ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವುದು ಸುರಕ್ಷಿತವೇ? ಈ ವಿಷ್ಯಗಳು ನಿಮ್ಗೆ ತಿಳಿದಿರಲಿ

ಹೆಚ್ಚಿನವರು ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವುದು ಸುರಕ್ಷಿತ ಅಂದುಕೊಂಡಿರುತ್ತಾರೆ. ಆದರೆ, ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುತ್ತಾರೆ. ಇದು ಸುರಕ್ಷತೆಗಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದ್ರೂ ಕಳ್ಳತನ ಅಥವಾ ನಷ್ಟವಾದಾಗ ಬ್ಯಾಂಕ್ ನೀಡುವ ಪರಿಹಾರಕ್ಕೆ ಮಿತಿ ಇರುತ್ತದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವುದು ಸುರಕ್ಷಿತವೇ? ಈ ವಿಷ್ಯಗಳು ನಿಮ್ಗೆ ತಿಳಿದಿರಲಿ
ಬ್ಯಾಂಕ್‌ ಲಾಕರ್‌
Image Credit source: stock.adobe.com

Updated on: Nov 26, 2026 | 4:37 PM

ಮುಖ್ಯಾಂಶಗಳು

  • ನಮ್ಮಲ್ಲಿ ಹೆಚ್ಚಿನವರು ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟರೆ ಸುರಕ್ಷಿತ ಅಂದುಕೊಳ್ತಾರೆ.
  • ಬ್ಯಾಂಕ್ ನಿರ್ಲಕ್ಷ್ಯ, ವಂಚನೆ ಅಥವಾ ಕಳ್ಳತನದಿಂದ ಲಾಕರ್ ನಷ್ಟವಾದರೆ ನಿಮ್ಮ ಚಿನ್ನಕ್ಕೆ ಬ್ಯಾಂಕ್‌ ಎಷ್ಟು ಪರಿಗಹಾರ ನೀಡುತ್ತದೆ
  • ನಿಮ್ಮ ಚಿನ್ನಕ್ಕೆ ಗರಿಷ್ಠ ಪರಿಹಾರವು ವಾರ್ಷಿಕ ಬಾಡಿಗೆಯ 100 ಪಟ್ಟು ಮಾತ್ರ ಇರುತ್ತದೆ

ನಮ್ಮಲ್ಲಿ ಹೆಚ್ಚಿನವರು ಬ್ಯಾಂಕ್ ಲಾಕರ್ ಅಂದ್ರೆ ಸೇಫೆಸ್ಟ್ ಪ್ಲೇಸ್ ಅಂದುಕೊಳ್ತಾರೆ. ಹೀಗಾಗಿ ಹೆಚ್ಚಿನವರು ಬ್ಯಾಂಕ್ ಲಾಕರ್ ನಲ್ಲಿ ಚಿನ್ನ (Gold) ಇಡುವುದು ಸುರಕ್ಷಿತ ಎಂದುಕೊಂಡಿದ್ರೆ ಈ ವಿಚಾರ ತಿಳಿದಿರಲೇಬೇಕು. ಹೌದು, ಬೆಂಕಿ, ಕಳ್ಳತನ, ದರೋಡೆ, ಕಟ್ಟಡ ಕುಸಿತ ಅಥವಾ ಬ್ಯಾಂಕ್ ಉದ್ಯೋಗಿಯಿಂದ ವಂಚನೆಯಿಂದಾಗಿ ಆಭರಣಗಳು ಕಳೆದುಹೋದರೆ ಬ್ಯಾಂಕ್ ಹೊಣೆಗಾರನಾಗಿರುತ್ತದೆ. ಆದರೆ ಒಂದು ವೇಳೆ ನಿಮ್ಮ ಚಿನ್ನ ಕಳುವಾದರೆ ಆ ಚಿನ್ನವು ಎಷ್ಟು ಮೌಲ್ಯ ಹೊಂದಿದೆ, ಅಷ್ಟು ಮೊತ್ತವನ್ನು ಬ್ಯಾಂಕ್ ನಿಮಗೆ ಕೊಡಲ್ಲ. ನಿಮ್ಮ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಹೆಚ್ಚು ಹಣವನ್ನು ಕೊಡುತ್ತದೆ. ಹಾಗಾದ್ರೆ ಬ್ಯಾಂಕ್ ಲಾಕರ್ ನಿಯಮದಲ್ಲಿ ಏನಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಡುವ ಮುನ್ನ ಈ ವಿಷ್ಯಗಳು ತಿಳಿದಿರಲಿ

  • ಆರ್ ಬಿಐ ನಿಯಮಗಳ ಪ್ರಕಾರ ಲಾಕರ್‌ನಲ್ಲಿ ಇಡಬಹುದಾದ ಚಿನ್ನದ ಗರಿಷ್ಠ ಪ್ರಮಾಣಕ್ಕೆ ಯಾವುದೇ ಮಿತಿಯಿಲ್ಲ. ನಿಮ್ಮ ಅಗತ್ಯತೆಗಳು ಹಾಗೂ ಲಾಕರ್‌ಗಳ ಗಾತ್ರವನ್ನು ಅವಲಂಬಿಸಿ ನೀವು ಎಷ್ಟು ಬೇಕಾದರೂ ಇಡಬಹುದು.
  • ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಟ್ಟಾಗ ಅದರ ಗಾತ್ರ ಹಾಗೂ ಶಾಖೆಯ ಸ್ಥಳಕ್ಕೆ ಅನುಗುಣವಾಗಿ ವಾರ್ಷಿಕ ಬಾಡಿಗೆ (1,000 ರೂ ರಿಂದ 40,000 ರೂ ಹೆಚ್ಚು) ಅನ್ವಯಿಸುತ್ತದೆ.
  • ಲಾಕರ್‌ಗಳಲ್ಲಿ ಠೇವಣಿ ಇಟ್ಟ ಚಿನ್ನದ ಆಭರಣಗಳಿಗೆ ಬ್ಯಾಂಕ್‌ ಯಾವುದೇ ವಿಮೆ ನೀಡುವುದಿಲ್ಲ. ಯಾಕೆಂದರೆ, ಈ ಲಾಕರ್‌ನಲ್ಲಿರುವ ವಸ್ತುಗಳ ಅಥವಾ ಚಿನ್ನದ ದಾಖಲೆಗಳು ಗ್ರಾಹಕರಿಗೆ ಮಾತ್ರ ತಿಳಿದಿರುತ್ತದೆ.
  • ಬ್ಯಾಂಕ್ ನಿರ್ಲಕ್ಷ್ಯ, ವಂಚನೆ ಅಥವಾ ಕಳ್ಳತನದಿಂದ ಲಾಕರ್ ನಷ್ಟವಾದರೆ ನಿಮ್ಮ ಚಿನ್ನಕ್ಕೆ ಗರಿಷ್ಠ ಪರಿಹಾರವು ವಾರ್ಷಿಕ ಬಾಡಿಗೆಯ 100 ಪಟ್ಟು ಮಾತ್ರ ಇರುತ್ತದೆ.

ಇದನ್ನೂ ಓದಿ: ಚಿನ್ನದ ಬೆಲೆ ಮತ್ತೆ ಏರಿಕೆ ಹಾದಿಗೆ; ಇಲ್ಲಿದೆ ಇವತ್ತಿನ ದರಪಟ್ಟಿ

Loading...
  • ಚಿನ್ನಕ್ಕೆ ಆದಾಯ ತೆರಿಗೆ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ ಗ್ರಾಹಕ ಖರೀದಿ ಬಿಲ್‌ಗಳು ಹಾಗೂ ಅದಕ್ಕೆ ಸಂಬಂಧಿತ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us