Axis Bank Citibank Deal- ಸಿಟಿಬ್ಯಾಂಕ್ ಆ್ಯಕ್ಸಿಸ್ ಬ್ಯಾಂಕ್ ಡೀಲ್; 30 ಲಕ್ಷ ಸಿಟಿ ಖಾತೆಗಳ ಕಥೆ ಏನು?

Axis Bank Acquires Citibank's India Business: ಅಮೆರಿಕದ ಸಿಟಿಬ್ಯಾಂಕ್​ನ ಭಾರತೀಯ ಬಿಸಿನೆಸ್ ಅನ್ನು ಆ್ಯಕ್ಸಿಸ್ ಬ್ಯಾಂಕ್ 11,603 ಕೋಟಿ ರೂಗೆ ಖರೀದಿಸಿದೆ. ಮಾರ್ಚ್ 1ರಿಂದ ಸಿಟಿ ಬ್ಯಾಂಕ್ ಗ್ರಾಹಕರ ಖಾತೆಗಳು ಮತ್ತು ಹೂಡಿಕೆಗಳು ಆ್ಯಕ್ಸಿಸ್ ಬ್ಯಾಂಕ್​ಗೆ ವರ್ಗಾವಣೆ ಆಗುತ್ತವೆ.

Axis Bank Citibank Deal- ಸಿಟಿಬ್ಯಾಂಕ್ ಆ್ಯಕ್ಸಿಸ್ ಬ್ಯಾಂಕ್ ಡೀಲ್; 30 ಲಕ್ಷ ಸಿಟಿ ಖಾತೆಗಳ ಕಥೆ ಏನು?
ಆ್ಯಕ್ಸಿಸ್ ಬ್ಯಾಂಕ್, ಸಿಟಿಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Mar 01, 2023 | 10:52 AM

ನವದೆಹಲಿ: ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಆ್ಯಕ್ಸಿಸ್ ಬ್ಯಾಂಕ್ (Axis Bank) ಇದೀಗ ಅಮೆರಿಕ ಮೂಲದ ಸಿಟಿಬ್ಯಾಂಕ್​ನ ಭಾರತೀಯ ವ್ಯವಹಾರಗಳನ್ನು (Citibank’s India Business) ಖರೀದಿಸಿದೆ. ಸಿಟಿಗ್ರೂಪ್​ನ ಭಾರತೀಯ ಗ್ರಾಹಕ ವ್ಯವಹಾರ ಮತ್ತು ಸಿಟಿಕಾರ್ಪ್ ಫೈನಾನ್ಸ್ ಸಂಸ್ಥೆಯಿಂದ ಎನ್​ಬಿಎಫ್​ಸಿ (ಬ್ಯಾಂಕೇತರ ಹಣಕಾಸು) ವ್ಯವಹಾರಗಳ ಖರೀದಿ ಪ್ರಕ್ರಿಯೆಯನ್ನು ಆ್ಯಕ್ಸಿಸ್ ಬ್ಯಾಂಕ್ ಪೂರ್ಣಗೊಳಿಸಿದೆ. ಈ ಡೀಲ್​ನ ಮೊತ್ತ ಒಟ್ಟು 11,603 ಕೋಟಿ ರೂಪಾಯಿ ಆಗಿದೆ. ಸಿಟಿಬ್ಯಾಂಕ್​ನ 30 ಲಕ್ಷ ಗ್ರಾಹಕರು ಮತ್ತವರ ಖಾತೆಗಳೆಲ್ಲವೂ ಇಂದು ಮಾರ್ಚ್ 1ರಿಂದ ಎಕ್ಸಿಸ್ ಬ್ಯಾಂಕ್​ನ ಪಾಲಾಗುತ್ತಿವೆ.

ಅಮೆರಿಕದ ಸಿಟಿಬ್ಯಾಂಕ್ 1902ರಲ್ಲೇ ಭಾರತದಲ್ಲಿ ವ್ಯವಹಾರ ಆರಂಭಿಸಿತ್ತು. ಕೋಲ್ಕತ್ತಾದಲ್ಲಿ ಅದರ ಮೊದಲ ಕಚೇರಿ ಸ್ಥಾಪನೆಯಾಗಿದ್ದು. ಆದರೆ, 120 ವರ್ಷಗಳ ಬಳಿಕ ಸಿಟಿಬ್ಯಾಂಕ್ ಭಾರತದಲ್ಲಿ ಹೆಚ್ಚು ಬೇರೂರುವಲ್ಲಿ ಯಶಸ್ವಿಯಾಗಿಲ್ಲ. ಇದು ಭಾರತದಲ್ಲಿ 18 ನಗರಗಳಲ್ಲಿ ಅಸ್ತಿತ್ವ ಹೊಂದಿದೆ. ಒಟ್ಟು ಏಳು ಕಚೇರಿ, 21 ಬ್ರಾಂಚ್, 500 ಎಟಿಎಂಗಳಿದ್ದು, ಗ್ರಾಹಕರ ಸಂಖ್ಯೆ ಸುಮಾರು 30 ಲಕ್ಷ ಇದೆ.

ಇದನ್ನೂ ಓದಿMutual Fund: ಈ ಮ್ಯೂಚುವಲ್ ಫಂಡ್​​ನಲ್ಲಿ ದಿನಕ್ಕೆ 50 ರೂ. ಹೂಡಿಕೆ ಮಾಡಿ, 30 ಲಕ್ಷ ಗಳಿಸಿ!

ಸಿಟಿ ಬ್ಯಾಂಕ್ ಗ್ರಾಹಕರ ಗಮನಕ್ಕೆ:

ಇಂದಿನಿಂದ, ಅಂದರೆ ಮಾರ್ಚ್ 1ರಿಂದ ಸಿಟಿ ಬ್ಯಾಂಕ್ ಗ್ರಾಹಕರ ಖಾತೆಗಳು ಮತ್ತು ಹೂಡಿಕೆಗಳು ಆ್ಯಕ್ಸಿಸ್ ಬ್ಯಾಂಕ್​ಗೆ ವರ್ಗಾವಣೆ ಆಗುತ್ತವೆ. ಇದು ಬಿಟ್ಟರೆ ಸಿಟಿ ಬ್ಯಾಂಕ್ ಗ್ರಾಹಕರು ಹೆಚ್ಚು ತಲೆಕೆಡಿಸಿಕೊಳ್ಳುವ ಪ್ರಮೇಯ ಇಲ್ಲ. ಸಿಟಿಬ್ಯಾಂಕ್​ನ ಗ್ರಾಹಕರ ಅಕೌಂಟ್ ನಂಬರ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಂಬರ್, ಐಎಫ್​ಎಸ್​ಸಿ ನಂಬರ್, ಎಂಐಸಿಆರ್ ನಂಬರ್, ಚೆಕ್ ಬುಕ್ ಇತ್ಯಾದಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಿಟಿ ಬ್ಯಾಂಕ್​ನ ಬ್ರ್ಯಾಂಡ್ ನೇಮ್ ಕೂಡ ಸದ್ಯಕ್ಕೆ ಹಾಗೆಯೇ ಇರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸಿಟಿಬ್ಯಾಂಕ್, ಸಿಟಿ, ಸಿಟಿಗ್ರೂಪ್, ಅದರ ಡಿಸೈನ್, ಟ್ರೇಡ್​ಮಾರ್ಕ್ ಇತ್ಯಾದಿ ಎಲ್ಲವನ್ನೂ ಆ್ಯಕ್ಸಿಸ್ ಬ್ಯಾಂಕ್ ತಾತ್ಕಾಲಿಕವಾಗಿ ಬಳಕೆ ಮಾಡಲಿದೆ. ಮುಂದಿನ ದಿನಗಳಲ್ಲಿ ಆ್ಯಕ್ಸಿಸ್ ಬ್ರ್ಯಾಂಡ್ ಹೆಸರಿಗೆ ಇವೆಲ್ಲವೂ ವರ್ಗಾವಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Cylinder Price Hike: ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ

ಸಿಟಿ ಇಂಡಿಯಾ ತನ್ನ ಗ್ರಾಹಕ ಬ್ಯಾಂಕಿಂಗ್ ವ್ಯವಹಾರದ ಮಾಲೀಕತ್ವವನ್ನು ಆ್ಯಕ್ಸಿಸ್ ಬ್ಯಾಂಕ್​ಗೆ ವರ್ಗಾಯಿಸಿದೆ. ಇದು 2023 ಮಾರ್ಚ್ 1ರಿಂದ ಚಾಲನೆಗೆ ಬರುತ್ತದೆಈಗಿರುವ ಎಲ್ಲಾ ಸಿಟಿ ಪ್ರಾಡಕ್ಟ್​ಗಳು ಮತ್ತು ಸೇವೆಗಳು, ಬ್ರ್ಯಾಂಚ್​ಗಳು, ಎಟಿಎಂಗಳು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಸಿಟಿ ಮೊಬೈಲ್ ಆ್ಯಪ್​ಗಳು ಹಾಗೆಯೇ ಮುಂದುವರಿಯುತ್ತವೆ ಎಂದು ಸಿಟಿಬ್ಯಾಂಕ್ ಇಂಡಿಯಾ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ತಿಳಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:48 am, Wed, 1 March 23