Azim Premji Birthday: ಉದಾತ್ತ, ಉದಾರ ದಾನಜೀವಿ ಅಜೀಂ ಪ್ರೇಮ್‌ಜಿಗೆ ಇಂದು ಹುಟ್ಟುಹಬ್ಬ: ಅವರ ಬಗೆಗಿನ ಆಸಕ್ತಿಕರ ಮಾಹಿತಿ ಇಲ್ಲಿದೆ!

Happy Birthday Azim Premji: ಅಜೀಂ ಪ್ರೇಮ್‌ಜಿ ಅವರು ತಮ್ಮ ಸ್ವಂತ ಪ್ರತಿಷ್ಠಾನದ (ಅಜೀಂ ಪ್ರೇಮ್‌ಜಿ ಫೌಂಡೇಶನ್) ಮೂಲಕ ಉದಾತ್ತ, ಉದಾರ ದಾನ ಮಾಡುವ ಮೂಲಕ ಏಷ್ಯಾದ ಅತಿದೊಡ್ಡ ಲೋಕೋಪಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಮುಖ್ಯವಾಗಿ 2019 ರಲ್ಲಿ ಹೊಸ ಉಯಿಲು ಪರಿಚಯಿಸಿದ ನಂತರ ಈ ಸ್ಥಾನ ಪ್ರಾಪ್ತಿಯಾಗಿದೆ.

Azim Premji Birthday: ಉದಾತ್ತ, ಉದಾರ ದಾನಜೀವಿ ಅಜೀಂ ಪ್ರೇಮ್‌ಜಿಗೆ ಇಂದು ಹುಟ್ಟುಹಬ್ಬ: ಅವರ ಬಗೆಗಿನ ಆಸಕ್ತಿಕರ ಮಾಹಿತಿ ಇಲ್ಲಿದೆ!
ಉದಾತ್ತ, ಉದಾರ ದಾನಜೀವಿ ಅಜೀಂ ಪ್ರೇಮ್‌ಜಿಗೆ ಇಂದು ಹುಟ್ಟುಹಬ್ಬ: ಅವರ ಬಗೆಗಿನ ಆಸಕ್ತಿಕರ ಮಾಹಿತಿ ಇಲ್ಲಿದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 24, 2022 | 6:06 AM

ಅಜೀಮ್ ತಮ್ಮ ಸಂಪತ್ತನ್ನು ವಿಪ್ರೋ ಲಿಮಿಟೆಡ್ (Wipro Limited -WIT) ಮಾಲೀಕತ್ವದಿಂದ ಗಳಿಸಿದ್ದಾರೆ. ಇದು ಮಾಹಿತಿ ತಂತ್ರಜ್ಞಾನ (IT) ಕಂಪನಿಯಾಗಿದ್ದು, ಭಾರತದ ನಾಲ್ಕನೇ ಅತಿ ದೊಡ್ಡ ಐಟಿ ಸೇವೆಗಳ ಹೊರಗುತ್ತಿಗೆ ಕಂಪನಿಯಾಗಿದೆ.

ಅಜೀಂ ಪ್ರೇಮ್‌ಜಿ ಜನಿಸಿದ್ದು (ಜುಲೈ 24, 1945) ಮುಂಬೈನಲ್ಲಿ. ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಬಹುಶಃ ಅವರು ತಮ್ಮ ಸಂಪತ್ತು ಮತ್ತು ವ್ಯಾಪಾರ ಕೌಶಲ್ಯಗಳಿಗಿಂತ ಹೆಚ್ಚಾಗಿ ದಾನ, ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದಾರೆ. ಜುಲೈ 2022 ರ ಹೊತ್ತಿಗೆ, ಅಜೀಂ ಪ್ರೇಮ್‌ಜಿ 8.6 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ ಎನ್ನುತ್ತದೆ ಫೋರ್ಬ್ಸ್ ವರದಿ.

ಅಜೀಂ ಪ್ರೇಮ್‌ಜಿ ಅವರು ತಮ್ಮ ಸ್ವಂತ ಪ್ರತಿಷ್ಠಾನದ (ಅಜೀಂ ಪ್ರೇಮ್‌ಜಿ ಫೌಂಡೇಶನ್) ಮೂಲಕ ಉದಾತ್ತ, ಉದಾರ ದಾನ ಮಾಡುವ ಮೂಲಕ ಏಷ್ಯಾದ ಅತಿದೊಡ್ಡ ಲೋಕೋಪಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಮುಖ್ಯವಾಗಿ 2019 ರಲ್ಲಿ ಹೊಸ ಉಯಿಲು ಪರಿಚಯಿಸಿದ ನಂತರ ಈ ಸ್ಥಾನ ಪ್ರಾಪ್ತಿಯಾಗಿದೆ. ಇನ್ನು, ಪ್ರಪಂಚದಾದ್ಯಂತದ ಪರೋಪಕಾರಿಗಳ ಪಟ್ಟಿಯಲ್ಲಿ, ಎಕನಾಮಿಕ್ ಟೈಮ್ಸ್ ಪ್ರಕಾರ ಅವರು ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ.

ಅಜೀಂ ಪ್ರೇಮ್‌ಜಿ ಅವರ ಬಗ್ಗೆ ನಿಮಗೆ ತಿಳಿದಿಲ್ಲದ ಹಲವು ವಿಷಯಗಳಿವೆ. ನೀವು ಅವರನ್ನು ಮೆಚ್ಚುವಂತಹ ಕೆಲ ಸಂಗತಿ ಇಲ್ಲಿವೆ:

  1. ಅಜೀಂ ಪ್ರೇಮ್‌ಜಿ 30 ವರ್ಷಗಳ ಅಂತರದ ಬಳಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. 21 ನೇ ವಯಸ್ಸಿನಲ್ಲಿ, ಅಜೀಂ ಪ್ರೇಮ್‌ಜಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಪದವಿಗಾಗಿ ಓದುತ್ತಿದ್ದರು. ಅವರ ತಂದೆಯ ಹಠಾತ್ ನಿಧನದಿಂದಾಗಿ, ಅವರು ತಮ್ಮ ಶಿಕ್ಷಣವನ್ನು ತೊರೆದು ವಿಪ್ರೋವನ್ನು ಪ್ರಾರಂಭಿಸಿದರು. ಅವರು 30 ವರ್ಷಗಳ ನಂತರ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.
  2. ಪಾಕಿಸ್ತಾನದಿಂದ ಆಹ್ವಾನ.. ಅಜೀಂ ಪ್ರೇಮ್‌ಜಿಯವರ ತಂದೆ ಮುಹಮ್ಮದ್ ಹಷೇಮ್ ಪ್ರೇಮ್‌ಜಿ ಅವರು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರಿಂದ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನವನ್ನು ಪಡೆದರು. ಅವರ ತಂದೆ ತಿರಸ್ಕರಿಸಿದರು ಮತ್ತು ಭಾರತದಲ್ಲಿಯೇ ಉಳಿದರು.
  3. ಚಾರಿಟಿಯೇ ಇವರ ಧ್ಯೇಯ.. ಅಜೀಂ ಪ್ರೇಮ್‌ಜಿ ಅವರು ಅಜೀಂ ಪ್ರೇಮ್‌ಜಿ ಫೌಂಡೇಶನ್‌ಗಾಗಿ ತಮ್ಮ ಶೇ 8.6 ರಷ್ಟು ಆಸ್ತಿಯ ಪಾಲನ್ನು ವರ್ಗಾಯಿಸಿದ್ದಾರೆ. ಅದರ ಷೇರುಗಳ ಮೌಲ್ಯ 8,646 ಕೋಟಿ ರೂಪಾಯಿಯಿದೆ. ಇದು ಭಾರತದಲ್ಲಿ ಚಾರಿಟಿಗಾಗಿ ವ್ಯಕ್ತಿಯೊಬ್ಬರು ನೀಡಿದ ಅತಿ ದೊಡ್ಡ ಮೊತ್ತವಾಗಿದೆ.
  4. ಗೌರವಗಳು: 2011 ರಲ್ಲಿ ಅಜೀಂ ಪ್ರೇಮ್‌ಜಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
  5. ಪ್ರೇಮ್‌ಜಿ ಸ್ಫೂರ್ತಿಯ ಮೂಲ ಇವರೇ: ಅಜೀಂ ಪ್ರೇಮ್‌ಜಿ ಅವರು ಜಹಾಂಗೀರ್ ರತನ್​ಜಿ ದಾದಾಭಾಯ್ ಟಾಟಾ (ಜೆಆರ್‌ಡಿ ಟಾಟಾ) ಅವರನ್ನು ಮೆಚ್ಚುತ್ತಾರೆ. ಏಕೆಂದರೆ ಅವರೇ ಪ್ರೇಮ್‌ಜಿಗೆ ಮಹಾ ಪ್ರೇರಣೆಯಾದವರು.

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ