Hindenburg Research: ಅದಾನಿ ಆಯ್ತು, ಹಿಂಡನ್ಬರ್ಗ್​ಗೆ ಈಗ ಟಾರ್ಗೆಟ್ ಆದ್ರು ಟ್ರಂಪ್ ಬೆಂಬಲಿಗ ಉದ್ಯಮಿ ಕಾರ್ಲ್ ಐಕಾನ್

Donald Trump Supporter Targeted by Hindenburg Research: ಅಮೆರಿಕದ ಖ್ಯಾತ ಆ್ಯಕ್ಟಿವಿಸ್ಟ್ ಇನ್ವೆಸ್ಟರ್ ಕಾರ್ಲ್ ಐಕಾನ್ ಮಾಲೀಕತ್ವದ ಐಇಪಿ ಸಂಸ್ಥೆ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಮೇ 2ರಂದು ತನಿಖಾ ವರದಿ ಬಿಡುಗಡೆ ಮಾಡಿ ಗಂಭೀರ ಆರೋಪಗಳನ್ನು ಮಾಡಿದೆ. ಇದರ ಬೆನ್ನಲ್ಲೇ ಐಇಪಿ ಷೇರು ಮೌಲ್ಯ ಶೇ. 25ಕ್ಕೂ ಹೆಚ್ಚು ಕುಸಿದಿದೆ.

Hindenburg Research: ಅದಾನಿ ಆಯ್ತು, ಹಿಂಡನ್ಬರ್ಗ್​ಗೆ ಈಗ ಟಾರ್ಗೆಟ್ ಆದ್ರು ಟ್ರಂಪ್ ಬೆಂಬಲಿಗ ಉದ್ಯಮಿ ಕಾರ್ಲ್ ಐಕಾನ್
Follow us
|

Updated on: May 03, 2023 | 12:05 PM

ಕ್ಯಾಲಿಫೋರ್ನಿಯಾ: ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ (Adani Group) ವಿರುದ್ಧ ಜನವರಿ ತಿಂಗಳಲ್ಲಿ ಸ್ಫೋಟಕ ವರದಿ ಬಿಡುಗಡೆ ಮಾಡಿ ಷೇರುಗಳು ಪ್ರಪಾತಕ್ಕೆ ಬೀಳುವಂತೆ ಮಾಡಿದ್ದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ (Hindenburg Research) ಈಗ ಅಮೆರಿಕದ ಐಕಾನ್ ಎಂಟರ್ಪ್ರೈಸಸ್ ಎಲ್​ಪಿ (IEP) ಸಂಸ್ಥೆಯನ್ನು ಟಾರ್ಗೆಟ್ ಮಾಡಿದೆ. ಆ್ಯಕ್ಟಿವಿಸ್ಟ್ ಇನ್ವೆಸ್ಟರ್ ಆಗಿ ಖ್ಯಾತರಾಗಿರುವ ಅಮೆರಿಕನ್ ಉದ್ಯಮಿ ಕಾರ್ಲ್ ಐಕಾನ್ (Carl Icahn) ಮಾಲೀಕತ್ವದ ಐಇಪಿ ಸಂಸ್ಥೆಯ ವ್ಯವಹಾರ ನೀತಿ ಸರಿಯಾಗಿಲ್ಲ ಎಂದು ಬಿಂಬಿಸಿ ಹಿಂಡನ್ಬರ್ಗ್ ರಿಸರ್ಚ್ ವರದಿಯೊಂದನ್ನು ಮೇ 2, ಮಂಗಳವಾರ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಅಮೆರಿಕದ ನಾಸ್ಡಾಕ್ ಷೇರುಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಐಕಾನ್ ಎಂಟರ್​ಪ್ರೈಸಸ್ ಸಂಸ್ಥೆಯ ಷೇರು ಬೆಲೆ ಶೇ. 25ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಈ ಬೆಳವಣಿಗೆಯಿಂದ ಉದ್ಯಮಿ ಕಾರ್ಲ್ ಐಕಾನ್ ಅವರು 2.9 ಬಿಲಿಯನ್ ಡಾಲರ್ (ಸುಮಾರು 23 ಸಾವಿರ ಕೋಟಿ ರೂ) ಸಂಪತ್ತು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಐಇಪಿ ವಿರುದ್ಧದ ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಏನು ಆರೋಪ ಮಾಡಲಾಗಿದೆ?

ಐಕಾನ್ ಎಂಟರ್ಪ್ರೈಸಸ್ ಸಂಸ್ಥೆ ತನ್ನ ಷೇರುಗಳ ಮೌಲ್ಯವನ್ನು ಕೃತಕವಾಗಿ ಉಬ್ಬಿಸಿದೆ. ಡಿವಿಡೆಂಡ್ ಕೊಡುವ ವಿಷಯದಲ್ಲೂ ಅಕ್ರಮ ಮಾರ್ಗ ಅನುಸರಿಸಲಾಗಿದೆ. ಐಇಪಿಯ ಯೂನಿಟ್​ಗಳ ವಾಸ್ತವ ಮೌಲ್ಯಕ್ಕಿಂತ ಶೇ. 75ರಷ್ಟು ಹೆಚ್ಚು ಉಬ್ಬಿಸಲಾಗಿದೆ ಎಂದು ಹಿಂಡನ್ಬರ್ಗ್ ರಿಸರ್ಚ್​ನ ವರದಿಯಲ್ಲಿ ಆರೋಪಿಸಲಾಗಿದೆ.

ಡಿವಿಡೆಂಡ್ ಕೊಡಲು ಅಲ್ಲಿ ಕಿತ್ತು ಇಲ್ಲಿಗೆ ಹಾಕುವ ನೀತಿ

ಹಿಂಡನ್ಬರ್ಗ್ ರಿಸರ್ಚ್ ಪ್ರಕಾರ ಐಇಪಿಯ ಷೇರುಗಳ ಮೌಲ್ಯ ಉಬ್ಬಲು ಕಾರಣವಾಗಿದ್ದು ಅದರ ಶೇ. 15.8ರಷ್ಟು ಡಿವಿಡೆಂಡ್. ಅಮೆರಿಕದ ದೊಡ್ಡ ಬಂಡವಾಳದ ಯಾವುದೇ ಕಂಪನಿಯೂ ನೀಡದಷ್ಟು ಪ್ರಮಾಣದಲ್ಲಿ ಐಇಪಿ ತನ್ನ ಹೂಡಿಕೆದಾರರಿಗೆ ಡಿವಿಡೆಂಡ್ ನೀಡಿದೆ. ಹೊಸ ಹೂಡಿಕೆದಾರರಿಂದ ಪಡೆದ ಬಂಡವಾಳವನ್ನು ಹಳೆಯ ಹೂಡಿಕೆದಾರರಿಗೆ ಡಿವಿಡೆಂಡ್ ಕೊಡಲು ಬಳಸಲಾಗಿದೆ. ಅಲ್ಲದೇ ಐಇಪಿಯಲ್ಲಿ ಶೇ. 85ರಷ್ಟು ಪಾಲು ಹೊಂದಿರುವ ಕಾರ್ಲ್ ಐಕಾನ್ ಕ್ಯಾಷ್ ರೂಪದಲ್ಲಿ ಡಿವಿಡೆಂಡ್ ಪಡೆಯಬೇಕಿತ್ತು. ಆದರೆ, ಅದಕ್ಕೆ ಬದಲು ಆ ಮೊತ್ತದ ಷೇರುಗಳ ರೂಪದಲ್ಲಿ ಡಿವಿಡೆಂಡ್ ಪಡೆದಿದ್ದಾರೆ. ಡಿವಿಡೆಂಡ್ ಮೊತ್ತವನ್ನು ಉಬ್ಬಿಸಿ ಹೆಚ್ಚು ಷೇರು ಸಿಗುವಂತೆ ಮಾಡಿದ್ದಾರೆ. ಈ ಹೊಸ ಷೇರುಗಳನ್ನು ಐಇಪಿ ಮಾರುವಂತೆ ಮಾಡಿದ್ದಾರೆ. ಇದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ.

ಇದನ್ನೂ ಓದಿGo First: ಎಂಜಿನ್ ವೈಫಲ್ಯಕ್ಕೆ ದಿವಾಳಿ ಆಯಿತಾ ಗೋ ಫಸ್ಟ್ ಏರ್​ಲೈನ್ಸ್?; ಏನಿದು ಕರ್ಮಕಾಂಡ? ದಿಢೀರ್ ಟಿಕೆಟ್ ರದ್ದಾಗಿದ್ದಕ್ಕೆ ಪ್ರಯಾಣಿಕರು ಶಾಕ್..!

ಆ್ಯಕ್ಟಿವಿಸ್ ಇನ್ವೆಸ್ಟರ್ ಕಾರ್ಲ್ ಐಕಾನ್

ಫ್ಲೋರಿಡಾ ರಾಜ್ಯದಲ್ಲಿರುವ ಐಕಾನ್ ಎಂಟರ್ಪ್ರೈಸಸ್ ಮಾಲೀಕ ಕಾರ್ಲ್ ಐಕಾನ್ 15 ಬಿಲಿಯನ್ ಡಾಲರ್ (ಸುಮಾರು 1.2 ಲಕ್ಷ ಕೋಟಿ ರೂ) ಸಂಪತ್ತಿನ ಕುಬೇರ. ಇವರು ಒಬ್ಬ ಆ್ಯಕ್ಟಿವಿಸ್ಟ್ ಇನ್ವೆಸ್ಟರ್. ಅಂದರೆ, ಯಾವುದೇ ಕಂಪನಿಯ ಆಡಳಿತ ವ್ಯವಸ್ಥೆ ಅಸಮರ್ಪಕ ಎನಿಸಿದಲ್ಲಿ ಇವರು ಆ ಸಂಸ್ಥೆಯ ಹೆಚ್ಚಿನ ಷೇರುಪಾಲು ಖರೀದಿಸಿ, ಆ ಮೂಲಕ ಕಂಪನಿ ಮ್ಯಾನೇಜ್ಮೆಂಟ್​ನಲ್ಲಿ ಬದಲಾವಣೆ ತರುತ್ತಾರೆ. ಅವರ ಪ್ರಕಾರ ಅದು ಸುಧಾರಣಾ ಕ್ರಮ. ಹಿಂಡನ್ವರ್ಗ್ ರಿಸರ್ಚ್ ಮಾಡುವ ರೀತಿಯ ಕೆಲಸಗಳಿಂದಲೇ ಐಕಾನ್ ಹೆಸರುವಾಸಿಯಾಗಿದ್ದಾರೆ. ಈಗ ಅವರ ಮುಳ್ಳು ಅವರಿಗೇ ಚುಚ್ಚಿದೆ.

ಯಹೂದಿ ಜನಾಂಗಕ್ಕೆ ಸೇರಿದ ಕಾರ್ಲ್ ಐಕಾನ್ ಅವರ ಮಾಲೀಕತ್ವದ ಐಇಪಿ ಅಡಿಯಲ್ಲಿ ಹಲವಾರು ಸಂಸ್ಥೆಗಳು ನಡೆಯುತ್ತಿವೆ. ಪೆಟ್ರೋಲಿಯಂ ರಿಫೈನಿಂಗ್​ನಿಂದ ಹಿಡಿದು ಫಾರ್ಮಾ ಸಂಸ್ಥೆಯವರೆಗೂ ಹಲವು ವ್ಯವಹಾರಗಳನ್ನು ಕಾರ್ಲ್ ಐಕಾನ್ ನಿಭಾಯಿಸುತ್ತಾರೆ.

ಡೊನಾಲ್ಡ್ ಟ್ರಂಪ್ ಬೆಂಬಲಿಗ ಕಾರ್ಲ್ ಐಕಾನ್

ಕಾರ್ಲ್ ಐಕಾನ್ ಅವರು ಡೊನಾಲ್ಡ್ ಟ್ರಂಪ್ ಬೆಂಬಲಿಗರಾಗಿ ಗುರುತಿಸಿಕೊಂಡವರು. 2016ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್​ಗೆ ಐಕಾನ್ ಬೆಂಬಲ ನೀಡಿದ್ದರು. ತಾವು ಅಧ್ಯಕ್ಷರಾದರೆ ಕಾರ್ಲ್ ಐಕಾನ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡುತ್ತೇನೆ ಎಂದೂ ಟ್ರಂಪ್ ಘೋಷಿಸಿದ್ದರು. ಆದರೆ, ಅಧ್ಯಕ್ಷರಾದ ಬಳಿಕ ಐಕಾನ್ ಬದಲು ಸ್ಟೀವ್ ಮುಚಿನ್ ಅವರನ್ನು ಸಚಿವರನ್ನಾಗಿ ಮಾಡಿದರು. 2016 ಡಿಸೆಂಬರ್​ನಲ್ಲಿ ಡೊನಾಲ್ಡ್ ಟ್ರಂಪ್ ಅವರು ತಮಗೆ ಸ್ಪೆಷನ್ ಅಡ್ವೈಸರ್ ಆಗಿ ಐಕಾನ್​ರನ್ನು ನೇಮಿಸಿಕೊಂಡರು. 2017ರ ಆಗಸ್ಟ್​ನಲ್ಲಿ ಐಕಾನ್ ಆ ಸ್ಥಾನದಿಂದ ಹೊರಬರಬೇಕಾಯಿತು.

ಇದನ್ನೂ ಓದಿSuccess Story ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ

ಅದಾದ ಬಳಿಕವೂ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಲ್ ಐಕಾನ್ ಮಧ್ಯೆ ಸಂಬಂಧ ಉತ್ತಮವಾಗಿಯೇ ಇತ್ತು. ಈಗಲೂ ಕೂಡ ಅವರು ಟ್ರಂಪ್ ಪರ ನಿಲುವು ಹೊಂದಿದ್ದಾರೆ.

ಹಿಂಡನ್ಬರ್ಗ್ ರಿಸರ್ಚ್ ವರದಿ ಬಗ್ಗೆ ಐಕಾನ್ ಹೇಳುವುದೇನು?

ತಮ್ಮ ವಿರುದ್ದ ಆರೋಪ ಮಾಡುವ ಮೂಲಕ ಹಿಂಡನ್ಬರ್ಗ್ ತನ್ನ ಯಾವುದೋ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂಬರ್ಥದಲ್ಲಿ ಐಇಪಿ ಮಾಲೀಕ ಕಾರ್ಲ್ ಐಕಾನ್ ತಿರುಗೇಟು ನೀಡಿದ್ದಾರೆ. ಐಇಪಿಯ ದೀರ್ಘಾವಧಿ ಷೇರುದಾರರನ್ನು ಬಲಿಕೊಟ್ಟು ಹಿಂಡನ್ಬರ್ಗ್ ಸ್ವಾರ್ಥ ಸಾಧನೆಯ ಕಾರ್ಯ ಇದು ಎಂದು ಐಕಾನ್ ಹೇಳಿದ್ದಾರೆ.

ನಮ್ಮ ಸಾರ್ವಜನಿಕ ಹೇಳಿಕೆಗಳಿಗೆ ಬದ್ಧರಾಗಿದ್ದೇವೆ. ದೀರ್ಘಾವಧಿಯಲ್ಲಿ ಐಇಪಿಯ ಕಾರ್ಯಸಾಧನೆಯೇ ಎಲ್ಲವನ್ನೂ ಹೇಳುತ್ತದೆ ಎಂದೂ ಕಾರ್ಲ್ ಐಕಾನ್ ತಿಳಿಸಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ