ಬೆಂಗಳೂರು, ಜುಲೈ 30: ಪೋಸ್ಟ್ ಪೇಯ್ಡ್ಗೆ ಹೋಲಿಸಿದರೆ ಪ್ರೀಪೇಯ್ಡ್ ಪ್ಲಾನ್ಗಳು ಹೆಚ್ಚು ಬಳಕೆಯಲ್ಲಿವೆ. ಏರ್ಟೆಲ್, ವೊಡಾಫೋನ್ ಪ್ರಾಬಲ್ಯ ಇದ್ದ ಕಾಲದಲ್ಲಿ ಜಿಯೋ ಪ್ರವೇಶ ಕೊಟ್ಟು ಬೆಲೆ ಇಳಿಕೆಯ ಸರಮಾಲೆಗೆ ನಾಂದಿ ಹಾಡಿತು. ಈಗ ಜಿಯೋ, ವೊಡಾಫೋನ್, ಏರ್ಟೆಲ್ನ ದುಬಾರಿ ದರಗಳ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ಫೀನಿಕ್ಸ್ನಂತೆ ಮರಳಿ ಬಂದಿದೆ. ಬಹಳ ಕಡಿಮೆ ಬೆಲೆಗೆ ಪ್ಲಾನ್ಗಳನ್ನು ಆಫರ್ ಮಾಡಿದೆ. 5ಜಿ ಅವಶ್ಯಕತೆ ಇಲ್ಲ ಎನ್ನುವವರಿಗೆ ಬಿಎಸ್ಎನ್ಎಲ್ ಉತ್ತಮ ಆಯ್ಕೆ ಎನಿಸಿದೆ. ಬಿಎಸ್ಸೆನ್ನೆಲ್ನ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ಗಳೆಲ್ಲವೂ ಉತ್ತಮವಾಗಿವೆ. 28 ದಿನ ಅಥವಾ ಒಂದು ತಿಂಗಳ ಅಸುಪಾಸಿನ ದಿನಗಳಷ್ಟು ವ್ಯಾಲಿಡಿಟಿ ಇರುವ ಪ್ಲಾನ್ಗಳಲ್ಲಿ ಬಿಎಸ್ಎನ್ನದ್ದು ಮೂರು ಆಯ್ಕೆಗಳಿವೆ.
ಬಿಎಸ್ಸೆನ್ನೆಲ್ ಒಂದು ತಿಂಗಳ ವ್ಯಾಲಿಡಿಟಿ ಇರುವ ನಾಲ್ಕು ಪ್ಲಾನ್ಗಳನ್ನು ಹೊಂದಿದೆ. 107 ರೂನಿಂದ ಇದರ ಪ್ಲಾನ್ ಆರಂಭವಾಗುತ್ತದೆ.
ಏರ್ಟೆಲ್ನಲ್ಲಿ ಒಂದು ತಿಂಗಳ ವ್ಯಾಲಿಡಿಟಿ ಇರುವ ಹಲವು ಪ್ರೀಪೇಯ್ಡ್ ಪ್ಲಾನ್ಗಳಿವೆ. 199 ರೂನಿಂದ ಆರಂಭವಾಗಿ 609 ರೂವರೆಗೆ 10ಕ್ಕೂ ಹೆಚ್ಚು ಪ್ಲಾನ್ಗಳಿವೆ. 199 ರೂ ಪ್ಲಾನ್ನಲ್ಲಿ 2ಜಿಬಿ ಡಾಟಾ ಸಿಗುತ್ತದೆ. 609 ರೂಗೆ 60 ಜಿಬಿಯಷ್ಟು ಡಾಟಾ ಸಿಗುತ್ತದೆ.
ಇದನ್ನೂ ಓದಿ: ಬಿಎಸ್ಸೆನ್ನೆಲ್ 365 ದಿನ ವ್ಯಾಲಿಡಿಟಿ ಪ್ಲಾನ್ 321 ರೂನಿಂದ ಶುರು; ಇಲ್ಲಿದೆ ಜಿಯೊ, ಏರ್ಟೆಲ್, ಬಿಎಸ್ಎನ್ಎಲ್ ಮಧ್ಯೆ ಹೋಲಿಕೆ
ರಿಲಾಯನ್ಸ್ ಜಿಯೋದಲ್ಲಿ 28 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ಗಳ ಪೈಕಿ 299 ರೂ ಪ್ಲಾನ್ ಜನಪ್ರಿಯವಾದುದು. ದಿನಕ್ಕೆ 1.5ಜಿಬಿ ಡಾಟಾ ಸಿಗುತ್ತದೆ. 28 ದಿನದಲ್ಲಿ ಒಟ್ಟು 42 ಜಿಬಿ ಡಾಟಾ ಲಭ್ಯ ಇರುತ್ತದೆ.
ವೊಡಾಫೋನ್ ಐಡಿಯಾ ಕೂಡ ಒಂದು ತಿಂಗಳ ಅವಧಿಗೆ ಉತ್ತಮ ಪ್ರೀಪೇಯ್ಡ್ ಪ್ಲಾನ್ಗಳ ಪಟ್ಟಿ ಹೊಂದಿದೆ. 365 ರೂ ಪ್ಲಾನ್ 28 ದಿನ ವ್ಯಾಲಿಡಿಟಿ ಇದ್ದು ದಿನಕ್ಕೆ 2ಜಿಬಿ ಡಾಟಾ ಸಿಗುತ್ತದೆ. ಅದರ 279 ರೂ ಪ್ಲಾನ್ ಒಂದು ತಿಂಗಳ ಅವಧಿಯದ್ದಾಗಿದ್ದು ದಿನಕ್ಕೆ 2ಜಿಬಿ ಡಾಟಾ ಬಳಕೆಗೆ ಅವಕಾಶ ಕೊಡುತ್ತದೆ. 449 ರೂ, 409 ರೂ, 469 ರೂ, 407 ರೂ, 408 ರೂ ಹೀಗೆ ವಿವಿಧ ಡಾಟಾ ಮಿತಿಯೊಂದಿಗೆ ಪ್ಲಾನ್ಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ