
ಬೆಂಗಳೂರು, ಆಗಸ್ಟ್ 30: ಬೆಂಗಳೂರು ಮೂಲದ ಡೀಪ್-ಟೆಕ್ ಸ್ಟಾರ್ಟಪ್ (Startup) ಸಂಸ್ಥೆಯಾದ ‘ಆಸ್ಪೆರಾ ಇಂಡಸ್ಟ್ರೀಸ್’ (Aspera Industries) ಸರಕು ಸಾಗಣೆ (Cargo Transport) ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಸಾಮರ್ಥ್ಯವಿರುವ ಭಾರತದ ಮೊದಲ ಸ್ವಾಯತ್ತ (ಆಟೋನಾಮಸ್) ಸೀಪ್ಲೇನ್ ಅನ್ನು ಅನಾವರಣಗೊಳಿಸಿದೆ. ಯುರೇಕಾ ಎಂದು ಹೆಸರಿಸಲಾಗಿರುವ ಈ ಸೀಪ್ಲೇನ್ 1,000 ಕಿಲೋ ತೂಕದ ಸರಕುಗಳನ್ನು 2,000 ಕಿಮೀ ದೂರ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಸಮುದ್ರದ ಮೇಲೆ ತುಸು ಎತ್ತರದಲ್ಲಿ ಸಾಗುವ ಈ ಡ್ರೋನ್ ಶೈಲಿಯ ಸೀಪ್ಲೇನ್ ಪ್ರತಿ ಟನ್-ಕಿಲೋಮೀಟರ್ಗೆ 1 ಡಾಲರ್ಗಿಂತ ಕಡಿಮೆ ವೆಚ್ಚದಲ್ಲಿ ಸರಕು ಸಾಗಣೆ ಮಾಡಬಲ್ಲದು. ಇದು ಸಾಂಪ್ರದಾಯಿಕ ವಾಯು ಮಾರ್ಗದ ಕಾರ್ಗೋ ವೆಚ್ಚಕ್ಕಿಂತ ಶೇ. 80 ರಷ್ಟು ಅಗ್ಗವಾಗಿದೆ. ಹಾಗೆಯೇ, ಹಡಗುಗಳಲ್ಲಿ ಸಾಗಿಸಲು ತಿಂಗಳು ಬೇಕಾದರೆ ಈ ಸೀಪ್ಲೇನ್ ಕೆಲವೇ ಗಂಟೆಗಳಲ್ಲಿ ಸರಕುಗಳನ್ನು ಕೊಂಡೊಯ್ಯಬಲ್ಲುದು. ಹೆಚ್ಚಿನ ಪ್ರಮಾಣದಲ್ಲಿ ಸೀಪ್ಲೇನ್ಗಳ ಬಳಕೆಯಾದರೆ, ಒಂದು ಕಿಮೀ ಸಾಗಣೆ ವೆಚ್ಚ 50 ಸೆಂಟ್ ಅಥವಾ ಅರ್ಧ ಡಾಲರ್ಗೆ ಇಳಿಯಬಹುದು ಎಂದು ಈ ಸಂಸ್ಥೆ ಹೇಳಿಕೊಂಡಿದೆ.
ಇದನ್ನೂ ಓದಿ: ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿದರ್ ಜಗದೀಶನ್ ನಿವೃತ್ತಿ; ಅಕ್ಟೋಬರ್ 26ಕ್ಕೆ ಅವರ ಅವಧಿ ಅಂತ್ಯ
ಚಾಲಕ ರಹಿತ ತಂತ್ರಜ್ಞಾನ: ಇದರಲ್ಲಿ ಮಾನವ ಪೈಲಟ್ಗಳ ಅಗತ್ಯವಿರುವುದಿಲ್ಲ (Unmanned). ಕೃತಕ ಬುದ್ಧಿಮತ್ತೆ (AI) ಮತ್ತು ಸುಧಾರಿತ ಸಂವೇದಕಗಳ (Sensors) ಸಹಾಯದಿಂದ ಇದು ನೀರು ಮತ್ತು ನೆಲದ ಮೇಲೆ ಸ್ವಯಂಚಾಲಿತವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಹೊಂದಿದೆ.
ಆಸ್ಪೆರಾ ಇಂಡಸ್ಟ್ರೀಸ್ ಸಿಇಒ ಖುಷಿ ಮಿಟ್ಟಲ್ ಅವರ ಎಕ್ಸ್ ಪೋಸ್ಟ್
ಈ ವಿಮಾನವು ಸಾಗರ, ನದಿ ಹಾಗೂ ಜಲಾಶಯಗಳ ಜಲಮೂಲಗಳನ್ನು ರನ್ವೇ ಆಗಿ ಬಳಸಿಕೊಳ್ಳಬಲ್ಲದು. ಹೀಗಾಗಿ ಪ್ರತ್ಯೇಕ ವಿಮಾನ ನಿಲ್ದಾಣಗಳ (Airports) ಅಗತ್ಯವಿರುವುದಿಲ್ಲ.
ಇದನ್ನೂ ಓದಿ: Range Rover: 4.5 ಸೆಕೆಂಡ್ಸ್ನಲ್ಲಿ 100 ಕಿ.ಮೀ. ವೇಗ: 1.90 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಬಿಡುಗಡೆ
ದೂರದ ಪ್ರದೇಶಗಳಿಗೆ ಸಂಪರ್ಕ: ಭಾರತದ ಸುದೀರ್ಘ ಕರಾವಳಿ ತೀರಗಳು, ದ್ವೀಪಗಳು (ಅಂಡಮಾನ್, ಲಕ್ಷದ್ವೀಪ) ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಅತಿ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ತಲುಪಿಸಲು ಈ ಯೋಜನೆ ಕ್ರಾಂತಿಕಾರಿ ಬದಲಾವಣೆ ತರಲಿದೆ.
ಈ ಯೋಜನೆಯು ಭಾರತದ ನೀಲಿ ಆರ್ಥಿಕತೆ (Blue Economy) ಮತ್ತು ಲಾಜಿಸ್ಟಿಕ್ಸ್ ರಂಗದಲ್ಲಿ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆಯಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ