AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ ತಿಂಗಳಲ್ಲಿ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಇಂದ್ರ ಜಾತ್ರಾ ಸೇರಿದಂತೆ 13 ದಿನಗಳವರೆಗೆ ಬ್ಯಾಂಕ್ ಬಂದ್; ಮುಷ್ಕರವೂ ಇದೆ ಗಮನಿಸಿ

Bank holidays in 2026 September: ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿ ವಿವಿಧ ಹಬ್ಬ ಹರಿದಿನಗಳಿರುವ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 13 ದಿನಗಳವರೆಗೆ ರಜೆ ಇರುತ್ತದೆ. ಕರ್ನಾಟಕದಲ್ಲಿ ಏಳು ದಿನ ರಜೆ ಇರುತ್ತದೆ. ಇದರಲ್ಲಿ ಆರು ದಿನ ರೆಗ್ಯುಲರ್ ರಜೆಗಳೇ ಇವೆ. ಇದೇ ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ಮುಷ್ಕರಗಳು ನಡೆದಲ್ಲಿ ಹೆಚ್ಚುವರಿ 4 ದಿನ ಬ್ಯಾಂಕ್ ಬಂದ್ ಆಗಿರುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಇಂದ್ರ ಜಾತ್ರಾ ಸೇರಿದಂತೆ 13 ದಿನಗಳವರೆಗೆ ಬ್ಯಾಂಕ್ ಬಂದ್; ಮುಷ್ಕರವೂ ಇದೆ ಗಮನಿಸಿ
ಎಕ್ಸಿಸ್ ಬ್ಯಾಂಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2026 | 4:24 PM

Share

ನವದೆಹಲಿ, ಆಗಸ್ಟ್ 28: ಆರ್​​ಬಿಐ ಕ್ಯಾಲೆಂಡರ್ ಪ್ರಕಾರ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ವಿವಿಧೆಡೆ ಬ್ಯಾಂಕುಗಳಿಗೆ 13 ದಿನಗಳವರೆಗೆ ರಜೆ (Bank holidays) ಇದೆ. ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶನ ಹಬ್ಬ, ಮಹಾರಾಜ ಹರಿಸಿಂಗ್ ಜಯಂತಿ ಇತ್ಯಾದಿ ವಿಶೇಷ ಹಬ್ಬ ಹರಿದಿನಗಳಿದ್ದು, ಪ್ರದೇಶವಾರ ರಜಾದಿನಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇದೆ. ಸೆಪ್ಟೆಂಬರ್​ನ 13 ದಿನಗಳ ರಜೆಯಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಒಳಗೊಂಡಿವೆ. ಕರ್ನಾಟಕದಲ್ಲಿ 7 ದಿನ ಬ್ಯಾಂಕ್​ಗಳು ಬಂದ್ ಆಗಿರುತ್ತವೆ. ರಾಜ್ಯದಲ್ಲಿ ಗಣೇಶ ಚತುರ್ಥಿಗೆ ರಜೆ ಇರುತ್ತದೆ.

ಇದೇ ವೇಳೆ, ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ನೌಕರರ ಮುಷ್ಕರ ನಡೆಯುತ್ತಿದೆ. ಸೆಪ್ಟೆಂಬರ್ 11ರಂದು ಒಂದು ದಿನದ ಮುಷ್ಕರ, ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನ ಮುಷ್ಕರ ನಡೆಯುವುದಿದೆ. ಇದು ಆದಲ್ಲಿ ಆ ನಾಲ್ಕು ದಿನ ಬ್ಯಾಂಕ್ ಬಂದ್ ಆಗಿರುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್ 1ರಿಂದ ಐಟಿಆರ್, ವಿದೇಶ ಪ್ರಯಾಣ, ಎಫ್​ಡಿ ಇತ್ಯಾದಿ ನಿಯಮ ಬದಲಾವಣೆಗಳಿವೆ, ಗಮನಿಸಿ

2026ರ ಸೆಪ್ಟೆಂಬರ್​ನಲ್ಲಿ ದೇಶದ ವಿವಿಧೆಡೆ ಬ್ಯಾಂಕ್ ರಜಾದಿನಗಳು

  • ಸೆಪ್ಟೆಂಬರ್ 4, ಶುಕ್ರವಾರ: ಕೃಷ್ಣ ಜನ್ಮಾಷ್ಟಮಿ (ಹಲವು ಕಡೆ ರಜೆ)
  • ಸೆಪ್ಟೆಂಬರ್ 6: ಭಾನುವಾರದ ರಜೆ
  • ಸೆಪ್ಟೆಂಬರ್ 12: ಎರಡನೇ ಶನಿವಾರದ ರಜೆ
  • ಸೆಪ್ಟೆಂಬರ್ 13: ಭಾನುವಾರದ ರಜೆ
  • ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ (ಹಲವು ಕಡೆ ರಜೆ)
  • ಸೆಪ್ಟೆಂಬರ್ 15, ಮಂಗಳವಾರ: ನುವಾಖಾಯ್, ಗಣೇಶ ಚತುರ್ಥಿ (ಹಲವೆಡೆ ರಜೆ)
  • ಸೆಪ್ಟೆಂಬರ್ 20: ಭಾನುವಾರದ ರಜೆ
  • ಸೆಪ್ಟೆಂಬರ್ 21, ಸೋಮವಾರ: ಶ್ರೀ ನಾರಾಯಣಗುರು ಸಮಾಧಿ, ಶ್ರೀಮಂತ ಶಂಕರದೇವ ಜನ್ಮೋತ್ಸವ (ಅಸ್ಸಾಂ, ಕೇರಳ ರಾಜ್ಯಗಳಲ್ಲಿ ರಜೆ)
  • ಸೆಪ್ಟೆಂಬರ್ 22, ಮಂಗಳವಾರ: ಕರ್ಮ ಪೂಜಾ (ಜಾರ್ಖಂಡ್​ನಲ್ಲಿ ರಜೆ)
  • ಸೆಪ್ಟೆಂಬರ್ 23, ಬುಧವಾರ: ಮಹಾರಾಜ ಹರಿಸಿಂಗ್ ಜಯಂತಿ (ಜಮ್ಮು ಕಾಶ್ಮೀರದಲ್ಲಿ ರಜೆ)
  • ಸೆಪ್ಟೆಂಬರ್ 25, ಶುಕ್ರವಾರ: ಇಂದ್ರಜಾತ್ರ (ಸಿಕ್ಕಿಂನಲ್ಲಿ ರಜೆ)
  • ಸೆಪ್ಟೆಂಬರ್ 26: ನಾಲ್ಕನೇ ಶನಿವಾರದ ರಜೆ
  • ಸೆಪ್ಟೆಂಬರ್ 27: ಭಾನುವಾರದ ರಜೆ

ಕರ್ನಾಟಕದಲ್ಲಿ ಸೆಪ್ಟೆಂಬರ್​ನಲ್ಲಿ ಇರುವ ಬ್ಯಾಂಕ್ ರಜೆಗಳು

  • ಸೆಪ್ಟೆಂಬರ್ 6: ಭಾನುವಾರದ ರಜೆ
  • ಸೆಪ್ಟೆಂಬರ್ 12: ಎರಡನೇ ಶನಿವಾರದ ರಜೆ
  • ಸೆಪ್ಟೆಂಬರ್ 13: ಭಾನುವಾರದ ರಜೆ
  • ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ
  • ಸೆಪ್ಟೆಂಬರ್ 20: ಭಾನುವಾರದ ರಜೆ
  • ಸೆಪ್ಟೆಂಬರ್ 26: ನಾಲ್ಕನೇ ಶನಿವಾರದ ರಜೆ
  • ಸೆಪ್ಟೆಂಬರ್ 27: ಭಾನುವಾರದ ರಜೆ

ಇದನ್ನೂ ಓದಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ನೌಕರರಿಂದ ಸರಣಿ ಮುಷ್ಕರಗಳಿಗೆ ಪ್ಲಾನ್; ಸೆಪ್ಟೆಂಬರ್​ನಲ್ಲಿ ಹಲವು ದಿನ ಬ್ಯಾಂಕ್ ಬಂದ್

ಬ್ಯಾಂಕ್ ನೌಕರರ ಮುಷ್ಕರದಿಂದ ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ಬಂದ್ ಆಗಬಹುದು

  • ಸೆಪ್ಟೆಂಬರ್ 11, ಶುಕ್ರವಾರ
  • ಸೆಪ್ಟೆಂಬರ್ 28, ಸೋಮವಾರ
  • ಸೆಪ್ಟೆಂಬರ್ 29, ಮಂಗಳವಾರ
  • ಸೆಪ್ಟೆಂಬರ್ 30, ಬುಧವಾರ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us