ಎಚ್ಡಿಎಫ್ಸಿ ಸೇರಿದಂತೆ ಮೂರು ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ದರಗಳ ಪರಿಷ್ಕರಣೆ; ಈ ತಿಂಗಳಿಂದಲೇ ಜಾರಿ
HDFC bank, Axis Bank and Federal Bank revise FD rates: ಎಚ್ಡಿಎಫ್ಸಿ ಬ್ಯಾಂಕ್, ಫೆಡರಲ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ತಮ್ಮ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ಪರಿಷ್ಕರಿಸಿವೆ. ಫೆಡರಲ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 6.70ರವರೆಗೂ ಬಡ್ಡಿ ಆಫರ್ ಮಾಡುತ್ತಿದೆ. ಎಕ್ಸಿಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇ. 7.25ರವರೆಗೂ ಬಡ್ಡಿ ನೀಡುತ್ತದೆ. ಈ ಮೂರು ಬ್ಯಾಂಕ್ಗಳ ಹೊಸ ಡೆಪಾಸಿಟ್ ದರಗಳು ಈಗಾಗಲೇ ಚಾಲನೆಯಲ್ಲಿವೆ.

ನವದೆಹಲಿ, ಆಗಸ್ಟ್ 28: ಮಾರುಕಟ್ಟೆ ಅನಿಶ್ಚಿತವಾಗಿರುವ ಈ ಸಂದರ್ಭದಲ್ಲಿ ಫಿಕ್ಸೆಡ್ ಡೆಪಾಸಿಟ್ಗಳು (FD- Fixed Deposit) ಅಥವಾ ಬ್ಯಾಂಕ್ ಠೇವಣಿಗಳು ಸುರಕ್ಷಿತ ಹೂಡಿಕೆ ಎನಿಸುತ್ತವೆ. ಮಾರುಕಟ್ಟೆ ಓಡುವ ಕುದುರೆಯಾಗಿರುವ ಸಂದರ್ಭದಲ್ಲೂ ಹೂಡಿಕೆಯಲ್ಲಿ ಒಂದು ಭಾಗವು ನಿಶ್ಚಿತ ಠೇವಣಿಗೆ ನಿಯೋಜಿತವಾಗಿರುವುದು ಉತ್ತಮ ಎನ್ನುವುದು ತಜ್ಞರ ಸಲಹೆ. ಇದೇ ವೇಳೆ, ಭಾರತದ ಮೂರು ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ HDFC ಬ್ಯಾಂಕ್, ಎಕ್ಸಿಸ್ ಬ್ಯಾಂಕ್ (Axis Bank) ಮತ್ತು ಫೆಡರಲ್ ಬ್ಯಾಂಕ್ (Federal Bank) ತಮ್ಮ ಫಿಕ್ಸ್ಡ್ ಡೆಪಾಸಿಟ್ (FD) ಬಡ್ಡಿದರಗಳನ್ನು ಪರಿಷ್ಕರಿಸಿವೆ. 7.25% ವರೆಗೆ ವಾರ್ಷಿಕ ಬಡ್ಡಿ (Annual Interest) ಆಫರ್ ಮಾಡಲಾಗುತ್ತಿದೆ.
HDFC ಬ್ಯಾಂಕ್ನ ದರ ಪರಿಷ್ಕರಣೆ ಆಗಸ್ಟ್ 19ರಿಂದ
ಮೂರು ಕೋಟಿ ರೂ ಒಳಗಿನ ಠೇವಣಿ, 3 ವರ್ಷ 1 ದಿನದಿಂದ 4 ವರ್ಷ 7 ತಿಂಗಳ ಅವಧಿಯ ಠೇವಣಿಗೆ ಎಚ್ಡಿಎಫ್ಸಿ ಬ್ಯಾಂಕ್ ಗರಿಷ್ಠ ಬಡ್ಡಿ ನೀಡುತ್ತಿದೆ. ಸಾಮಾನ್ಯ ನಾಗರಿಕರಿಗೆ 6.50%, ಹಿರಿಯ ನಾಗರಿಕರಿಗೆ 7.10% ಬಡ್ಡಿ ಸಿಗುತ್ತದೆ. ಈ ಹೊಸ ದರಗಳು ಆಗಸ್ಟ್ 19ರಿಂದಲೇ ಚಾಲನೆಗೊಂಡಿವೆ.
ಎಕ್ಸಿಸ್ ಬ್ಯಾಂಕ್ ಹೊಸ ದರ ಆಗಸ್ಟ್ 27ರಿಂದ
ಎಕ್ಸಿಸ್ ಬ್ಯಾಂಕ್ ಸಾಮಾನ್ಯ ಖಾತೆದಾರರ 5ರಿಂದ 10 ವರ್ಷದ ಅವಧಿಯ ನಿಶ್ಚಿತ ಠೆವಣಿಗಳಿಗೆ 6.50% ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ 7.25% ಬಡ್ಡಿ ಸಿಗುತ್ತದೆ. ಈ ದರವು ಆಗಸ್ಟ್ 27ರಿಂದಲೇ ಆರಂಭವಾಗಿದೆ.
ಫೆಡರಲ್ ಬ್ಯಾಂಕ್ ಹೊಸ ದರ ಆಗಸ್ಟ್ 17ರಿಂದ
ಫೆಡರಲ್ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 6.70% ವರೆಗೂ ಬಡ್ಡಿ ಆಫರ್ ಮಾಡುತ್ತದೆ. 48 ತಿಂಗಳ ಠೇವಣಿಗೆ ಈ ಗರಿಷ್ಠ ಬಡ್ಡಿ ದರ ಇರುತ್ತದೆ. ಇದೇ ಠೇವಣಿಗೆ ಹಿರಿಯ ನಾಗರಿಕರಿಗೆ 7.20% ಬಡ್ಡಿ ನೀಡಲಾಗುತ್ತದೆ.
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್; ವಯಸ್ಸಿಗೆ ಅನುಗುಣವಾಗಿ ಠೇವಣಿ ಹೂಡಿಕೆ ನಿಯಮಗಳು; ಅವಿವಾಹಿತರು, ವಿವಾಹಿತರು, ನಿವೃತ್ತರು ಏನು ಮಾಡಬೇಕು?
ಇತರ ಕೆಲವು ಖಾಸಗಿ ಬ್ಯಾಂಕ್‌ಗಳಾದ DCB ಬ್ಯಾಂಕ್ (7.50% ವರೆಗೆ) ಮತ್ತು IDFC ಫಸ್ಟ್ ಬ್ಯಾಂಕ್ (7.25% ವರೆಗೆ) ಇನ್ನೂ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




