1300 ಕೋಟಿ ಡಾಲರ್ನ ಉಕ್ಕಿನ ಸ್ಥಾವರ ಸ್ಥಾಪಿಸಲು ಅರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ಗೆ ಒಡಿಶಾ ಸರ್ಕಾರದ ಅನುಮತಿ
1300 ಕೋಟಿ ಡಾಲರ್ ಮೌಲ್ಯದ ಉಕ್ಕಿನ ಸ್ಥಾವರ ಸ್ಥಾಪನೆಗೆ ಅರಸೆಲರ್ ಮಿತ್ತಲ್ ನಿಪ್ಪನ್ಗೆ ಒಡಿಶಾ ಸರ್ಕಾರವು ಅನುಮತಿ ನೀಡಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.
1300 ಕೋಟಿ ಅಮೆರಿಕನ್ ಡಾಲರ್ನ- ವರ್ಷಕ್ಕೆ 24 ಮಿಲಿಯನ್ ಟನ್ ಉತ್ಪಾದಿಸುವ ಉಕ್ಕಿನ ಸ್ಥಾವರವನ್ನು ಸ್ಥಾಪಿಸಲು ಒಡಿಶಾ ರಾಜ್ಯ ಸರ್ಕಾರದಿಂದ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಲಿಮಿಟೆಡ್ ಅನುಮೋದನೆಯನ್ನು ಪಡೆದಿದೆ. ಇದು ಮಾರ್ಚ್‌ನಲ್ಲಿ ಆರಂಭಿಕ ಪ್ರಸ್ತಾವನೆಯಿಂದ ಹೂಡಿಕೆ ಮತ್ತು ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ. ಕೇಂದ್ರಪಾರಾ ಸಮುಚ್ಚಯವು ಇತ್ತೀಚಿನ ಹಸಿರು ಉಕ್ಕಿನ ತಯಾರಿಕೆ ತಂತ್ರಜ್ಞಾನವನ್ನು ಬಳಸಿಕೊಂಡು, ಉಕ್ಕನ್ನು ಉತ್ಪಾದಿಸುತ್ತದೆ ಮತ್ತು ಹೆಚ್ಚಿನ ಮೌಲ್ಯವರ್ಧಿತ ಡೌನ್‌ಸ್ಟ್ರೀಮ್ ಉತ್ಪನ್ನಗಳನ್ನು ಸಹ ಉತ್ಪಾದಿಸುತ್ತದೆ ಎಂದು ಒಡಿಶಾ ಸರ್ಕಾರದ ಹೂಡಿಕೆ ಉತ್ತೇಜನಾ ಸಂಸ್ಥೆಯು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಹೇಳಿಕೆಯಲ್ಲಿ ತಿಳಿಸಿದೆ. ಯೋಜನೆಯು ಏಳು ವರ್ಷಗಳಲ್ಲಿ ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅದು ತಿಳಿಸಿದೆ.
ಪಟ್ನಾಯಕ್ ಮಾರ್ಚ್‌ನಲ್ಲಿ ಟ್ವೀಟ್ ಮಾಡಿ, ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ 500 ಶತಕೋಟಿ ರೂಪಾಯಿಗಳ (6.6 ಶತಕೋಟಿ ಅಮೆರಿಕನ್ ಡಾಲರ್) ಹೂಡಿಕೆಯಲ್ಲಿ ರಾಜ್ಯದಲ್ಲಿ ವರ್ಷಕ್ಕೆ 12 ಮಿಲಿಯನ್ ಟನ್ ಉಕ್ಕಿನ ಸ್ಥಾವರವನ್ನು ನಿರ್ಮಿಸಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದಿದ್ದರು. ಈ ಕೇಂದ್ರದಲ್ಲಿ ವಾರ್ಷಿಕವಾಗಿ 18.75 ಮಿಲಿಯನ್ ಟನ್ ಸಿಮೆಂಟ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಆರ್ಸೆಲರ್ ಮಿತ್ತಲ್ ಒಂದು ದಶಕದ ಹಿಂದೆ ರಾಜ್ಯದಲ್ಲಿ ಉಕ್ಕಿನ ಸ್ಥಾವರವನ್ನು ನಿರ್ಮಿಸಲು ಪ್ರಯತ್ನಿಸಿತ್ತು. ಆದರೆ ಸೂಕ್ತವಾದ ಭೂಮಿ ಮತ್ತು ಪ್ರಮುಖ ಕಚ್ಚಾ ವಸ್ತುವಾದ ಕಬ್ಬಿಣದ ಅದಿರನ್ನು ಗಣಿಗಾರಿಕೆ ಮಾಡಲು ಅಗತ್ಯವಾದ ಪರವಾನಗಿಗಳನ್ನು ಪಡೆಯುವಲ್ಲಿ ವಿಫಲವಾದ ಕಾರಣ 2013ರಲ್ಲಿ ಯೋಜನೆಯನ್ನು ಕೈಬಿಟ್ಟಿತು.
ಇದನ್ನೂ ಓದಿ: PLI Scheme: ಪಿಎಲ್ಐ ಯೋಜನೆ ಅಡಿ ಸೆಮಿಕಂಡಕ್ಟರ್ಗೆ 76 ಸಾವಿರ ಕೋಟಿ ರೂ. ಕೇಂದ್ರ ಸಂಪುಟ ಅನುಮೋದನೆ