ನವದೆಹಲಿ, ಏಪ್ರಿಲ್ 23: ಈ ಏಪ್ರಿಲ್ ತಿಂಗಳಲ್ಲಿ ಭಾರತದ ವ್ಯಾವಹಾರಿಕ ಚಟುವಟಿಕೆ (business activity) ಬಹಳ ವೇಗದಲ್ಲಿ ನಡೆಯುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಎಚ್ಎಸ್ಬಿಸಿ ಸಂಸ್ಥೆಯ ಇಂಡಿಯಾ ಕಾಂಪೊಸಿಟ್ ಪಿಎಂಐ (HSBC India Composite PMI survey) 62.2ಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ ಇದು 61.8 ಇತ್ತು. 2021ರ ಆಗಸ್ಟ್ ತಿಂಗಳಿಂದ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ 50 ಅಂಕದ ಮಟ್ಟಕ್ಕಿಂತ ಮೇಲೆಯೇ ಇದೆ. ಏಪ್ರಿಲ್ ತಿಂಗಳಲ್ಲಿನ 62.2 ಅಂಕ ಕಳೆದ 14 ವರ್ಷದಲ್ಲೇ ಗರಿಷ್ಠ ಎನ್ನಲಾಗಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಎರಡೂ ವಲಯಗಳಲ್ಲಿ ಉತ್ತಮ ಸಾಧನೆ ಆಗಿರುವುದು ಬಿಸಿನೆಸ್ ಚಟುವಟಿಕೆಗೆ ಉತ್ತೇಜನ ಸಿಗಲು ಕಾರಣ ಎಂದು ಹೇಳಲಾಗುತ್ತಿದೆ.
‘ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್ ಎರಡರಲ್ಲೂ ಉತ್ತಮ ಸಾಧನೆ ಆಗಿದೆ. ಹೊಸ ಆರ್ಡರ್ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ 2010ರ ಜೂನ್ ಬಳಿಕ ಅತಿಹೆಚ್ಚು ಕಾಂಪೊಸಿಟ್ ಔಟ್ಪುಟ್ ಇಂಡೆಕ್ಸ್ ತಲುಪಲು ಕಾರಣವಾಗಿದೆ’ ಎಂದು ಎಚ್ಎಸ್ಬಿಸಿಯ ಆರ್ಥಿಕ ತಜ್ಞ ಪ್ರಾಂಜಲ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೆಎಂಎಫ್ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?
ಸರ್ವಿಸ್ ಸೆಕ್ಟರ್ನಲ್ಲಿನ ಬಿಸಿನೆಸ್ ಹೆಚ್ಚು ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದೆ. ಮಾರ್ಚ್ನಲ್ಲಿ ಇದರ ಇಂಡೆಕ್ಸ್ 61.2 ಇದ್ದದ್ದು ಏಪ್ರಿಲ್ನಲ್ಲಿ 61.7ಕ್ಕೆ ಏರಿದೆ. ಹೊಸ ಬಿಸಿನೆಸ್ ನಡೆಯುತ್ತಿರುವುದು ಇದಕ್ಕೆ ಕಾರಣ. ಈ ಹೊಸ ಬಿಸಿನೆಸ್ಗಳು ಬೇಡಿಕೆಯನ್ನು ಪ್ರತಿನಿಧಿಸುತ್ತವೆ.
ತಯಾರಿಕಾ ಕ್ಷೇತ್ರದ ಪಿಎಂಐ ಇಂಡೆಕ್ಸ್ ಕೂಡ ಉತ್ತಮವಾಗಿದೆ. ಹೊಸ ಆರ್ಡರ್ಗಳು ಮತ್ತು ಉತ್ಪಾದನೆ ಎರಡೂ ಕೂಡ ಉತ್ತಮವಾಗಿ ಏರಿವೆ.
ಇದನ್ನೂ ಓದಿ: ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ
ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಎಂಬುದು ಆರ್ಥಿಕ ಚಟುವಟಿಕೆಯ ಒಂದು ಅಳತೆಗೋಲಾಗಿದೆ. ಈ ಬಿಸಿನೆಸ್ ಚಟುವಟಿಕೆ ತೀವ್ರಗೊಂಡಷ್ಟೂ ಜಿಡಿಪಿ ಬೆಳವಣಿಗೆ ಚುರುಕುಗೊಳ್ಳುತ್ತದೆ. ಹೀಗಾಗಿ, ಪಿಎಂಐ ಇಂಡೆಕ್ಸ್ ಹೆಚ್ಚಾಗಿರುವುದು ಭಾರತದಲ್ಲಿ ಜಿಡಿಪಿ ದರ ಕಡಿಮೆ ಆಗುವ ಸಾಧ್ಯತೆಯನ್ನು ತಳ್ಳಿಹಾಕುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ