AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿದರ್ ಜಗದೀಶನ್ ನಿವೃತ್ತಿ; ಅಕ್ಟೋಬರ್ 26ಕ್ಕೆ ಅವರ ಅವಧಿ ಅಂತ್ಯ

HDFC bank CEO and MD Sashidhar Jagadishan to retire on October 26th: ಎಚ್​ಡಿಎಫ್​ಸಿ ಬ್ಯಾಂಕ್​ನ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶಶಿಧರ್ ಜಗದೀಶನ್ ನಿವೃತ್ತರಾಗುತ್ತಿದ್ದಾರೆ. ಆ ಹುದ್ದೆಯಲ್ಲಿ ಮೂರನೇ ಅವಧಿಗೆ ಅವರು ಮರುನೇಮಕಕ್ಕೆ ಅರ್ಜಿ ಸಲ್ಲಿಸುತ್ತಿಲ್ಲ. ಅಕ್ಟೋಬರ್ 26ಕ್ಕೆ ಅವರ ಎರಡನೇ ಅವಧಿ ಕೊನೆಗೊಳ್ಳುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ನಿರ್ದೇಶಕರ ಮಂಡಳಿಯು ಹೊಸ ಸಿಇಒ ಅವರಿಗಾಗಿ ಶೋಧ ನಡೆಸಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿದರ್ ಜಗದೀಶನ್ ನಿವೃತ್ತಿ; ಅಕ್ಟೋಬರ್ 26ಕ್ಕೆ ಅವರ ಅವಧಿ ಅಂತ್ಯ
ಎಚ್​ಡಿಎಫ್​ಸಿ ಬ್ಯಾಂಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 30, 2026 | 11:58 AM

Share

ನವದೆಹಲಿ, ಆಗಸ್ಟ್ 30: ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್​ನ (HDFC Bank) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಶಶಿಧರ್ ಜಗದೀಶನ್ (Sashidhar Jagdishan) ಅವರು ಸೇವೆಯಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ. ಅಕ್ಟೋಬರ್ 26, ಅವರ ಸೇವೆಯ ಕೊನೆಯ ದಿನವಾಗಿರಲಿದೆ. ನಿವೃತ್ತರಾಗಲು ದೃಢವಾಗಿ ನಿಶ್ಚಯಿಸಿದಂತಿರುವ ಅವರು ಮತ್ತೆ ಅದೇ ಸಿಇಒ ಸ್ಥಾನಕ್ಕೆ ಮರುನೇಮಕ (Reappointment) ಆಗಲು ಇಚ್ಛಿಸುವುದಿಲ್ಲ ಎಂದು ಬ್ಯಾಂಕ್ ಮಂಡಳಿಗೆ ತಿಳಿಸಿದ್ದಾರೆ. ಎಚ್​ಡಿಎಫ್​ಸಿ ಬ್ಯಾಂಕ್​ನ ಇತ್ತೀಚಿನ ಆಡಳಿತಾತ್ಮಕ ವಿವಾದಗಳ (HDFC controversies) ಹಿನ್ನೆಲೆಯಲ್ಲಿ ಜಗದೀಶನ್ ಅವರ ನಿರ್ಗಮನವು ಕುತೂಹಲ ಮೂಡಿಸುತ್ತದೆ.

ಶಶಿಧರ್ ಜಗದೀಶನ್ ಅವರು 2020ರ ಅಕ್ಟೋಬರ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ದೀರ್ಘಾವಧಿಯ ಸಿಇಒ ಆದಿತ್ಯ ಪುರಿ ಅವರಿಂದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಕಳೆದ ಮೂರು ದಶಕಗಳಿಂದ ಎಚ್​ಡಿಎಫ್​ಸಿಯಲ್ಲಿರುವ ಜಗದೀಶನ್ ಅವರು 2020ರಿಂದ ಎರಡು ಅವಧಿಗೆ ಸಿಇಒ ಮತ್ತು ಎಂಡಿಯಾಗಿದ್ದಾರೆ. ಮೂರನೇ ಅವಧಿಗೂ ಅವರೇ ಮುಂದುವರಿಯುವ ನಿರೀಕ್ಷೆ ಇತ್ತು. ಆದರೆ, ಅವರು ನಿವೃತ್ತರಾಗಲು ದೃಢವಾಗಿ ನಿರ್ಧರಿಸಿದ್ದಾರೆ. ಅಕ್ಟೋಬರ್ 26ಕ್ಕೆ ಅವರ ಸೇವಾವಧಿ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: 4.5 ಸೆಕೆಂಡ್ಸ್​​ನಲ್ಲಿ 100 ಕಿ.ಮೀ. ವೇಗ: 1.90 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಬಿಡುಗಡೆ

ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನದ ಮೈಲಿಗಲ್ಲು

61 ವರ್ಷದ ಶಶಿಧರ್ ಜಗದೀಶನ್ ಅವರ ಅಧಿಕಾರಾವಧಿಯಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಐತಿಹಾಸಿಕ ವಿಲೀನ (Mega-Merger) ಯಶಸ್ವಿಯಾಗಿ ನೆರವೇರಿದೆ. ಇದು ಬ್ಯಾಂಕ್ ಅನ್ನು ಜಾಗತಿಕವಾಗಿ ಅತಿದೊಡ್ಡ ಹಣಕಾಸು ಸಂಸ್ಥೆಗಳ ಸಾಲಿನಲ್ಲಿ ನಿಲ್ಲಿಸಿತು.

ಮುಂದಿನ ಉತ್ತರಾಧಿಕಾರಿಯ ಹುಡುಕಾಟ: ಬ್ಯಾಂಕ್‌ನ ಆಡಳಿತ ಮಂಡಳಿಯು ನೂತನ ಸಿಇಒ ಆಯ್ಕೆಗಾಗಿ ಶೋಧನಾ ಸಮಿತಿಯನ್ನು (Search Committee) ರಚಿಸಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆಯೊಂದಿಗೆ ಮುಂದಿನ ಮುಖ್ಯಸ್ಥರನ್ನು ನೇಮಕ ಮಾಡಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ನ ಇತ್ತೀಚಿನ ವಿವಾದಗಳೇನು?

ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇತ್ತೀಚೆಗೆ ಕೆಲವು ಪ್ರಮುಖ ವಿವಾದಗಳು ಮತ್ತು ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಬ್ಯಾಂಕ್ ಮತ್ತು ಅದರ ಉನ್ನತ ಅಧಿಕಾರಿಗಳ (ಎಂಡಿ & ಸಿಇಒ ಶಶಿಧರ್ ಜಗದೀಶನ್ ಹಾಗೂ ಸಿಎಫ್‌ಒ ಶ್ರೀನಿವಾಸನ್ ವೈದ್ಯನಾಥನ್) ವಿರುದ್ಧ ಅಮೆರಿಕದ ಹೂಡಿಕೆದಾರರು ಅಮೆರಿಕನ್ ಡೆಪಾಸಿಟರಿ ಷೇರುಗಳ (ADS) ವಂಚನೆ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆ (Class Action Lawsuit) ಹೂಡಿದ್ದಾರೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 729 ಬಿಲಿಯನ್ ಡಾಲರ್​ಗೆ ಏರಿಕೆ; ಸಾರ್ವಕಾಲಿಕ ದಾಖಲೆ

ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ (MSRDC) ಭಾರಿ ಪ್ರಮಾಣದ ಠೇವಣಿ ಪಡೆಯಲು, ಬ್ಯಾಂಕ್ ನಿಯಮ ಮೀರಿ ಶೇ. 6.01 ರಷ್ಟು ಬಡ್ಡಿ ದರ ನೀಡಿತ್ತು. ಹೆಚ್ಚುವರಿಯಾಗಿ ನೀಡಿದ ಈ ಬಡ್ಡಿ ಮೊತ್ತವನ್ನು (ಸುಮಾರು ₹45 ಕೋಟಿ) ಬಡ್ಡಿ ಪಾವತಿ ಎಂದು ತೋರಿಸುವ ಬದಲು, MSRDCಯ ‘ರಸ್ತೆ ಸುರಕ್ಷತೆ ಜಾಗೃತಿ’ ಕಾರ್ಯಕ್ರಮದ ಮಾರ್ಕೆಟಿಂಗ್ ಮತ್ತು ಸ್ಪಾನ್ಸರ್‌ಶಿಪ್ ವೆಚ್ಚ ಎಂದು ತೋರಿಸಿ ವರದಿಗಳಲ್ಲಿ ಮುಚ್ಚಿಡಲಾಗಿತ್ತು ಎಂಬ ಆರೋಪವಿದೆ.

ಈ ಮೊಕದ್ದಮೆಯಲ್ಲಿ ಯಾವುದೇ ಆಧಾರವಿಲ್ಲ, ಷೇರು ಬೆಲೆ ಕುಸಿದಾಗ ಇಂತಹ ಹೂಡಿಕೆದಾರರ ದೂರುಗಳು ಸಾಮಾನ್ಯವಾಗಿದ್ದು, ಇದನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಬ್ಯಾಂಕ್ ತಿಳಿಸಿದೆ. ಇದೀಗ ಸಿಇಒ ಮತ್ತು ಎಂಡಿಯಾಗಿರುವ ಶಶಿಧರ್ ಜಗದೀಶನ್ ಅವರು ನಿರ್ಗಮಿಸಲಿದ್ದು, ಮುಂದಿನ ಸಿಇಒ ಯಾರು ಎನ್ನುವ ಕುತೂಹಲವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ