ಬೆಂಗಳೂರು, ಆಗಸ್ಟ್ 22: ಗಣೇಶ ಚತುರ್ಥಿ ಸೇರಿ ದೇಶದ ವಿವಿಧೆಡೆ 14 ದಿನ ಬ್ಯಾಂಕುಗಳಿಗೆ ರಜೆ ಇದ್ದರೆ, ಕರ್ನಾಟಕದಲ್ಲಿ ಎಂಟು ದಿನ ರಜೆಗಳಿವೆ. ಇದರಲ್ಲಿ ಗಣೇಶನ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ರಜೆಗಳೂ ಒಳಗೊಂಡಿವೆ. ನಾಲ್ಕು ಭಾನುವಾರ ಹಾಗೂ ಎರಡು ಶನಿವಾರದ ರಜೆಗಳೂ ಈ ಎಂಟು ರಜೆಗಳ ಪಟ್ಟಿಯಲ್ಲಿವೆ. ಸೆಪ್ಟಂಬರ್ 7ರಂದು ವಿನಾಯಕ ಚತುರ್ಥಿ ಇದ್ದರೆ, ಸೆಪ್ಟಂಬರ್ 16 ಸೋಮವಾರದಂದು ಈದ್ ಮಿಲಾದ್ ಹಬ್ಬಕ್ಕೆ ರಜೆ ಇದೆ. ಸೆಪ್ಟಂಬರ್ 14ರಿಂದ 16ರವರೆಗೆ ಸತತ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಬ್ಯಾಂಕ್ ರಜಾ ದಿನಗಳಿವೆ.
ಇದನ್ನೂ ಓದಿ: ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ ಸೇರಿ 2024ರ ಸೆಪ್ಟಂಬರ್ ತಿಂಗಳಲ್ಲಿ 14 ದಿನ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕುಗಳಿಗೆ ಯಾವಾಗಲೇ ರಜೆಗಳಿದ್ದರೂ ಬಹುತೇಕ ಬ್ಯಾಂಕಿಂಗ್ ಚಟುವಟಿಕೆಗಳು ನಿರಂತರವಾಗಿ ಲಭ್ಯ ಇರುತ್ತವೆ. ಎಟಿಎಂ ಸೇವೆ ಇದ್ದೇ ಇರುತ್ತದೆ. ನೆಟ್ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ಗಳು ಸದಾ ಲಭ್ಯ ಇರುತ್ತವೆ. ಯುಪಿಐ ಮೂಲಕವೂ ಹಣದ ವಹಿವಾಟು ನಡೆಸಬಹುದು. ಚೆಕ್ ಡೆಪಾಸಿಟ್, ಕ್ಯಾಷ್ ಡೆಪಾಸಿಟ್, ಡಿಡಿ ಇತ್ಯಾದಿ ಸೇವೆಗಳಿಗೆ ಬ್ಯಾಂಕುಗಳಿಗೆ ಹೋಗಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Fri, 23 August 24