ಟಲು ಜನರು ತಮ್ಮ ಆಧಾರ್ ಮಾಹಿತಿಯನ್ನು ನವೀಕರಿಸಬೇಕು ಎಂದು ಹೇಳಿದೆ.

ಆಗಸ್ಟ್‌ನಲ್ಲಿ, ಯುಐಡಿಎಐ ಹೊರಡಿಸಿದ ಸುತ್ತೋಲೆಯಲ್ಲಿ ಆಧಾರ್ ಸಂಖ್ಯೆ ಅಥವಾ ದಾಖಲಾತಿ ಸ್ಲಿಪ್ ಇಲ್ಲದವರಿಗೆ ಸರ್ಕಾರದ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಹೊರಡಿಸಲಾದ UIDAI ಸುತ್ತೋಲೆಯು ಆಧಾರ್ ಸಂಖ್ಯೆಯನ್ನು ಹೊಂದಿರದ ಮತ್ತು ಸರ್ಕಾರವು ಒದಗಿಸುವ ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯುತ್ತಿರುವವರಿಗೆ ಆಧಾರ್ ನಿಯಮಗಳನ್ನು ಕಠಿಣಗೊಳಿಸಲು ಜಾರಿಗೆ ಬಂದಿದೆ.

ನಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಮತ್ತು ಲಿಂಗ ವಿವರಗಳನ್ನು ನೀವು ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಆದಾಗ್ಯೂ, ಬದಲಾವಣೆಗಳನ್ನು ಮಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಬೇಕು.

ಆನ್‌ಲೈನ್‌ನಲ್ಲಿ ಹೆಸರು, ವಿಳಾಸ, ಲಿಂಗ ಮತ್ತು ಜನ್ಮ ದಿನಾಂಕದ ವಿವರಗಳನ್ನು ನವೀಕರಿಸುವ ವಿಧಾನವನ್ನು ಕೆಳಗೆ ತಿಳಿಸಲಾಗಿದೆ.

ಹಂತ 1: https://ssup.uidai.gov.in/ssup/ ಗೆ ಭೇಟಿ ನೀಡಿ .

ಹಂತ 2: ‘ಆಧಾರ್ ಅಪ್‌ಡೇಟ್ ಮಾಡಲು ಮುಂದುವರಿಯಿರಿ’ ಕ್ಲಿಕ್ ಮಾಡಿ.

ಹಂತ 3: ಆಧಾರ್ ಸಂಖ್ಯೆ ಮತ್ತು CAPTCHA ನಮೂದಿಸಿ.

ಹಂತ 4: ಸೆಂಡ್ OTP ಮೇಲೆ ಕ್ಲಿಕ್ ಮಾಡಿ.

ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ.

ಹಂತ 6: ಮುಂದೆ, ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಆಯ್ಕೆ ಮಾಡಿ.

ಹಂತ 7: ಮುಂದಿನ ಪುಟದಲ್ಲಿ ಸಂಬಂಧಿತ ಆಯ್ಕೆಗಳನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

ಹಂತ 8: ಮುಂದಿನ ಪುಟದಲ್ಲಿ ಬದಲಾವಣೆಗಳನ್ನು ಮಾಡಬಹುದು. ಮುಂದೆ ಸಂಬಂಧಿತ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ.

ಹಂತ 9: ಮುಂದೆ, ನೀವು ನಮೂದಿಸಿದ ವಿವರಗಳನ್ನು ಪರಿಶೀಲಿಸಬೇಕು.

ಹಂತ 10: ಮುಂದೆ, ಬದಲಾವಣೆ ವಿನಂತಿಯನ್ನು ಸಲ್ಲಿಸಿ. ವಿಳಾಸ ಬದಲಾವಣೆಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ನವೀಕರಣ ವಿನಂತಿ ಸಂಖ್ಯೆ (URN) ಅನ್ನು ಬಳಸಬಹುದು.

Published On - 11:04 am, Wed, 12 October 22