ಭಾರತದ ಫಾರೆಕ್ಸ್ ರಿಸರ್ವ್ಸ್ 729 ಬಿಲಿಯನ್ ಡಾಲರ್ಗೆ ಏರಿಕೆ; ಸಾರ್ವಕಾಲಿಕ ದಾಖಲೆ
India's forex reserves rise by 12 billion USD to reach new record high: ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ ನಿಧಿಯು ಆಗಸ್ಟ್ 21ರ ವಾರದಲ್ಲಿ 12.42 ಬಿಲಿಯನ್ ಡಾಲರ್ನಷ್ಟು ಹೆಚ್ಚಳಗೊಂಡಿದೆ. ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಭಾರತದ ಫಾರೆಕ್ಸ್ ರಿಸರ್ವ್ಸ್ ಆಗಸ್ಟ್ 21ಕ್ಕೆ 729 ಬಿಲಿಯನ್ ಡಾಲರ್ ಮೊತ್ತ ದಾಟಿದೆ. ಫಾರೀನ್ ಕರೆನ್ಸಿ ಮತ್ತು ಚಿನ್ನದ ಸಂಗ್ರಹದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದು ನಿಧಿ ಏರಿಕೆಗೆ ಪ್ರಮುಖ ಕಾರಣಗಳು.

ನವದೆಹಲಿ, ಆಗಸ್ಟ್ 28: ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಹೊಸ ದಾಖಲೆ ಎತ್ತರಕ್ಕೆ ಹೋಗಿದೆ. ಆಗಸ್ಟ್ 21ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 12.42 ಬಿಲಿಯನ್ ಡಾಲರ್ನಷ್ಟು ಏರಿದೆ. ಇದರೊಂದಿಗೆ ಒಟ್ಟು ನಿಧಿ ಮೊತ್ತ 729.33 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳಂತೆ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ತಲುಪಿದೆ.
ವಿದೇಶಿ ಕರೆನ್ಸಿ ಸ್ವತ್ತುಗಳ (FCA) ಹೆಚ್ಚಳ: ಮೀಸಲು ನಿಧಿಯ ಪ್ರಮುಖ ಭಾಗವಾಗಿರುವ ವಿದೇಶಿ ಕರೆನ್ಸಿ ಆಸ್ತಿಗಳು ಒಂದೇ ವಾರದಲ್ಲಿ $9.48 ಬಿಲಿಯನ್‌ನಷ್ಟು ಹೆಚ್ಚಾಗಿ $591.33 ಬಿಲಿಯನ್‌ಗೆ ತಲುಪಿವೆ.
ಬಂಗಾರದ ಮೀಸಲು ಮೌಲ್ಯ ಹೆಚ್ಚಳ: ಆರ್‌ಬಿಐ ಬಳಿಯಿರುವ ಚಿನ್ನದ ಮೀಸಲು ನಿಧಿಯ ಮೌಲ್ಯವು $2.80 ಬಿಲಿಯನ್‌ನಷ್ಟು ಹೆಚ್ಚಾಗಿದ್ದು, ಒಟ್ಟು $114.22 ಬಿಲಿಯನ್‌ಗೆ ಏರಿಕೆಯಾಗಿದೆ.
ಹಿಂದಿನ ದಾಖಲೆ ಮುರಿದ ಆರ್‌ಬಿಐ: ಈ ಹಿಂದೆ ಫೆಬ್ರವರಿಯಲ್ಲಿ ಭಾರತದ ಫೊರೆಕ್ಸ್ ನಿಧಿ $728.5 ಬಿಲಿಯನ್ ತಲುಪಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿತ್ತು. ಆ ದಾಖಲೆಯನ್ನು ಈಗಿನ ಹೊಸ ಏರಿಕೆ ದಾಟಿದೆ.
ಆರ್‌ಬಿಐ ಕೈಗೊಂಡ ಕ್ರಮಗಳ ಪ್ರಭಾವ: ಆರ್‌ಬಿಐ ಮತ್ತು ಭಾರತ ಸರ್ಕಾರವು ವಿದೇಶಿ ಬಂಡವಾಳ ಹರಿವನ್ನು ಆಕರ್ಷಿಸಲು ಜಾರಿಗೆ ತಂದಿದ್ದ ವಿಶೇಷ ಠೇವಣಿ ಮತ್ತು ಆರ್ಥಿಕ ಉತ್ತೇಜನಾ ಕ್ರಮಗಳಿಂದಾಗಿ ದೇಶಕ್ಕೆ ವಿದೇಶಿ ಕರೆನ್ಸಿ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
ವಿದೇಶಿ ವಿನಿಮಯ ಮೀಸಲು ನಿಧಿಯ ಈ ಭಾರಿ ಹೆಚ್ಚಳವು ಭಾರತೀಯ ರೂಪಾಯಿಯ ಮೌಲ್ಯ ಸ್ಥಿರವಾಗಿರಲು ಮತ್ತು ಜಾಗತಿಕ ಆರ್ಥಿಕ ಸಂಕಷ್ಟಗಳ ಸಮಯದಲ್ಲಿ ಆರ್ಥಿಕತೆಗೆ ಬಲವಾದ ಭದ್ರತೆ ಒದಗಿಸಲು ಸಹಕಾರಿಯಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




