AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಬೋಯಿಂಗ್ 787 ಡ್ರೀಮ್​ಲೈನರ್ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ನಿಲ್ಲಿಸಲು ಯೋಜನೆ

India may ground Boeing 787-8 fleet: ಗುಜರಾತ್​​ನಲ್ಲಿ ಅಪಘಾತಕ್ಕೊಳಗಾದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಬೋಯಿಂಗ್ ಕಂಪನಿಯ ಎಲ್ಲಾ ಡ್ರೀಮ್​ಲೈನರ್ 787 ಸರಣಿಯ ವಿಮಾನಗಳ ಹಾರಾಟ ನಿಲ್ಲಿಸಬಹುದು. ಈ ವಿಮಾನಗಳನ್ನು ಸಂಪೂರ್ಣ ತಪಾಸಣೆ ನಡೆಸಿ ಅವು ಹಾರಾಟಕ್ಕೆ ಸುರಕ್ಷಿತವಾಗಿ ಎಂದು ದೃಢಪಡುವವರೆಗೂ ಇವುಗಳನ್ನು ಗ್ರೌಂಡಿಂಗ್ ಮಾಡಬಹುದು. ಜೂನ್ 12ರಂದು ಅಹ್ಮದಾಬಾದ್ ಏರ್​​ಪೋರ್ಟ್​​ನಲ್ಲಿ ಬೋಯಿಂಗ್ 787-8 ವಿಮಾನ ಅಪಘಾತಗೊಂಡು 241 ಮಂದಿ ಪ್ರಯಾಣಿಕರು ಬಲಿಯಾಗಿದ್ದಾರೆ.

Air India: ಬೋಯಿಂಗ್ 787 ಡ್ರೀಮ್​ಲೈನರ್ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ನಿಲ್ಲಿಸಲು ಯೋಜನೆ
ಏರ್ ಇಂಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 13, 2025 | 2:42 PM

Share

ನವದೆಹಲಿ, ಜೂನ್ 13: ಅಹ್ಮದಾಬಾದ್​​ನಲ್ಲಿ ನಿನ್ನೆ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್​ಲೈನರ್ 787-8 ವಿಮಾನ (Ahmedabad plane crash) ಅಪಘಾತಗೊಂಡಿದೆ. ಇದಕ್ಕೆ ಏನು ಕಾರಣ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತದೆ. ತನಿಖೆ ಮುಗಿಯುವವರೆಗೂ ಭಾರತದಲ್ಲಿ ಆಪರೇಟ್ ಆಗುತ್ತಿರುವ ಎಲ್ಲಾ ಬೋಯಿಂಗ್ ಡ್ರೀಮ್​​ಲೈನರ್ ವಿಮಾನಗಳನ್ನು ನಿಲ್ಲಿಸಲು ಆಲೋಚಿಸಲಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಬೋಯಿಂಗ್ ಕಂಪನಿಯ ಎಂಜಿನಿಯರುಗಳು ಈ ಎಲ್ಲಾ ಡ್ರೀಮ್​ಲೈನರ್ ಸರಣಿಯ ವಿಮಾನಗಳನ್ನು ತಪಾಸಿಸಲಿದ್ದಾರೆ. ವಿಮಾನಗಳು ಯಾವ ಸಮಸ್ಯೆ ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶ ಇದು. ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸಲು ಬಿಟ್ಟಿದೆ.

ಇದನ್ನೂ ಓದಿ: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ಇದನ್ನೂ ಓದಿ
Image
ಏರ್ ಇಂಡಿಯಾ ಅವಘಡ: ವಿಮಾ ಕಂಪನಿಗಳಿಗೆ 1,000 ಕೋಟಿ ಹೊರೆ?
Image
ಕೊನೆಯ ಕ್ಷಣದಲ್ಲಿ ಕೈಕೊಟ್ಟ ನೊಗ ಪಂಪರ್, ಲಿಫ್ಟ್ ಗೇರ್
Image
2010ರ ಮಂಗಳೂರು ವಿಮಾನ ದುರಂತದಲ್ಲಿ ಆಗಿದ್ದೇನು?
Image
ವಿಮಾನದ ರಹಸ್ಯ ಇರುವ ಬ್ಲ್ಯಾಕ್ ಬಾಕ್ಸ್ ಎಂದರೇನು?

ಇದೇ ವೇಳೆ, ಏರ್ ಇಂಡಿಯಾ ಸಂಸ್ಥೆ ತನ್ನ ವಿಮಾನಗಳ ಮೈಂಟೆನೆನ್ಸ್​​ಗೆ ಯಾವ ಕ್ರಮ ಅನುಸರಿಸುತ್ತದೆ ಎನ್ನುವುದನ್ನೂ ತನಿಖೆ ಮಾಡಲಾಗುತ್ತದೆ. ಎಷ್ಟು ನಿಯಮಿತವಾಗಿ ವಿಮಾನವನ್ನು ಸರ್ವಿಸ್ ಮಾಡಲಾಗುತ್ತಿದೆ ಎಂಬುದನ್ನು ನೋಡಲಾಗುತ್ತದೆ. ಇದು ತೃಪ್ತಿದಾಯಕ ಅಲ್ಲ ಎಂದಲ್ಲಿ ಏರ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಜರುವ ಸಾಧ್ಯತೆಯೂ ಇರುತ್ತದೆ.

ಅಹ್ಮದಾಬಾದ್​​ನಲ್ಲಿ ಅಪಘಾತಕ್ಕೊಳಗಾದ ಬೋಯಿಂಗ್ 787 ಡ್ರೀಮ್​ಲೈನರ್ ಸರಣಿಯ ವಿಮಾನಗಳು ಉತ್ಕೃಷ್ಟ ಗುಣಮಟ್ಟದವು ಎಂದು ಪರಿಗಣಿತವಾಗಿವೆ. ಇವು ಹೆಚ್ಚು ಅಗಲ ಇರುತ್ತವೆ. ಅಂತಾರಾಷ್ಟ್ರೀಯ ಫ್ಲೈಟ್​​ಗಳಲ್ಲಿ ಇವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಡ್ರೀಮ್​ಲೈನರ್ ಸರಣಿಯಲ್ಲಿ 787-8, 787-9, ಮತ್ತು 787-10 ಮಾಡಲ್​ಗಳಿವೆ. 787-8 ವಿಮಾನಗಳಲ್ಲಿ ಕಡಿಮೆ ಜನರ ಸಾಮರ್ಥ್ಯ ಇರುತ್ತದೆ. ಈ ಡ್ರೀಮ್​ಲೈನ್ ವಿಮಾನಗಳಲ್ಲಿ ಬಹಳ ಅಗುರವಾದ ವಸ್ತುಗಳನ್ನು ಬಳಸಲಾಗಿರುವುದರಿಂದ ಇಂಧನ ಕ್ಷಮತೆ ಶೇ 20ರಷ್ಟು ಹೆಚ್ಚಿರುತ್ತದೆ. ಅದಕ್ಕೆ ಅನುಗುಣವಾಗಿ ವಿಶೇಷ ಡಿಸೈನ್ ಕೂಡ ಇದೆ.

ಇದನ್ನೂ ಓದಿ: ಅಹ್ಮದಾಬಾದ್ ವಿಮಾನ ದುರಂತ; ಏರ್ ಇಂಡಿಯಾ, ವಿಮಾ ಕಂಪನಿಗಳಿಗೆ ನಷ್ಟವೆಷ್ಟು? ಪ್ರಯಾಣಿಕರಿಗೆ ಪರಿಹಾರವೆಷ್ಟು? ಇಲ್ಲಿದೆ ಡೀಟೇಲ್ಸ್

2011ರಲ್ಲಿ ಹಾಂಕಂಗ್​​ನಿಂದ ಟೋಕಿಯೋದ ನಾರಿಟಾ ಏರ್​​ಪೋರ್ಟ್​​ಗೆ ಇದರ ಮೊದಲ ಕಮರ್ಷಿಯಲ್ ಫ್ಲೈಟ್ ನಡೆದಿತ್ತು. ಕಳೆದ 14 ವರ್ಷದಲ್ಲಿ ಈ ಡ್ರೀಮ್​​ಲೈನರ್ ವಿಮಾನಗಳು ತಾಂತ್ರಿಕ ದೋಷದಿಂದ ದೊಡ್ಡ ಅಪಘಾತಕ್ಕೆ ಒಳಗಾದ ಘಟನೆಯೇ ಇರಲಿಲ್ಲ. ಅಹ್ಮದಾಬಾದ್​ನದ್ದೇ ಮೊದಲ ಅಪಘಾತ ಘಟನೆ ಎಂದು ಹೇಳಲಾಗುತ್ತಿದೆ.

ಈ 14 ವರ್ಷದಲ್ಲಿ ಬೋಯಿಂಗ್ ಕಂಪನಿಯು 2,500ಕ್ಕೂ ಹೆಚ್ಚು ಡ್ರೀಮ್​ಲೈನರ್ ವಿಮಾನಗಳನ್ನು ಮಾರಾಟ ಮಾಡಿದೆ. ಏರ್ ಇಂಡಿಯಾ ಕಂಪನಿ ಈ 47 ವಿಮಾನಗಳನ್ನು ಖರೀದಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ