AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಪ್ಟೆಂಬರ್ 1ರಿಂದ ಐಟಿಆರ್, ವಿದೇಶ ಪ್ರಯಾಣ, ಎಫ್​ಡಿ ಇತ್ಯಾದಿ ನಿಯಮ ಬದಲಾವಣೆಗಳಿವೆ, ಗಮನಿಸಿ

Important financial rule changes in 2026 September: ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿರುವ ಅಥವಾ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿರುವ 5 ಪ್ರಮುಖ ಹಣಕಾಸು ನಿಯಮ ಬದಲಾವಣೆಗಳ ವಿವರ ಇಲ್ಲಿದೆ. ಎಲ್​ಪಿಜಿ ಸಂಪರ್ಕ ಹೊಂದಿದಲ್ಲಿ ಅದರ ಬಯೋಮೆಟ್ರಿಕ್ ಕೆವೈಸಿ ಪೂರ್ಣಗೊಂಡಿರದಿದ್ದರೆ ಗ್ಯಾಸ್ ಸಿಗಲು ತೊಂದರೆಯಾಗಬಹುದು. ವಿದೇಶ ಪ್ರಯಾಣ ಹೋಗುವವರಿಗೆ ಖುಷಿಯ ಸುದ್ದಿಯೂ ಇದೆ.

ಸೆಪ್ಟೆಂಬರ್ 1ರಿಂದ ಐಟಿಆರ್, ವಿದೇಶ ಪ್ರಯಾಣ, ಎಫ್​ಡಿ ಇತ್ಯಾದಿ ನಿಯಮ ಬದಲಾವಣೆಗಳಿವೆ, ಗಮನಿಸಿ
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 28, 2026 | 2:21 PM

Share

ನವದೆಹಲಿ, ಆಗಸ್ಟ್ 28: ಆಗಸ್ಟ್ ತಿಂಗಳು ಕಳೆದು ಸೆಪ್ಟೆಂಬರ್ ಬರುತ್ತಿದೆ. ಆಗಸ್ಟ್​ನಲ್ಲಿ ಕೆಲ ಹಣಕಾಸು ಯೋಜನೆ, ಕೆಲಸಗಳಿಗೆ ಡೆಡ್​ಲೈನ್ ಇತ್ತು. ಸೆಪ್ಟೆಂಬರ್​ನಲ್ಲೂ ಕೆಲ ಹಣಕಾಸು ನಿಯಮಗಳ (Financial rules) ಬದಲಾವಣೆ, ಪರಿಷ್ಕರಣೆ, ಡೆಡ್​ಲೈನ್​ಗಳಿವೆ. ಆದಾಯ ತೆರಿಗೆ ಸಲ್ಲಿಕೆ ವಿಚಾರದಲ್ಲಿ ಬದಲಾವಣೆ ಗಮನಿಸಬೇಕಾಗುತ್ತದೆ. ವಿವಿಧ ಇಂಧನಗಳ ರೀಟೇಲ್ ದರಗಳ ಪರಿಷ್ಕರಣೆ ತಿಂಗಳ ಮೊದಲ ದಿನವೇ ಆಗುತ್ತದೆ. ಇವೂ ಒಳಗೊಂಡಂತೆ ಒಂದಷ್ಟು ಬದಲಾವಣೆಗಳು ಸೆಪ್ಟೆಂಬರ್​ನಲ್ಲಿ ಏನಿವೆ ಎನ್ನುವ ಮಾಹಿತಿ ಇಲ್ಲಿದೆ.

ಸೆಪ್ಟೆಂಬರ್ 1 ರಿಂದ ಆಗಲಿರುವ ಪ್ರಮುಖ 5 ಹಣಕಾಸು ಬದಲಾವಣೆಗಳು

  • ಐಟಿಆರ್ ಸಲ್ಲಿಕೆ ಗಡುವು: ಆಡಿಟಿಂಗ್ (Audit) ಮಾಡಿಸಬೇಕಾದ ಅಗತ್ಯವಿಲ್ಲದ ತೆರಿಗೆದಾರರು (Assessment Year 2026-27) ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಸೆಪ್ಟೆಂಬರ್ 1 ರಿಂದ ಬಡ್ಡಿ ಮತ್ತು ದಂಡದೊಂದಿಗೆ ವಿಳಂಬ ರಿಟರ್ನ್ಸ್ (Belated ITR) ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಎಚ್​ಡಿಎಫ್​ಸಿ ಸೇರಿದಂತೆ ಮೂರು ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ದರಗಳ ಪರಿಷ್ಕರಣೆ; ಈ ತಿಂಗಳಿಂದಲೇ ಜಾರಿ

  • ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ (e-KYC): ಅಡುಗೆ ಅನಿಲ (LPG) ಸಂಪರ್ಕ ಹೊಂದಿರುವ ಗ್ರಾಹಕರಿಗೆ ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸಲು ನೀಡಿದ್ದ ಗಡುವು ಆಗಸ್ಟ್ 31 ಕ್ಕೆ ಕೊನೆಗೊಳ್ಳಲಿದೆ. ಸೆಪ್ಟೆಂಬರ್ 1 ರಿಂದ ಇ-ಕೆವೈಸಿ ಪೂರ್ಣಗೊಳ್ಳದಿದ್ದರೆ ಸಬ್ಸಿಡಿ ಅಥವಾ ಗೃಹ ಬಳಕೆ ದರದಲ್ಲಿ ಸಿಲಿಂಡರ್ ಪಡೆಯಲು ಅಡಚಣೆಯಾಗಬಹುದು. ಜೊತೆಗೆ ಸೆಪ್ಟೆಂಬರ್ 1 ರಂದು LPG ಸಿಲಿಂಡರ್ ಬೆಲೆಗಳ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.
  • ವಿದೇಶಿ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಮುದ್ರೆ ರದ್ದು: ಭಾರತದಿಂದ ವಿದೇಶಕ್ಕೆ ಪ್ರಯಾಣಿಸುವ ವಿಮಾನ ಪ್ರಯಾಣಿಕರು ಸೆಪ್ಟೆಂಬರ್ 1 ರಿಂದ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಭೌತಿಕ ಬೋರ್ಡಿಂಗ್ ಪಾಸ್‌ಗೆ ಮುದ್ರೆ (Stamp) ಹಾಕಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಮೊಬೈಲ್‌ನಲ್ಲಿರುವ ಡಿಜಿಟಲ್ ಬೋರ್ಡಿಂಗ್ ಪಾಸ್ ತೋರಿಸಿ ಸುಲಭವಾಗಿ ನಿರ್ಗಮಿಸಬಹುದು.
  • ಬ್ಯಾಂಕ್ ಎಫ್‌ಡಿ ನಿಯಮಗಳು ಮತ್ತು ಬಡ್ಡಿದರ ಪರಿಷ್ಕರಣೆ: ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಮುಖ ಬ್ಯಾಂಕ್‌ಗಳು ತಮ್ಮ ಫಿಕ್ಸ್ಡ್ ಡೆಪಾಸಿಟ್ (FD) ಬಡ್ಡಿದರಗಳನ್ನು ಪರಿಷ್ಕರಿಸುವ ನಿರೀಕ್ಷೆಯಿದೆ. ದೊಡ್ಡ ಮೊತ್ತದ ಠೇವಣಿಗಳ ದರ ಪಾರದರ್ಶಕತೆ ನಿಯಮಗಳು ಆಕ್ಟೋಬರ್‌ನಿಂದ ಸಂಪೂರ್ಣ ಜಾರಿಯಾಗಲಿವೆ.

ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಆಮದು ಸುಂಕ ಇಳಿಸಲು ಸರ್ಕಾರ ಸಜ್ಜು; ಗ್ರಾಮ್​ಗೆ 1,300 ರೂನಷ್ಟು ಕುಸಿಯುತ್ತಾ ಬಂಗಾರದ ದರ?

  • ಇಂಧನ ಮತ್ತು ಎಟಿಎಂ ದರಗಳ ಪರಿಷ್ಕರಣೆ: ಪ್ರತಿ ತಿಂಗಳ 1ನೇ ತಾರೀಖಿನಂತೆ ಸೆಪ್ಟೆಂಬರ್ 1 ರಂದು ವಿಮಾನ ಇಂಧನ ದರ (ATF), ಪೆಟ್ರೋಲ್, ಎಲ್​ಪಿಜಿ ದರಗಳು ಹಾಗೂ ವಿವಿಧ ಬ್ಯಾಂಕ್‌ಗಳ ಉಚಿತ ಎಟಿಎಂ (ATM) ವಹಿವಾಟು ಮಿತಿ ಮತ್ತು ಸೇವಾ ಶುಲ್ಕಗಳಲ್ಲಿ ಪರಿಷ್ಕರಣೆ ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಸಾಗರ ಮುಂಬಾಳು ಬಳಿ ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಸ್ಲೀಪರ್ ಬಸ್
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು