AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ನೌಕರರಿಂದ ಸರಣಿ ಮುಷ್ಕರಗಳಿಗೆ ಪ್ಲಾನ್; ಸೆಪ್ಟೆಂಬರ್​ನಲ್ಲಿ ಹಲವು ದಿನ ಬ್ಯಾಂಕ್ ಬಂದ್

Bank employees plan series of strikes in September-October: ಭಾರತದ ಬ್ಯಾಂಕ್ ನೌಕರರ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಷ್ಟ್ರವ್ಯಾಪಿ ಬೃಹತ್ ಹೋರಾಟಕ್ಕೆ ಅಣಿಗೊಂಡಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಸರಣಿ ಮುಷ್ಕರಗಳನ್ನು ನಡೆಸಲು ಯೋಜಿಸಿವೆ. ಸೆಪ್ಟೆಂಬರ್ 11ರಂದು ಒಂದು ದಿನ, ಸೆಪ್ಟೆಂಬರ್ 28ರಿಂದ ಮೂರು ದಿನ, ಹಾಗೂ ಅಕ್ಟೋಬರ್​ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿವೆ.

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ನೌಕರರಿಂದ ಸರಣಿ ಮುಷ್ಕರಗಳಿಗೆ ಪ್ಲಾನ್; ಸೆಪ್ಟೆಂಬರ್​ನಲ್ಲಿ ಹಲವು ದಿನ ಬ್ಯಾಂಕ್ ಬಂದ್
ಎಸ್​ಬಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 24, 2026 | 12:13 PM

Share

ಮುಖ್ಯಾಂಶಗಳು

  • ಬ್ಯಾಂಕ್ ನೌಕರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬೃಹತ್ ಹೋರಾಟಕ್ಕೆ ಅಣಿಗೊಂಡಿದ್ದಾರೆ.
  • ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಸರಣಿ ಮುಷ್ಕರಗಳನ್ನು ನಡೆಸಲು ಯೋಜಿಸಿವೆ.
  • ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಬ್ಯಾಂಕ್ ನೌಕರರು ಮೂರು ಬಾರಿ ಮುಷ್ಕರ ನಡೆಸುತ್ತಿದ್ದಾರೆ.

ನವದೆಹಲಿ, ಆಗಸ್ಟ್ 24: ವಾರದಲ್ಲಿ 5 ದಿನಗಳ ಕೆಲಸದ (5-day workweek) ಬೇಡಿಕೆಯ ಈಡೇರಿಕೆಯಲ್ಲಿ ಆಗುತ್ತಿರುವ ವಿಳಂಬ ಹಾಗೂ ಸರ್ಕಾರದ ಪರಿಷ್ಕೃತ ಕಾರ್ಯಕ್ಷಮತೆ-ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆ ವಿರೋಧಿಸಿ, ಬ್ಯಾಂಕ್ ನೌಕರರ ಯೂನಿಯನ್‌ಗಳ ಒಕ್ಕೂಟವಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ಸರಣಿ ಮುಷ್ಕರಗಳಿಗೆ (Bank employees strikes) ಕರೆ ನೀಡಿದೆ. ಮುಷ್ಕರದ ವಿವಿಧ ದಿನಾಂಕಗಳ ಮಾಹಿತಿ ಇಂತಿದೆ:

  • ಸೆಪ್ಟೆಂಬರ್ 11 (ಶುಕ್ರವಾರ): ಒಂದು ದಿನದ ಅಖಿಲ ಭಾರತ ಮುಷ್ಕರ.
  • ಸೆಪ್ಟೆಂಬರ್ 28 ರಿಂದ 30: ಮೂರು ದಿನಗಳ ಕಾಲ ಸತತ ಮುಷ್ಕರ (ಅರ್ಧ ವಾರ್ಷಿಕ ಮುಕ್ತಾಯದ ಸಮಯ).
  • ಅಕ್ಟೋಬರ್ 26 ರಿಂದ: ಬೇಡಿಕೆಗಳು ಈಡೇರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ.

ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್; ವಯಸ್ಸಿಗೆ ಅನುಗುಣವಾಗಿ ಠೇವಣಿ ಹೂಡಿಕೆ ನಿಯಮಗಳು; ಅವಿವಾಹಿತರು, ವಿವಾಹಿತರು, ನಿವೃತ್ತರು ಏನು ಮಾಡಬೇಕು?

ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳು

  • 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ: 2024ರ ಮಾರ್ಚ್​ನಲ್ಲಿ ನಡೆದ 12ನೇ ದ್ವಿಪಕ್ಷೀಯ ಒಪ್ಪಂದದ (Bipartite Settlement) ಅಡಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ 40 ನಿಮಿಷ ಹೆಚ್ಚುವರಿ ಕೆಲಸ ಮಾಡುವ ಮೂಲಕ ವಾರದಲ್ಲಿ 5 ದಿನ ಮಾತ್ರ ಬ್ಯಾಂಕ್ ಕೆಲಸ ಇರಬೇಕೆಂಬ ಪ್ರಸ್ತಾವನೆಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಒಪ್ಪಿಗೆ ನೀಡಿತ್ತು. ಆದರೆ ಎರಡು ವರ್ಷ ಕಳೆದರೂ ಸರ್ಕಾರದಿಂದ ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ.
  • ಪಿಎಲ್‌ಐ (PLI) ಯೋಜನೆ ವಿರೋಧ: ಹಿರಿಯ ಅಧಿಕಾರಿಗಳಿಗೆ ಮತ್ತು ಸಾಮಾನ್ಯ ನೌಕರರಿಗೆ ಅನ್ವಯವಾಗುವ ಪ್ರೋತ್ಸಾಹಕ ಧನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಯೂನಿಯನ್‌ಗಳು ಆಕ್ಷೇಪಿಸಿವೆ.
  • ಇತರ ಬೇಡಿಕೆಗಳು: ಪಿಂಚಣಿ ನವೀಕರಣ (Pension Updation), ಎಲ್ಲ ಪಿಂಚಣಿದಾರರಿಗೆ ಒಂದೇ ರೀತಿಯ ಡಿಎ (DA) ಸೂತ್ರ ಮತ್ತು ಎನ್‌ಪಿಎಸ್ (NPS) ಬದಲಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಅವಕಾಶ ಕಲ್ಪಿಸುವುದು ಮುಂತಾದ ಬಾಕಿ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗಿದೆ.

ಇದನ್ನೂ ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶಕ್ತಿ ತುಂಬುತ್ತಿರುವ ‘ಮೇಡ್ ಇನ್ ಇಂಡಿಯಾ’ ಚಿಪ್‌ಗಳು

ಸೆಪ್ಟೆಂಬರ್​ನಲ್ಲಿ ಬ್ಯಾಂಕ್ ಸೇವೆ ಪಡೆಯುವವರ ಗಮನಕ್ಕೆ

ಬ್ಯಾಂಕ್ ನೌಕರರ ಮುಷ್ಕರ ನಡೆಯುವ ದಿನಾಂಕಗಳತ್ತ ಗ್ರಾಹಕರು ಗಮನ ಹರಿಸಬೇಕು. ಸೆಪ್ಟೆಂಬರ್ 11 ಶುಕ್ರವಾರವಾದ್ದರಿಂದ, ನಂತರದ ಶನಿವಾರ ಹಾಗೂ ಭಾನುವಾರ ರಜೆ ಸೇರಿ ಒಟ್ಟು ಸತತ ಮೂರು-ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಹಾಗೆಯೇ, ಸೆಪ್ಟೆಂಬರ್ 28ರಿಂದ 30, ಎಂದರೆ ಸೋಮವಾರದಿಂದ ಬುಧವಾರದವರೆಗೆ ಮುಷ್ಕರ ನಡೆಸುವ ಉದ್ದೇಶ ಇದೆ. ಸೆಪ್ಟೆಂಬರ್ 26, ನಾಲ್ಕನೇ ಶನಿವಾರ ರಜೆ ಇರುತ್ತದೆ. ಭಾನುವಾರ ಸೇರಿಸಿದರೆ ಸೆಪ್ಟೆಂಬರ್ 26ರಿಂದ 30ರವರೆಗೆ ಸತತ ಐದು ದಿನಗಳು ಬ್ಯಾಂಕ್ ಬಂದ್ ಆಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Mon, 24 August 26

Follow Us
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ವೇಳೆ ದೇಶ ವಿರೋಧಿ ಹಾಡು ವೈರಲ್!
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ಬಿಗ್ ಬಾಸ್ ಮನೆಗೆ 3 ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಕ್ಕು ವೀಕ್ಷಕರಿಗೆ
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ನಾಗೇಂದ್ರ ರಾಜೀನಾಮೆಗೆ ಆಗ್ರಹ:  3 ದಿಕ್ಕಲ್ಲೂ ವಿಧಾನಸೌಧ ಮುತ್ತಿಗೆ ಪ್ಲಾನ್
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಕಾರು ದೆಹಲಿಯಲ್ಲಿ ಅಪಘಾತ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು SIR​​ ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ದೊರೆಯುವ ಸಾಧ್ಯತೆ
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
‘ಟಾಕ್ಸಿಕ್’ಗೆ 100 ಪೀಸ್ ಆರ್ಕೆಸ್ಟ್ರಾ, ಅನುಭವ ಹಂಚಿಕೊಂಡ ಗಾಯಕ ಸಂತೋಷ್
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕರಡಿ, ಚಿರತೆ ಆಯ್ತು ಈಗ ಕೊಪ್ಪಳದಲ್ಲಿ ಹುಲಿ ಕಾಟ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್