AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 26 November: ಚಿನ್ನದ ಬೆಲೆ ಮತ್ತೆ ಏರಿಕೆ ಹಾದಿಗೆ; ಇಲ್ಲಿದೆ ಇವತ್ತಿನ ದರಪಟ್ಟಿ

Gold Price 26 November 2026: ಚಿನ್ನದ ಬೆಲೆ ಇವತ್ತು ಏರಿದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ಬಂಗಾರದ ಬೆಲೆ ಗ್ರಾಮ್​ಗೆ 120 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆ 11,420 ರೂನಿಂದ 11,540 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,589 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 175 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 175 ರೂ ಇದೆ.

Gold Rates 26 November: ಚಿನ್ನದ ಬೆಲೆ ಮತ್ತೆ ಏರಿಕೆ ಹಾದಿಗೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 26, 2026 | 10:41 AM

Share

ನವದೆಹಲಿ, ನವೆಂಬರ್ 26: ಬಂಗಾರದ ಬೆಲೆ ಇವತ್ತು ಗ್ರಾಮ್​ಗೆ 120 ರೂ ಏರಿದೆ. ನಿನ್ನೆ ಭರ್ಜರಿ ಕುಸಿತ ಕಂಡಿದ್ದ ಇದರ ಬೆಲೆ ಇವತ್ತು ಏರಿಕೆಯ ಟ್ರ್ಯಾಕ್​ಗೆ ಮರಳಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಇಳಿದಿದೆ. ಭಾರತದಲ್ಲಿ ಸ್ಪಾಟ್ ಚಿನ್ನದ ಬೆಲೆ ತಗ್ಗಿದೆ. ಆದರೆ, ಎಂಸಿಎಕ್ಸ್ ಫ್ಯೂಚರ್ಸ್​ನಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,15,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,25,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,15,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 16,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 26ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,589
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,540
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,442
  • ಬೆಳ್ಳಿ ಬೆಲೆ 1 ಗ್ರಾಂಗೆ: 165 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,540 ರೂ
  • ಚೆನ್ನೈ: 11,540 ರೂ
  • ಮುಂಬೈ: 11,540 ರೂ
  • ದೆಹಲಿ: 11,555
  • ಕೋಲ್ಕತಾ: 11,540 ರೂ
  • ಕೇರಳ: 11,540 ರೂ
  • ಅಹ್ಮದಾಬಾದ್: 11,545 ರೂ
  • ಜೈಪುರ್: 11,555
  • ಲಕ್ನೋ: 11,555
  • ಭುವನೇಶ್ವರ್: 11,540 ರೂ

ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)

  • ಎಂಸಿಎಕ್ಸ್ ಚಿನ್ನ 1 ಗ್ರಾಮ್​ಗೆ 12,356 ರೂ
  • ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್​ಗೆ 148 ರೂ

ಭಾರತದಲ್ಲಿ ಸ್ಪಾಟ್ ದರಗಳು

  • ಚಿನ್ನ (24 ಕ್ಯಾರಟ್) 1 ಗ್ರಾಮ್​ಗೆ 12,106 ರೂ
  • ಬೆಳ್ಳಿ 1 ಗ್ರಾಮ್​ಗೆ 143 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 115.57 ಡಾಲರ್ (10,708 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.347 ಡಾಲರ್ (125 ರುಪಾಯಿ)

ಇದನ್ನೂ ಓದಿ: ಎಟಿಎಂ, ಯುಪಿಐ ಮೂಲಕ ಪಿಎಫ್ ಹಣ ವಿತ್​ಡ್ರಾ ಮಾಡಲು ಅವಕಾಶ; ಫೆಬ್ರುವರಿಯಲ್ಲಿ ಇಪಿಎಫ್​ಒ 3.0 ಜಾರಿ ಸಾಧ್ಯತೆ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 12,589 ರುಪಾಯಿ
  • ಮಲೇಷ್ಯಾ: 486 ರಿಂಗಿಟ್ (10,916 ರುಪಾಯಿ)
  • ದುಬೈ: 426 ಡಿರಾಮ್ (10,713 ರುಪಾಯಿ)
  • ಅಮೆರಿಕ: 116.50 ಡಾಲರ್ (10,761 ರುಪಾಯಿ)
  • ಸಿಂಗಾಪುರ: 159 ಸಿಂಗಾಪುರ್ ಡಾಲರ್ (11,385 ರುಪಾಯಿ)
  • ಕತಾರ್: 424.50 ಕತಾರಿ ರಿಯಾಲ್ (10,756 ರೂ)
  • ಸೌದಿ ಅರೇಬಿಯಾ: 434 ಸೌದಿ ರಿಯಾಲ್ (10,686 ರುಪಾಯಿ)
  • ಓಮನ್: 44.90 ಒಮಾನಿ ರಿಯಾಲ್ (10,772 ರುಪಾಯಿ)
  • ಕುವೇತ್: 35.80 ಕುವೇತಿ ದಿನಾರ್ (10,701 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 165 ರೂ
  • ಚೆನ್ನೈ: 165 ರೂ
  • ಮುಂಬೈ: 165 ರೂ
  • ದೆಹಲಿ: 165 ರೂ
  • ಕೋಲ್ಕತಾ: 165 ರೂ
  • ಕೇರಳ: 165 ರೂ
  • ಅಹ್ಮದಾಬಾದ್: 165 ರೂ
  • ಜೈಪುರ್: 165 ರೂ
  • ಲಕ್ನೋ: 165 ರೂ
  • ಭುವನೇಶ್ವರ್: 165 ರೂ
  • ಪುಣೆ: 165

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More