ಬ್ಯಾಂಕ್ ಖಾತೆದಾರ, ನಾಮಿನಿ ಇಬ್ಬರೂ ಮೃತಪಟ್ಟರೆ ದುಡ್ಡು ಯಾರಿಗೆ ಸೇರುತ್ತದೆ?
ಬ್ಯಾಂಕ್ ಖಾತೆಯನ್ನು ತೆರೆಯುವಾಗ, ನಾವು ನಾಮಿನಿಯ ಹೆಸರನ್ನು ನೀಡುತ್ತೇವೆ. ಇದು ಖಾತೆದಾರರ ಮರಣದ ಸಂದರ್ಭದಲ್ಲಿ ಖಾತೆಯಿಂದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಆದರೆ ಇಲ್ಲಿ ನಾಮಿನಿ ಹಾಗೂ ಖಾತೆದಾರ ಇಬ್ಬರೂ ಸತ್ತರೆ, ಕಾನೂನುಬದ್ಧ ಉತ್ತರಾಧಿಕಾರಿ ಖಾತೆಯಲ್ಲಿರುವ ಹಣ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಈ ಹಣ ಪಡೆಯಲು ಕೆಲವು ಅಗತ್ಯ ದಾಖಲೆಗಳನ್ನು ಬ್ಯಾಂಕ್ ಗೆ ಸಲ್ಲಿಸುವುದು ಕಡ್ಡಾಯ

ಮುಖ್ಯಾಂಶಗಳು
- ಬ್ಯಾಂಕ್ ಖಾತೆ ತೆರೆಯುವಾಗ ಅದರಲ್ಲಿ ನಾಮಿನಿ ಹೆಸರನ್ನು ಸೇರಿಸಲಾಗುತ್ತದೆ
- ಖಾತೆದಾರ ಮತ್ತು ನಾಮಿನಿ ಮೃತ ಪಟ್ಟರೆ ಯಾರ ಕೈ ಸೇರುತ್ತದೆ ಎಂಬ ಗೊಂದಲವಿರಬಹುದು
- ಮೃತರ ಕುಟುಂಬದ ಕಾನೂನುಬದ್ಧ ಉತ್ತರಾಧಿಕಾರಿಗಳು ಹಣ ಪಡೆಯಲು ಅರ್ಹರಾಗಿರುತ್ತಾರೆ
ಬ್ಯಾಂಕ್ ಖಾತೆ (bank account) ತೆರೆಯುವಾಗ ಅದರಲ್ಲಿ ನಾಮಿನಿ ಹೆಸರನ್ನು ಸೇರಿಸಲಾಗುತ್ತದೆ. ಇಲ್ಲಿ ಖಾತೆದಾರ ಮರಣ ಹೊಂದಿದರೆ ಖಾತೆಯಲ್ಲಿರುವ ಹಣವು ನಾಮಿನಿಗೆ ಸೇರುತ್ತದೆ. ಒಂದು ವೇಳೆ ಖಾತೆದಾರ ಮತ್ತು ನಾಮಿನಿ ಇಬ್ಬರೂ ಮೃತ ಪಟ್ಟರೆ ಆ ಸಂದರ್ಭದಲ್ಲಿ ಹಣ ಯಾರ ಕೈ ಸೇರುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಹೌದು, ಖಾತೆದಾರ ಹಾಗೂ ನಾಮಿನಿ ಇಬ್ಬರೂ ತೀರಿಕೊಂಡರೆ, ಮೃತ ಪಟ್ಟ ವ್ಯಕ್ತಿಯ ಕುಟುಂಬದ ಕಾನೂನುಬದ್ಧ ಉತ್ತರಾಧಿಕಾರಿಗಳು ಹಣವನ್ನು ಕ್ಲೈಮ್ ಮಾಡಲು ಅವಕಾಶವಿದೆ.
ಖಾತೆದಾರ, ನಾಮಿನಿ ಮೃತಪಟ್ಟರೆ ಹಣ ಪಡೆಯಲು ಯಾರು ಅರ್ಹರು?
- ಭಾರತೀಯ ಬ್ಯಾಂಕಿಂಗ್ ನಿಯಮಗಳಲ್ಲಿ ತಿಳಿಸಿರುವಂತೆ ನಾಮಿನಿ ಕೇವಲ ಹಣವನ್ನು ಬ್ಯಾಂಕಿನಿಂದ ಪಡೆದುಕೊಳ್ಳುವ ಟ್ರಸ್ಟಿಯಾಗಿರುತ್ತದೆ ಹೊರತು, ಆ ಹಣದ ಸಂಪೂರ್ಣ ಮಾಲೀಕರಾಗಿರಲು ಸಾಧ್ಯವಿಲ್ಲ.
- ಖಾತೆದಾರ ಹಾಗೂ ನಾಮಿನಿ ಇಬ್ಬರೂ ಮೃತಪಟ್ಟರೆ, ಖಾತೆದಾರನ ಆಸ್ತಿಯ ಮೇಲೆ ಹಕ್ಕುವುಳ್ಳ ಕಾನೂನು ಉತ್ತರಾಧಿಕಾರಿಗಳಿಗೆ ಬ್ಯಾಂಕ್ ಖಾತೆಯಲ್ಲಿದ್ದ ಹಣವು ಸೇರುತ್ತದೆ. ಅಂದರೆ ಮೃತ ವ್ಯಕ್ತಿಯ ಪತ್ನಿ, ಪತಿ, ಮಕ್ಕಳು ಅಥವಾ ವಾರಸುದಾರರು ಖಾತೆಯಲ್ಲಿರುವ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಮೃತ ಪಟ್ಟ ವ್ಯಕ್ತಿಯ ಮರಣ ಪ್ರಮಾಣ ಪತ್ರ, ಕಾನೂನುಬದ್ಧ ಉತ್ತರಾಧಿಕಾರಿಯ ಪ್ರಮಾಣಪತ್ರ ಬ್ಯಾಂಕ್ ಗೆ ಸಲ್ಲಿಸಿ ಖಾತೆಯಲ್ಲಿದ್ದ ಹಣವನ್ನು ವಾರಸುದಾರರು ಪಡೆಯಬಹುದು.
ಹೊಸ ನಾಮಿನಿ ಹೆಸರನ್ನು ಸೇರಿಸಬಹುದು
ಒಂದು ವೇಳೆ ನಾಮಿನಿ ಮರಣ ಹೊಂದಿದರೆ ಆ ಹಣವು ನೇರವಾಗಿ ನಾಮಿನಿಯ ವಾರಸುದಾರರಿಗೆ ಸೇರುವುದಿಲ್ಲ. ಖಾತೆದಾರನು ಹೊಸ ನಾಮಿನಿ ಹೆಸರನ್ನು ಸೇರಿಸಿಕೊಳ್ಳಬಹುದು. ಬಹುದು. ಆದರೆ ಹೊಸ ನಾಮಿನಿ ಹೆಸರು ಸೇರಿಸಲು ಹಳೆಯ ನಾಮಿನಿಯ ಮರಣ ಪ್ರಮಾಣ ಪತ್ರ, ಹೊಸ ನಾಮಿನಿಯ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಹೊಸ ನಾಮಿನಿಯ ಬ್ಯಾಂಕ್ ಖಾತೆ ವಿವರಗಳು ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಈ ಪ್ರಮುಖ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:29 pm, Mon, 12 October 26




