Mutual Fund: ಏನಿದು ಫ್ರಂಟ್ ರನ್ನಿಂಗ್?: ಇದರ ಬಗ್ಗೆ ಹೂಡಿಕೆದಾರರು ಏಕೆ ಭಯಭೀತರಾಗಿದ್ದಾರೆ?
ಇದೀಗ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಭಯ ಶುರುವಾಗಿದೆ. ಈ ಘಟನೆಯ ನಂತರ, ಮ್ಯೂಚುವಲ್ ಫಂಡ್ ಹೂಡಿಕೆದಾರರು ಕಂಗಾಲಾಗಿದ್ದು ತಮ್ಮ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಮಾರುಕಟ್ಟೆ ನಿಯಂತ್ರಕ ಎಸ್ಇಬಿಐ (SEBI) ಆಕ್ಸಿಸ್ ಮ್ಯೂಚುವಲ್ ಫಂಡ್‌ನ (Axis Mutual Fund) ಕಚೇರಿ ಸೇರಿದಂತೆ ಇತರೆ 16 ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಆಕ್ಸಿಸ್ ಮ್ಯೂಚುಯಲ್ ಫಂಡ್‌ನ ಇಬ್ಬರು ಅಧಿಕಾರಿಗಳು ಆರೋಪಿಗಳೆಂದು ತಿಳಿದುಬಂದಿದೆ. ಸದ್ಯ ಇವರನ್ನು ಫಂಡ್ ಹೌಸ್ನಿಂದ ಹೊರಹಾಕಲಾಗಿದ್ದು ಎಸ್ಇಬಿಐ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಫಂಡ್ ಮ್ಯಾನೇಜರ್‌ಗಳಾದ ವೀರೇನ್ ಜೋಶಿ ಮತ್ತು ದೀಪಕ್ ಅಗರ್‌ವಾಲ್ (Deepak Agarwal) ಅವರ ಹಣಕಾಸಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿಯನ್ನು ಕೂಡ ಸಲ್ಲಿಸಿದೆ. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇದೀಗ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಭಯ ಶುರುವಾಗಿದೆ. ಈ ಘಟನೆಯ ನಂತರ, ಮ್ಯೂಚುವಲ್ ಫಂಡ್ ಹೂಡಿಕೆದಾರರು ಕಂಗಾಲಾಗಿದ್ದು ತಮ್ಮ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಏನಿದು ಫ್ರಂಟ್ ರನ್ನಿಂಗ್?:
SEBI ಈ ಫ್ರಂಟ್ ರನ್ನಿಂಗ್ ಅನ್ನು ಇನ್ಸೈಡರ್ ಟ್ರೇಡಿಂಗ್ ಎಂದು ಹೇಳಿದೆ. ಹಾಗಾದರೆ, ಇನ್ಸೈಡರ್ ಟ್ರೇಡಿಂಗ್ ಎಂದರೇನು?. ಒಬ್ಬ ವ್ಯಕ್ತಿಯು ಸಾರ್ವಜನಿಕವಲ್ಲದ ಕೆಲವು ಕಂಪನಿಯ ಮಾಹಿತಿಯ ಆಧಾರದ ಮೇಲೆ ಷೇರುಗಳನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡುವಾಗ ಅದನ್ನು ಆಂತರಿಕ ವ್ಯಾಪಾರ ಎಂದು ಕರೆಯಲಾಗುತ್ತದೆ. ಉದಾಹರಣೆಗೆ: X ಎಂಬ ದೊಡ್ಡ ಕಂಪನಿಗೆ ದೊಡ್ಡ ಆಫರ್ ಬಂದಿದೆ ಎಂದು ಭಾವಿಸೋಣ. ಹೇಗೋ ಒಬ್ಬ ವ್ಯಾಪಾರಿಗೆ ಈ ವಿಷಯ ತಿಳಿಯುತ್ತದೆ. ಅವನು ಆ ಕಂಪನಿಯ ಷೇರುಗಳನ್ನು ಖರೀದಿಸುತ್ತಾನೆ. ಅದೇವೇಳೆ ಹೂಡಿಕೆದಾರರು ಏನು ಆಫರ್ ಎಂಬ ಬಗ್ಗೆ ತಿಳಿದುಕೊಳ್ಳುತ್ತಾರೆ. ಅತ್ತ ಷೇರಿನ ಬೆಲೆ ಅಧಿಕವಾಗಿರುತ್ತದೆ. ಈ ಸಂದರ್ಭ ಆ ವ್ಯಾಪಾರಿ ತನ್ನ ಷೇರುಗಳನ್ನು ಮಾರಾಟ ಮಾಡುವ ಮೂಲಕ ಲಾಭ ಗಳಿಸುತ್ತಾನೆ.
ಮ್ಯೂಚುಯಲ್ ಫಂಡ್‌ಗಳಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?:
ಮ್ಯೂಚುಯಲ್ ಫಂಡ್ ದೊಡ್ಡ ಆಫರ್ ಅನ್ನು ಬಿಡುಗಡೆ ಮಾಡಿದಾಗೆಲ್ಲ ಕೆಲವು ಫಂಡ್ ಮ್ಯಾನೇಜರ್‌ಗಳು ಫಂಡ್‌ನ ಅಧಿಕೃತ ಖಾತೆಯಿಂದ ಆರ್ಡರ್ ಬರುವ ಮೊದಲೇ ಈ ವಿಚಾರ ತಿಳಿದು ತಮ್ಮ ವೈಯಕ್ತಿಕ ಖಾತೆಯಿಂದ ಅದೇ ಸ್ಟಾಕ್ ಅನ್ನು ಖರೀದಿಸುತ್ತಾರೆ. ಈ ಫಂಡ್ ಹೌಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳನ್ನು ಖರೀದಿಸಿದಾಗ, ಅದರ ಬೆಲೆ ಏರುತ್ತಲೇ ಹೋಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಫ್ರಂಟ್ ರನ್ನಿಂಗ್ ಎಂದು ಕರೆಯಲಾಗುತ್ತದೆ.
ಈ ಆಕ್ಸಿಸ್ ಮ್ಯೂಚುವಲ್ ಫಂಡ್ ಪ್ರಕರಣವು 2022 ಜನವರಿಯಲ್ಲಿ ನಡೆದಿರುವುದು. ಆ ಸಂದರ್ಭ ಕೆಲವು ಜನರು ವಿರೇನ್ ಜೋಶಿಯವರ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಕಂಪನಿಯ ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿದ್ದಾರೆ. ನಂತರ ಕಂಪನಿಯು ವಿತರಕರಾದ ವೀರೇನ್ ಜೋಶಿ ಮತ್ತು ದೀಪಕ್ ಅಗರ್ವಾಲ್ ವಿರುದ್ಧ ತನೆಖೆ ನಡೆಸಲು ಶುರುಮಾಡಿ ಮಹತ್ವದ ಮಾಹಿತಿ ಕಲೆಹಾಕಿದೆ.