AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office FD Scheme: ಪೋಸ್ಟ್ ಆಫೀಸ್​ನಲ್ಲಿರುವ ಈ ಮೂರು ಯೋಜನೆ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ

ಅಂಚೆ ಇಲಾಖೆ ಠೇವಣಿ ಯೋಜನೆ: ನೀವು ಪೋಸ್ಟ್ ಆಫೀಸ್​ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್​ನಲ್ಲಿದೆ.

Post Office FD Scheme: ಪೋಸ್ಟ್ ಆಫೀಸ್​ನಲ್ಲಿರುವ ಈ ಮೂರು ಯೋಜನೆ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ
Post Office
TV9 Web
| Edited By: |

Updated on:Dec 27, 2022 | 1:05 PM

Share

ಕಳೆದ ಕೆಲವು ವಾರಗಳಿಂದ ಸ್ಟಾಕ್ ಮಾರ್ಕೆಟ್ (Stock Market) ಏರಿಳಿತ ಕಾಣುತ್ತಿದೆ. ಇಂಥಹ ಸಂದರ್ಭದಲ್ಲಿ ಅನೇಕರು ಮಾರ್ಕೆಟ್​ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದಿಲ್ಲ. ಆದರೆ, ನೀವು ಪೋಸ್ಟ್ ಆಫೀಸ್​ನ (Post Office) ಕೆಲವು ಯೋಜನೆಗಳನ್ನು ಗಮನಿಸಿದರೆ ಸ್ಟಾಕ್ ಮಾರ್ಕೆಟ್ ಅನ್ನು ಮರೆತೇ ಬಿಡುತ್ತೀರಿ. ಅಂಥಹ ಅತ್ಯುತ್ತಮ ಸ್ಕೀಮ್ ಪೋಸ್ಟ್ ಆಫೀಸ್​ನಲ್ಲಿದೆ. ಸಣ್ಣ ಮೊತ್ತದಿಂದ ಪ್ರಾರಂಭಿಸಿ ಅಧಿಕ ಹಣ ಮರಳಿ ಪಡೆಯುವಂತಹ ಅನೇಕ ಪ್ಲಾನ್​ಗಳು ಇದರಲ್ಲಿದೆ. ಇಲ್ಲಿ ಪೋಸ್ಟ್​ ಆಫೀಸ್​ನ ಮೂರು ಮುಖ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆ (RD), ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ (POTD) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC).

ಮರುಕಳಿಸುವ ಠೇವಣಿ ಯೋಜನೆ:

ಮರುಕಳಿಸುವ ಠೇವಣಿ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲದಿರುವುದರಿಂದ, ಇದು ಅಪಾಯಮುಕ್ತವಾಗಿದೆ. ಹೀಗಾಗಿ ಯಾರು ಬೇಕಾದರು ಧೈರ್ಯದಿಂದ ಈ ಯೋಜನೆಯನ್ನು ಆರಿಸಿಕೊಳ್ಳಬಹುದು. ಈ ಯೋಜನೆಗೆ ನಿಯಮಿತ ಮಧ್ಯಂತರದಲ್ಲಿ ಖಾತೆಗೆ ನಿಶ್ಚಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ, ಇದಕ್ಕಾಗಿ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುತ್ತದೆ. ತಮ್ಮ ಹೂಡಿಕೆಯ ಮೇಲಿನ ಭದ್ರತೆ ಇಷ್ಟಪಡುವ ಮತ್ತು ಸ್ಥಿರವಾದ ಹಣವನ್ನು ಬಡ್ಡಿಯಾಗಿ ಗಳಿಸಲು ಬಯಸುವ ಹೂಡಿಕೆದಾರರಿಗೆ, ಪೋಸ್ಟ್ ಆಫೀಸ್ ಆರ್‌ಡಿ ಸೂಕ್ತ ಹೂಡಿಕೆಯಾಗಿದೆ. ಇದಲ್ಲದೆ, ಈ ಯೋಜನೆಯು ಜನರಿಗೆ ನಿಗದಿತ ಮೊತ್ತ ಗಳಿಸಲು ಮತ್ತು ಕಾಲಾನಂತರದಲ್ಲಿ ಉತ್ಪಾದಿಸಲು ಮತ್ತು ಸ್ಥಿರ ಆದಾಯ ಗಳಿಸಲು ಸಹ ಪ್ರಯೋಜನಕಾರಿಯಾಗಿದೆ. ಇದರ ಮೇಲೆ ಸದ್ಯ 5.8% ಬಡ್ಡಿದರವನ್ನು ನೀಡಲಾಗುತ್ತದೆ. ಇದು ಜನರ ಉನ್ನತ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ.

ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆ:

ಹೆಸರೇ ಸೂಚಿಸುವಂತೆ ಇದು ಸಮಯದ ಠೇವಣಿ ಖಾತೆ. ಈ ಯೋಜನೆ ಅಡಿಯಲ್ಲಿ ನೀವು ಒಂದು, ಎರಡು, ಮೂರು ಅಥವಾ ಐದು ವರ್ಷಕ್ಕೆಂದು ಹಣವನ್ನು ಠೇವಣಿ ಮಾಡಬಹುದು. ಒಂದು, ಎರಡು ಮತ್ತು ಮೂರು ವರ್ಷಕ್ಕೆ ಎಂದಾದರೆ ಇದರಲ್ಲಿ 5.5% ಬಡ್ಡಿ ದರವನ್ನು ನೀಡಲಾಗುತ್ತಿದೆ. ನೀವು ಉತ್ತಮ ರಿಟರ್ನ್ ಅನ್ನು ಎದುರು ನೋಡುತ್ತಿದ್ದರೆ ಹಣವನ್ನು ಐದು ವರ್ಷಕ್ಕೆ ಡೆಪಾಸಿಟ್ ಮಾಡಬೇಕು. ಹೀಗಾದಲ್ಲಿ 6.7% ಬಡ್ಡಿ ದರ ಸಿಗುತ್ತದೆ.

ಇದನ್ನೂ ಓದಿ
Image
ರೆರಾ ನಿಮ್ಮ ಕನಸಿನ ಮನೆಯ ಪ್ರಾಜೆಕ್ಟ್ ರದ್ದು ಮಾಡಿದ್ದರೆ ಚಿಂತಿಸಬೇಡಿ, Money9  ಆ್ಯಪ್ ನಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ
Image
Amazon Prime Day Sale: ಇಂದಿನಿಂದ ಅಮೆಜಾನ್ ಪ್ರೈಮ್ ಡೇ ಸೇಲ್: 30,000 ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್
Image
Petrol Price Today: ವೈಮಾನಿಕ ಇಂಧನದ ತೆರಿಗೆ ಇಳಿಸಿದ ಸರ್ಕಾರ, ದೇಶದ ವಿವಿಧೆಡೆ ಪೆಟ್ರೋಲ್-ಡೀಸೆಲ್ ಬೆಲೆ ಹೀಗಿದೆ
Image
Gold Price Today: ಕುಸಿತವಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಬೆಳ್ಳಿ ದರ 200 ರೂ. ಇಳಿಕೆ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ:

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಐದು ವರ್ಷದ್ದಾಗಿದೆ. 6.8% ಬಡ್ಡಿದರಲ್ಲಿ ನಿಮಗೆ ರಿಟರ್ನ್ ಸಿಗುತ್ತದೆ. ಇದರಲ್ಲಿ ಎಷ್ಟು ಬೇಕಾದರೂ ಹಣವನ್ನು ನೀವು ಹೂಡಿಕೆ ಮಾಡಬಹುದು. ಆದರೆ, ಈ ಯೋಜನೆ ಅಡಿಯಲ್ಲಿ ನಿಮಗೆ ಹಣವನ್ನು ಮಧ್ಯದಲ್ಲಿ ಅಗತ್ಯವಿದ್ದರೆ ತೆಗೆಯಲು ಸಾಧ್ಯವಿಲ್ಲ. ಪೂರ್ಣ ಐದು ವರ್ಷ ಆದ ನಂತರವ ಸಿಗುತ್ತದೆ.

Published On - 3:54 pm, Sat, 23 July 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ