ಬ್ಯಾಂಕಿಗೆ ಹೋಗದೇ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಹೀಗೆ ಲಿಂಕ್‌ ಮಾಡಿ

ನೀವು ನಿಮ್ಮ ಬ್ಯಾಂಕ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ನೀವು ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಬದಲಾಯಿಸಬಹುದು. ಅದು ಹೇಗೆ ಅಂತೀರಾ? ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಬ್ಯಾಂಕಿಗೆ ಹೋಗದೇ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಹೀಗೆ ಲಿಂಕ್‌ ಮಾಡಿ
ಸಾಂದರ್ಭಿಕ ಚಿತ್ರ
Image Credit source: Images By Tang Ming Tung/DigitalVision/Getty Images

Updated on: Oct 13, 2026 | 7:32 PM

ಮುಖ್ಯಾಂಶಗಳು

  • ಇತ್ತೀಚೆಗಿನ ದಿನಗಳಲ್ಲಿ ಆನ್‌ಲೈನ್‌ ವಹಿವಾಟುಗಳು ಹೆಚ್ಚಾಗಿವೆ
  • ಬ್ಯಾಂಕ್ ಖಾತೆಗೆ ಹೊಸ ಮೊಬೈಲ್ ನಂಬರ್‌ನ್ನು ಲಿಂಕ್ ಮಾಡುವುದು ಅವಶ್ಯಕ
  • ನೀವು ಬ್ಯಾಂಕ್‌ಗೆ ಹೋಗದೇ ಬ್ಯಾಂಕ್‌ ಖಾತೆಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡಬಹುದು

ಇತ್ತೀಚೆಗಿನ ದಿನಗಳಲ್ಲಿ ಆನ್‌ಲೈನ್‌ ವಹಿವಾಟುಗಳು ಹೆಚ್ಚಾಗಿವೆ. ಹೌದು, ಬ್ಯಾಂಕ್ ಖಾತೆಗೆ (Bank Account) ಫೋನ್ ಸಂಖ್ಯೆ ಲಿಂಕ್ ಮಾಡುವುದು ಸರ್ವೆ  ಸಾಮಾನ್ಯವಾಗಿದೆ. ಆದರೆ ನೀವೇನಾದ್ರೂ ನೀವು ಹೊಸ ಸಿಮ್ ಕಾರ್ಡ್ ಪಡೆದಿದ್ದೀರಾ ಅಥವಾ ನಿಮ್ಮ ಹಳೆಯ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುತ್ತೀರಿ ಅಂತಾದ್ರೆ ಬ್ಯಾಂಕ್ ಖಾತೆಗೆ ಹೊಸ ಮೊಬೈಲ್ ನಂಬರ್‌ನ್ನು ಲಿಂಕ್ ಮಾಡುವುದು ಅವಶ್ಯಕ. ಹೌದು, ನಿಮ್ಮ ಬ್ಯಾಂಕ್ ಖಾತೆಯಲ್ಲಾಗುವ ಹಣಕಾಸಿನ ವಹಿವಾಟಿನ ಬಗ್ಗೆ ಮೊಬೈಲ್ ಗೆ ಸಂದೇಶ ಬರುತ್ತದೆ. ಆದರೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದ್ರೆ ನೀವು ಬ್ಯಾಂಕ್‌ಗೆ ಹೋಗದೇನೇ ಮನೆಯಲ್ಲೇ ಈ ಕೆಲಸ ಮಾಡಬಹುದು.

ಎಟಿಎಂ ಮೂಲಕ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

ಹಂತ 1: ಮೊದಲಿಗೆ ಎಟಿಎಂ ಮೆಷಿನ್ ಗೆ ನಿಮ್ಮ ಡೆಬಿಟ್ ಕಾರ್ಡ್ ಹಾಕಿ, ಪಿನ್ ನಮೂದಿಸಿ.

ಹಂತ 2: ಸ್ಕ್ರೀನ್ ಮೇಲೆ ಕಾಣಿಸುವ ಮೋರ್ ಆಪ್ಷನ್ಸ್ ಅಥವಾ ರಿಜಿಸ್ಟ್ರೇಷನ್ ಅಥವಾ ಸರ್ವಿಸಸ್ ಆಯ್ಕೆಯನ್ನು ಆರಿಸಿ.

ಹಂತ 3: ಮೊಬೈಲ್ ನಂಬರ್ ರಿಜಿಸ್ಟ್ರೇಷನ್ ಅಥವಾ ಅಪ್ಡೇಟ್ ಮೊಬೈಲ್ ನಂಬರ್ ಕ್ಲಿಕ್ ಮಾಡಿ.

ಹಂತ 4: ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಕನ್ಫರ್ಮ್ ಮಾಡಿ.

ಹಂತ 5: ನಿಮ್ಮ ಹೊಸ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿದ್ರೆ ಮೊಬೈಲ್ ನಂಬರ್ ಬದಲಾಗುತ್ತದೆ.

ಮೊಬೈಲ್ ಆಪ್ ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ಹೇಗೆ ನಂಬರ್ ಬದಲಾಯಿಸುವುದು?

ಹಂತ 1: ಮೊದಲಿಗೆ ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ, ಪ್ರೊಫೈಲ್ ಅಥವಾ ಪರ್ಸನಲ್ ಡೀಟೇಲ್ಸ್ ಸೆಟ್ಟಿಂಗ್ಸ್‌ಗೆ ಹೋಗಿ.

ಹಂತ 2: ಚೇಂಜ್ ಮೊಬೈಲ್ ನಂಬರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಇದನ್ನೂ ಓದಿ: ಬ್ಯಾಂಕ್​ ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ದುಡ್ಡು ಯಾರಿಗೆ ಸೇರುತ್ತದೆ?

ಹಂತ 3: ನಿಮ್ಮ ಹಳೆಯ ಅಥವಾ ಹೊಸ ಮೊಬೈಲ್ ಸಂಖ್ಯೆಗಳಿಗೆ ಬರುವ ಒಟಿಪಿ ಮೂಲಕ ದೃಢೀಕರಿಸಿ ಸಬ್ಮಿಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 7:24 pm, Tue, 13 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us