AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI ಕೆಂಗಣ್ಣಿಗೆ ಗುರಿಯಾಗಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್, ಸಿಂಗಾಪುರ ಮೂಲದ ಬ್ಯಾಂಕ್​ ಜೊತೆ ವಿಲೀನ: ನಿಟ್ಟುಸಿರುಬಿಟ್ಟ ಗ್ರಾಹಕರು

ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ್ ಬ್ಯಾಂಕ್‌ 1926ರಲ್ಲಿ ಸ್ಥಾಪನೆಯಾಗಿತ್ತು. ಆದರೆ ಕೆಟ್ಟ ಸಾಲ ಮತ್ತು ನಿಬಂಧನೆಗಳ ಏರಿಕೆಯಿಂದಾಗಿ ಬ್ಯಾಂಕ್​ಗೆ ಲಾಸ್ ಆಗಿತ್ತು. ಈಗ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಡಿಬಿಎಸ್ ಇಂಡಿಯಾ ಬ್ಯಾಂಕ್​ ₹2,500 ಕೋಟಿ ಬಂಡವಾಳ ಹೂಡಲಿದೆ. ಒಟ್ನಲ್ಲಿ ಬ್ಯಾಂಕ್​ನಲ್ಲಿ ದಿಢೀರ್ ನಡೆದ ಹಲವು ಬೆಳವಣಿಗೆಗಳು ಲಕ್ಷ್ಮೀ ವಿಲಾಸ್ ಬ್ಯಾಂಕ್​ನ ಗ್ರಾಹಕರ ನಿದ್ದೆಗೆ ಭಂಗ ತಂದಿತ್ತು. ಆದರೆ ಕೇಂದ್ರ ಸರ್ಕಾರದ ಕ್ರಮದಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

RBI ಕೆಂಗಣ್ಣಿಗೆ ಗುರಿಯಾಗಿದ್ದ ಲಕ್ಷ್ಮಿ ವಿಲಾಸ್ ಬ್ಯಾಂಕ್, ಸಿಂಗಾಪುರ ಮೂಲದ ಬ್ಯಾಂಕ್​ ಜೊತೆ ವಿಲೀನ: ನಿಟ್ಟುಸಿರುಬಿಟ್ಟ ಗ್ರಾಹಕರು
ಸಿಂಗಾಪುರ ಮೂಲದ ಬ್ಯಾಂಕ್​ನೊಂದಿಗೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿಲೀನ
ಆಯೇಷಾ ಬಾನು
ಆಯೇಷಾ ಬಾನು| Edited By: |

Updated on:Oct 16, 2026 | 6:35 PM

Share

ದೆಹಲಿ: ಬ್ಯಾಂಕ್​ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಉತ್ಸಾಹ ತೋರುತ್ತಿದೆ. ಈಗಾಗಲೇ ಅನೇಕ ಬ್ಯಾಂಕ್​ಗಳನ್ನು ಕೇಂದ್ರ ಸರ್ಕಾರ ವಿಲೀನಗೊಳಿಸಿದ್ದು, ಮತ್ತೊಂದು ಬ್ಯಾಂಕ್​ನ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಲಕ್ಷ್ಮಿ ವಿಲಾಸ್​ ಬ್ಯಾಂಕ್​ ಅನ್ನು ಅಧಿಕೃತವಾಗಿ ಸಿಂಗಾಪುರ ಮೂಲದ ಡಿಬಿಎಸ್​ ಬ್ಯಾಂಕ್ ಜೊತೆಗೆ ವಿಲೀನಕ್ಕೆ ಒಳಪಡಿಸಿದೆ. ಲಕ್ಷ್ಮಿ ವಿಲಾಸ್​ ಬ್ಯಾಂಕ್​ನ್ನು ಡಿಬಿಎಸ್ ಬ್ಯಾಂಕಿನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಡಿಸಲು ನ.26 ನಡೆದ ಕೇಂದ್ರ ಸಂಪುಟದಲ್ಲಿ ಎಲ್ಲಾ ಸಚಿವರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.

ವಿಲೀನದ ಬಗ್ಗೆ ಮೊದಲೇ ಸಿಕ್ಕಿತ್ತು ಸುಳಿವು! ಹಲವು ದಿನಗಳಿಂದ ಲಕ್ಷ್ಮಿ ವಿಲಾಸ್​ ಬ್ಯಾಂಕ್​ನ್ನು ಡಿಬಿಎಸ್​ ಜೊತೆ ವಿಲೀನಗೊಳಿಸುವ ಕುರಿತ ಮಾತು ಕೇಳಿ ಬಂದಿತ್ತು. ಆದರೆ ಕೊನೆಗೂ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇನ್ನು ವಿಲೀನವಾಗುವುದರಿಂದ ಠೇವಣಿದಾರರು ಠೇವಣಿ ಹಿಂಪಡೆಯುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಲ್ಲದೆ, ಠೇವಣಿ ಕುರಿತು ಯಾವುದೇ ಚಿಂತೆ ಬೇಕಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ. ಹಾಗಾದ್ರೆ ವಿಲೀನದ ಪರಿಣಾಮ ಏನು ಅನ್ನೋದನ್ನ ಇಲ್ಲಿ ಓದಿ ತಿಳಿಯಿರಿ.

ಬ್ಯಾಂಕ್​ಗೆ ನಿರಂತರ ನಷ್ಟ! ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ್ ಬ್ಯಾಂಕ್‌ 1926ರಲ್ಲಿ ಸ್ಥಾಪನೆಯಾಗಿತ್ತು. ಆದರೆ ಕೆಟ್ಟ ಸಾಲ ಮತ್ತು ನಿಬಂಧನೆಗಳ ಏರಿಕೆಯಿಂದಾಗಿ ಬ್ಯಾಂಕ್​ಗೆ ಲಾಸ್ ಆಗಿತ್ತು. ಈಗ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಡಿಬಿಎಸ್ ಇಂಡಿಯಾ ಬ್ಯಾಂಕ್​ ₹2,500 ಕೋಟಿ ಬಂಡವಾಳ ಹೂಡಲಿದೆ.

ಈ ಹಿಂದೆ ಬ್ಯಾಂಕ್​ನ ಗ್ರಾಹಕರಿಗೆ ಆರ್​ಬಿಐ ಹಲವು ನಿರ್ಬಂಧ ಹೇರಿತ್ತು. ಅದನ್ನ ಹಿಂಪಡೆಯುವ ಸಾಧ್ಯತೆ ಇದೆ. ಬ್ಯಾಂಕ್ ಆರ್ಥಿಕ ಪರಿಸ್ಥಿತಿ ಕುಸಿತದ ಪರಿಣಾಮ ವಿಲೀನ ಮಾಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಒಟ್ನಲ್ಲಿ ಬ್ಯಾಂಕ್​ನಲ್ಲಿ ದಿಢೀರ್ ನಡೆದ ಹಲವು ಬೆಳವಣಿಗೆಗಳು ಲಕ್ಷ್ಮೀ ವಿಲಾಸ್ ಬ್ಯಾಂಕ್​ನ ಗ್ರಾಹಕರ ನಿದ್ದೆಗೆ ಭಂಗ ತಂದಿತ್ತು. ಆದರೆ ಕೇಂದ್ರ ಸರ್ಕಾರದ ಕ್ರಮದಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Published On - 7:35 am, Thu, 26 November 20

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
Horoscope Today: ಕುಜ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ದೂರ ಆಗಿಲ್ಲ: ಸ್ಪಷ್ಟನೆ ನೀಡಿದ ನಟ
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾವೇರಿಯಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
ಹಾಸನ ಡಿಸಿ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್ ದೂರು
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಟ ವಿನೋದ್ ರಾಜ್
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
KPSC ಹಗರಣ: ಸಾಹುಕಾರ್, ಕನ್ನಾಳೆ ಜಾಮೀನು ಅರ್ಜಿ ವಜಾ; ಗೀತಾಗೆ ಜಾಮೀನು
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಮಂಜ ಬಂದಿದ್ದೆ, ಮತ್ತೆ ರದ್ದಾಯ್ತು ಟಾಸ್ಕ್: ವಿಡಿಯೋ
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ಕರಡಿ ಬೆನ್ನಟ್ಟಿದ ಹುಲಿರಾಯ: ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು