ವಾಟ್ಸಾಪ್ನಲ್ಲಿ ಬಂತು ಬಹಳ ಬೇಡಿಕೆಯ ಫೀಚರ್; ಮೆಸೇಜ್ಗಳನ್ನು ಶೆಡ್ಯೂಲ್ ಮಾಡಿ ನಿಶ್ಚಿಂತೆಯಿಂದಿರಿ; ಇದರ ಬಳಕೆಯ ವಿಧಾನ ಇಲ್ಲಿದೆ
ಹುಟ್ಟುಹಬ್ಬವೋ ಅಥವಾ ಇನ್ಯಾವುದಾದರೂ ವಿಶೇಷ ಸಂದರ್ಭಗಳಿಗೆ ಯಾರಿಗಾದರೂ ಶುಭಕೋರಲು ಮರೆತುಹೋಗಬಹುದು. ಇದನ್ನು ತಪ್ಪಿಸಲು ನೀವು ಯಾವುದೇ ಮೆಸೇಜನ್ನು ಮುಂಚಿತವಾಗಿಯೇ ಶೆಡ್ಯೂಲ್ ಮಾಡಬಹುದಾದ ಹೊಸ ಫೀಚರ್ ಅನ್ನು ವಾಟ್ಸಾಪ್ ಪರಿಚಯಿಸಿದೆ. ಮೆಸೇಜ್ ಶೆಡ್ಯೂಲ್ ಮಾಡುವ ಫೀಚರ್ ಬೇಕೆಂದು ಅತಿಹೆಚ್ಚು ವಾಟ್ಸಾಪ್ ಬಳಕೆದಾರರ ಬೇಡಿಕೆಯಾಗಿತ್ತಂತೆ.

ನವದೆಹಲಿ, ನವೆಂಬ್ 26: ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಮುಂಚಿತವಾಗಿಯೇ ಸಂದೇಶಗಳನ್ನು ಶೆಡ್ಯೂಲ್ ಮಾಡುವ ಹೊಸ ಫೀಚರ್ ಅನ್ನು ವಾಟ್ಸಾಪ್ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಫೋನ್ ಸ್ವಿಚ್ ಆಫ್ ಆಗಿದ್ದರೂ ಅಥವಾ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ನಿಗದಿತ ಸಮಯಕ್ಕೆ ಸಂದೇಶ ತಲುಪುತ್ತದೆ.
ಬಳಕೆದಾರರು ತಮ್ಮ ವೈಯಕ್ತಿಕ ಅಥವಾ ಗ್ರೂಪ್ ಚಾಟ್‌ಗಳಲ್ಲಿ ಸಂದೇಶಗಳನ್ನು ಕನಿಷ್ಠ 10 ನಿಮಿಷದಿಂದ ಗರಿಷ್ಠ 14 ದಿನಗಳ ಮುಂಚಿತವಾಗಿಯೇ ನಿಗದಿಪಡಿಸಬಹುದು.
ಟೆಕ್ಸ್ಟ್ ಸಂದೇಶಗಳ ಜೊತೆಗೆ ಫೋಟೋ ಮತ್ತು ವಿಡಿಯೋಗಳನ್ನೂ ಶೆಡ್ಯೂಲ್ ಮಾಡುವ ಸೌಲಭ್ಯವಿದ್ದು, ಜಾಗತಿಕವಾಗಿ ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರಿಗೆ ಹಂತ ಹಂತವಾಗಿ ಲಭ್ಯವಾಗುತ್ತಿದೆ.
ಇದನ್ನೂ ಓದಿ: ಯಂತ್ರೋಪಕರಣ ತಯಾರಿಕೆ ಉತ್ತೇಜಿಸಲು 11,000 ಕೋಟಿ ರೂ ಸ್ಕೀಮ್ಗೆ ಅನುಮೋದನೆ; ಚೀನಾಗೆ ಸೆಡ್ಡು ಹೊಡೆಯುತ್ತಿರುವ ಭಾರತ
ವಾಟ್ಸಾಪ್ ಮುಖ್ಯಸ್ಥರ ಸಂದೇಶ
ವಾಟ್ಸಾಪ್ನ ಸಿಇಒ ಆಗಿರುವ ಕುನಾಲ್ ಶಾ ಅವರು ಹೊಸ ಫೀಚರ್ ಅನ್ನು ಎಕ್ಸ್ ಪೋಸ್ಟ್ನಲ್ಲಿ ಘೋಷಿಸಿದ್ದಾರೆ. ನಿಮ್ಮ ನೆಚ್ಚಿನವರ ಹುಟ್ಟುಹಬ್ಬಕ್ಕೆ ಶುಭಕೋರಲು ನೀವೇ ಮೊದಲಿಗರಾಗಿರಿ. ವಾಟ್ಸಾಪ್ನಲ್ಲಿ ಈಗ ಮೆಸೇಜ್ಗಳನ್ನು ಶೆಡ್ಯೂಲ್ ಮಾಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
Be the first one to wish for their birthdays now.
Scheduled messages on WA now.
— Kunal Shah (@kunalb11) November 25, 2026
ವಾಟ್ಸಾಪ್ ಮೆಸೇಜ್ ಶೆಡ್ಯೂಲಿಂಗ್ ಬಳಸುವ ವಿಧಾನ ಸರಳ
ಚಾಟ್ ಬಾಕ್ಸ್‌ನಲ್ಲಿ ಸಂದೇಶವನ್ನು ಟೈಪ್ ಮಾಡಿ (ಅಥವಾ ಫೋಟೋ/ವಿಡಿಯೋ ಆಯ್ಕೆ ಮಾಡಿ) ಸಾಮಾನ್ಯವಾಗಿ ಟ್ಯಾಪ್ ಮಾಡುವ ಬದಲು ‘ಸೆಂಡ್’ (Send) ಬಟನ್ ಅನ್ನು ಒತ್ತಿ ಹಿಡಿಯಬೇಕು.
ಆಗ ಕಾಣಿಸುವ ದಿನಾಂಕ ಮತ್ತು ಸಮಯದ ಆಯ್ಕೆಯಿಂದ ನಿಮಗೆ ಬೇಕಾದ ಸಮಯವನ್ನು ನಿಗದಿಪಡಿಸಿ ಖಚಿತಪಡಿಸಿದರೆ, ಆ ಸಮಯಕ್ಕೆ ಸಂದೇಶವು ತಾನಾಗಿಯೇ ರವಾನೆಯಾಗುತ್ತದೆ. ಸ್ವೀಕರಿಸುವವರಿಗೆ ಅದು ಸಾಮಾನ್ಯ ಸಂದೇಶದಂತೆಯೇ ಕಾಣುತ್ತದೆ.
ಇದನ್ನೂ ಓದಿ: ಮತ್ತೆ ಸುಂಕದ ಶಾಕ್ ಕೊಟ್ಟ ಟ್ರಂಪ್; ಭಾರತಕ್ಕೆ ಶೇ. 25, ಚೀನಾಗೆ ಶೇ. 40ರವರೆಗೆ ಟಾರಿಫ್ ವಿಧಿಸಲು ಅಮೆರಿಕ ಪ್ರಸ್ತಾಪ
ಫೋನ್ ಆಫ್ ಇದ್ದರೂ ಸಂದೇಶ ರವಾನೆ ಮತ್ತು ಭದ್ರತೆ
ಒಮ್ಮೆ ಸಂದೇಶವನ್ನು ಶೆಡ್ಯೂಲ್ ಮಾಡಿದ ನಂತರ ನಿಮ್ಮ ಫೋನ್ ಸ್ವಿಚ್ ಆಫ್ ಆಗಿದ್ದರೂ, ಬ್ಯಾಟರಿ ಖಾಲಿಯಾಗಿದ್ದರೂ ಅಥವಾ ನೆಟ್‌ವರ್ಕ್ ವ್ಯಾಪ್ತಿಯಿಂದ ಹೊರಗಿದ್ದರೂ ನಿಗದಿತ ಸಮಯಕ್ಕೆ ಸಂದೇಶವು ತಲುಪುತ್ತದೆ.
ಇತರ ಸಂದೇಶಗಳಂತೆಯೇ ಶೆಡ್ಯೂಲ್ ಮಾಡಿದ ಸಂದೇಶಗಳೂ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಆಗಿದ್ದು, ಕಳುಹಿಸುವ ಮುನ್ನ ಶೆಡ್ಯೂಲ್ ಮಾಡಿದ ಸಂದೇಶಗಳನ್ನು ನೋಡಲು ಮತ್ತು ಅಗತ್ಯವಿದ್ದರೆ ಅಳಿಸಲು ಅವಕಾಶವಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




