AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank holiday on Mahashivratri 2024: ಮಾರ್ಚ್ 8, ಮಹಾಶಿವರಾತ್ರಿಯಂದು ಯಾವ್ಯಾವ ರಾಜ್ಯಗಳಲ್ಲಿ ಬ್ಯಾಂಕ್ ರಜೆ? ಇಲ್ಲಿದೆ ವಿವರ

ಈ ವರ್ಷದ ಮಹಾ ಶಿವರಾತ್ರಿ ಹಬ್ಬ ಮಾರ್ಚ್ 8ಕ್ಕೆ ಇದೆ. ಆರ್​ಬಿಐ ಕ್ಯಾಲಂಡರ್​ನಲ್ಲಿ ಮಾರ್ಚ್ 8ಕ್ಕೆ ರಜೆ ಇದೆ. ಕರ್ನಾಟಕ ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಶುಕ್ರವಾರ ರಜೆ ಇದೆ. ಈ ರಾಜ್ಯಗಳಲ್ಲಿ ಬ್ಯಾಂಕುಗಳು ಶುಕ್ರವಾರದಿಂದ ಭಾನುವಾರದವರೆಗೆ ಸತತ ಮೂರು ದಿನ ರಜೆಗಳಿವೆ. ಮಾರ್ಚ್ ತಿಂಗಳಲ್ಲಿ ಒಟ್ಟು 14 ದಿನ ರಜೆ ಇದೆ. ಮಾರ್ಚ್ 22ರಿಂದ 31ರವರೆಗೆ ಹೆಚ್ಚಿನ ದಿನಗಳು ಬ್ಯಾಂಕ್ ಬಂದ್ ಇರಲಿವೆ.

Bank holiday on Mahashivratri 2024: ಮಾರ್ಚ್ 8, ಮಹಾಶಿವರಾತ್ರಿಯಂದು ಯಾವ್ಯಾವ ರಾಜ್ಯಗಳಲ್ಲಿ ಬ್ಯಾಂಕ್ ರಜೆ? ಇಲ್ಲಿದೆ ವಿವರ
ಮಹಾಶಿವ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2024 | 1:43 PM

Share

ನವದೆಹಲಿ, ಮಾರ್ಚ್ 5: ಇದೇ ಶುಕ್ರವಾರ (ಮಾ. 8) ಇರುವ ಮಹಾಶಿವರಾತ್ರಿ ಹಬ್ಬಕ್ಕೆ (Mahashivaratri festival) ಸಾರ್ವತ್ರಿಕ ರಜೆ ಇದೆ. ಆದರೆ, ದೇಶದ ಎಲ್ಲೆಡೆಯೂ ರಜೆ ಎನ್ನುವಂತಿಲ್ಲ. ಆರ್​ಬಿಐ ಕ್ಯಾಲಂಡರ್ ಪ್ರಕಾರ ಮಾರ್ಚ್ 8 ಬ್ಯಾಂಕುಗಳಿಗೆ ರಜೆ ಇದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಶುಕ್ರವಾರ ಬ್ಯಾಂಕ್ ಬಂದ್ ಆಗಿರುತ್ತವೆ. ಮಾರ್ಚ್ ತಿಂಗಳಲ್ಲಿ ಒಟ್ಟು ಇರುವ 14 ದಿನಗಳ ರಜೆಗಳ ಪೈಕಿ ಮಹಾಶಿವರಾತ್ರಿಯದ್ದೂ ಒಂದು. ಮಾರ್ಚ್ 8ರಿಂದ 10ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕುಗಳು ಬಾಗಿಲು ಮುಚ್ಚಿರುತ್ತವೆ.

ಮಹಾಶಿವರಾತ್ರಿಯಂದು ಯಾವ್ಯಾವ ರಾಜ್ಯಗಳಲ್ಲಿ ರಜೆ?

ಕರ್ನಾಟಕ, ಉತ್ತರಾಖಂಡ್, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹಿಮಾಚಲಪ್ರದೇಶ, ಬಿಹಾರ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಮಾರ್ಚ್ 8, ಶುಕ್ರವಾರ ರಜೆ ಇದೆ.

ಆರ್​ಬಿಐ ಕ್ಯಾಲಂಡರ್​ನಲ್ಲಿ ಮಾರ್ಚ್ 8ರಂದು ರಜೆ ಇರುವ ನಗರಗಳ ಪಟ್ಟಿ ಮಾಡಲಾಗಿದೆ. ಅದರ ಪ್ರಕಾರ, ಬೆಂಗಳೂರು, ಅಹ್ಮದಾಬಾದ್, ಬೇಲಾಪುರ್, ಭೋಪಾಲ್, ಭುಬನೇಶ್ವರ್, ಡೆಹ್ರಾಡೂನ್, ಹೈದರಾಬಾದ್, ಜಮ್ಮು, ಕಾನಪುರ್, ಕೊಚ್ಚಿ, ಲಕ್ನೋ, ಮುಂಬೈ, ನಾಗಪುರ್, ರಾಯಪುರ್, ರಾಂಚಿ, ಶಿಮ್ಲಾ, ಶ್ರೀನಗರ್, ತಿರುವನಂತಪುರಂ ನಗರಗಳನ್ನು ಹೆಸರಿಸಲಾಗಿದೆ.

ಇದನ್ನೂ ಓದಿ: ಶಿವರಾತ್ರಿ, ಹೋಳಿ, ಗುಡ್​ಫ್ರೈಡೆಗೆ ಬ್ಯಾಂಕ್ ರಜೆ ಇದೆಯಾ? ಮಾರ್ಚ್ ತಿಂಗಳ 14 ದಿನ ರಜಾ ಪಟ್ಟಿ

ಮಾರ್ಚ್ ತಿಂಗಳ ರಜಾ ದಿನಗಳ ಪಟ್ಟಿ

  • ಮಾರ್ಚ್ 8: ಮಹಾಶಿವರಾತ್ರಿ ಹಬ್ಬ
  • ಮಾರ್ಚ್ 9: ಎರಡನೇ ಶನಿವಾರ
  • ಮಾರ್ಚ್ 10: ಭಾನುವಾರ
  • ಮಾರ್ಚ್ 17: ಭಾನುವಾರ
  • ಮಾರ್ಚ್ 22, ಶುಕ್ರವಾರ: ಬಿಹಾರ ದಿವಸ್ (ಬಿಹಾರ ರಾಜ್ಯದಲ್ಲಿ ಮಾತ್ರ ರಜೆ)
  • ಮಾರ್ಚ್ 23: ನಾಲ್ಕನೇ ಶನಿವಾರ
  • ಮಾರ್ಚ್ 24: ಭಾನುವಾರ
  • ಮಾರ್ಚ್ 25, ಸೋಮವಾರ: ಹೋಳಿ ಹಬ್ಬ
  • ಮಾರ್ಚ್ 26, ಮಂಗಳವಾರ: ಹೋಳಿ ಹಬ್ಬ ಎರಡನೇ ದಿನ (ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 27, ಬುಧವಾರ: ಹೋಳಿ ಹಬ್ಬ (ಪಾಟ್ನಾದಲ್ಲಿ ಬ್ಯಾಂಕ್ ರಜೆ)
  • ಮಾರ್ಚ್ 29: ಗುಡ್ ಫ್ರೈಡೆ ಹಬ್ಬ (ಅಗಾರ್ಟಲಾ, ಗುವಾಹಟಿ, ಜೈಪುರ್, ಜಮ್ಮು, ಶಿಮ್ಲಾ ಮತ್ತು ಶ್ರೀನಗರ ಹೊರತುಪಡಿಸಿ ಉಳಿದ ಕಡೆ ರಜೆ)
  • ಮಾರ್ಚ್ 31: ಭಾನುವಾರ

ಇದನ್ನೂ ಓದಿ: ಗೂಗಲ್​ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್​ಗಳ ನೈಜ ಉಪಯೋಗ ಕಂಡುಹಿಡಿಯಿರಿ

ಕರ್ನಾಟಕದಲ್ಲಿ 2024 ಮಾರ್ಚ್ ತಿಂಗಳ ಬ್ಯಾಂಕ್ ರಜಾದಿನಗಳು

  • ಮಾರ್ಚ್ 8: ಮಹಾಶಿವರಾತ್ರಿ ಹಬ್ಬ
  • ಮಾರ್ಚ್ 9: ಎರಡನೇ ಶನಿವಾರ
  • ಮಾರ್ಚ್ 10: ಭಾನುವಾರ
  • ಮಾರ್ಚ್ 17: ಭಾನುವಾರ
  • ಮಾರ್ಚ್ 23: ನಾಲ್ಕನೇ ಶನಿವಾರ
  • ಮಾರ್ಚ್ 24: ಭಾನುವಾರ
  • ಮಾರ್ಚ್ 29: ಗುಡ್ ಫ್ರೈಡೆ ಹಬ್ಬ
  • ಮಾರ್ಚ್ 31: ಭಾನುವಾರ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ