ತೈಲ ಅವಲಂಬನೆ ತಗ್ಗಿಸಲು ಚೀನಾ ಸೂಪರ್ ಐಡಿಯಾ; 55 ಲಕ್ಷ ಕೋಟಿ ರೂ ವೆಚ್ಚದಲ್ಲಿ ಸೂಪರ್​ಗ್ರಿಡ್

China building electric supergrid with ultra high-voltage transmission corridors: ಹಾರ್ಮುಜ್ ಜಲಸಂಧಿಗೆ ತಡೆಯಾಗಿ ಜಾಗತಿಕ ತೈಲ ಬಿಕ್ಕಟ್ಟು ಉದ್ಭವವಾಗಿದೆ. ಇದೇ ವೇಳೆ ಚೀನಾ ಸದ್ದಿಲ್ಲದೆ ಸೂಪರ್​ಗ್ರಿಡ್ ಪ್ರಾಜೆಕ್ಟ್ ಜಾರಿಗೊಳಿಸುತ್ತಿದೆ. ದೇಶಾದ್ಯಂತ ಯುಎಚ್​ವಿ ಅಥವಾ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್​ಮಿಶನ್ ಕಾರಿಡಾರ್​ಗಳನ್ನು ಚೀನಾ ನಿರ್ಮಿಸುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಚೀನಾಗೆ ವಿದ್ಯುತ್ ಸಮಸ್ಯೆ ಬಂದೊದಗುವುದು ಕಡಿಮೆ.

ತೈಲ ಅವಲಂಬನೆ ತಗ್ಗಿಸಲು ಚೀನಾ ಸೂಪರ್ ಐಡಿಯಾ; 55 ಲಕ್ಷ ಕೋಟಿ ರೂ ವೆಚ್ಚದಲ್ಲಿ ಸೂಪರ್​ಗ್ರಿಡ್
ಚೀನಾ ಮುಖ್ಯಸ್ಥ ಶಿ ಜಿನ್​ಪಿಂಗ್
Image Credit source: PTI

Updated on: Mar 26, 2026 | 12:25 PM

ನವದೆಹಲಿ, ಮಾರ್ಚ್ 26: ತಂತ್ರಜ್ಞಾನ ಮತ್ತು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಚೀನಾ (China) ಬಹಳ ವೇಗವಾಗಿ ಸಾಗುತ್ತಿದೆ. ಇಡೀ ಜಗತ್ತು ತೈಲ ಬಿಕ್ಕಟ್ಟಿನಲ್ಲಿ ತಲೆ ಮೇಲೆ ಕೈಹೊತ್ತು ಕೂತರೆ, ಚೀನಾ ಸದ್ದಿಲ್ಲದೆ ಮಹಾ ಕ್ರಾಂತಿಯಲ್ಲಿ ತೊಡಗಿದೆ. ಭಾರತವು ಎಲ್​ಪಿಜಿ ಬಿಕ್ಕಟ್ಟಿನಲ್ಲಿ ಪಿಎನ್​ಜಿ ಇನ್​ಫ್​ರಾಸ್ಟ್ರಕ್ಚರ್ ಅನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವಂತೆ, ಚೀನಾ ಬಹಳ ಹಿಂದೆಯೇ ತೈಲ ಅವಲಂಬನೆ ತಗ್ಗಿಸಲು ಸೂಪರ್ ಐಡಿಯಾ ಹಾಕಿತ್ತು. ಇದೀಗ ಅದು ಕಾರ್ಯಗತಗೊಳ್ಳುತ್ತಿದೆ. ಇದು ಚೀನಾದ್ಯಂತ ಎಲೆಕ್ಟ್ರಿಕ್ ಹೈವೇ ನಿರ್ಮಿಸುವ ಭಾರೀ ಯೋಜನೆ.

ಏನಿದು ಎಲೆಕ್ಟ್ರಿಕ್ ಹೈವೇ?

ಚೀನಾದ ಹೆಚ್ಚಿನ ನಗರಗಳು ಮತ್ತು ಜನಸಂಖ್ಯೆ ಇರುವುದು ಪೂರ್ವ ಭಾಗದಲ್ಲಿ. ನೈಸರ್ಗಿಕ ಸಂಪನ್ಮೂಲಗಳು ಹೆಚ್ಚು ಇರುವುದು ಪಶ್ಚಿಮ ಭಾಗಗಳಲ್ಲಿ. ಬಹುತೇಕ ಉದ್ಯಮಗಳೆಲ್ಲಾ ನೆಲಸಿರುವುದು ಪೂರ್ವ ಭಾಗದ ನಗರಗಳಲ್ಲಿ. ಇಲ್ಲಿ ಸಿಕ್ಕಾಪಟ್ಟೆ ವಿದ್ಯುತ್ ಬೇಕು. ಇದನ್ನು ಪೂರೈಸಲು ಚೀನಾ ನಾನಾ ಮಾರ್ಗೋಪಾಯಗಳನ್ನು ಹೊಂದಿದೆ. ಕಲ್ಲಿದ್ದಲು ಘಟಕ, ಜಲವಿದ್ಯುತ್, ವಾಯುಶಕ್ತಿ, ಸೌರಶಕ್ತಿ ಹೀಗೆ ವಿವಿಧ ರೀತಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: 2026-27ರಲ್ಲಿ ಭಾರತದ ಜಿಡಿಪಿ ಶೇ. 7.1ರಷ್ಟು ವೃದ್ಧಿ: ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿ ಅಂದಾಜು

ವಿವಿಧ ಭಾಗಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು, ಅದರ ಅಗತ್ಯ ಇರುವ ಪ್ರದೇಶಗಳಿಗೆ ಸಾಗಿಸಲು ಚೀನಾ ಇಡೀ ದೇಶಾದ್ಯಂತ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್​ಮಿಶನ್ ನೆಟ್ವರ್ಕ್ ನಿರ್ಮಿಸುತ್ತಿದೆ. ಈ ಜಾಲದಲ್ಲಿ ಬಹಳ ಸಮರ್ಪಕವಾಗಿ ವಿದ್ಯುತ್ ಅನ್ನು ಸಾಗಿಸಬಹುದು. ಬಹಳ ಸರಳ ಪರಿಕಲ್ಪನೆ. ಆದರೆ, ಅನುಷ್ಠಾನಗೊಳಿಸುವುದು ಸವಾಲಿನ ಕೆಲಸ.

ವರದಿಗಳ ಪ್ರಕಾರ, ಈ ಮಹಾ ಎಲೆಕ್ಟ್ರಿಕ್ ಹೈವೇ ಅಥವಾ ಸೂಪರ್ ಗ್ರಿಡ್ ಯೋಜನೆ ಜಾರಿಗೆ 574 ಬಿಲಿಯನ್ ಡಾಲರ್ ವ್ಯಯವಾಗುತ್ತದೆ. ಅಂದರೆ ಸುಮಾರು 55 ಲಕ್ಷ ಕೋಟಿ ರೂನಷ್ಟು ವೆಚ್ಚವಾಗುವ ಬೃಹತ್ ಯೋಜನೆ. ಪಾಕಿಸ್ತಾನದ ಒಟ್ಟೂ ಜಿಡಿಪಿಗಿಂತಲೂ ಅಧಿಕವಾದುದು. ಚೀನಾ ಈಗಾಗಲೇ ಈ ಯೋಜನೆಯನ್ನು ನಿರ್ಮಿಸಲು ತೊಡಗಿದೆ.

ಇದನ್ನೂ ಓದಿ: ಭಾರತದಲ್ಲಿ ಪಿಎನ್​ಜಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್​ಪಿಜಿ ಬಿಕ್ಕಟ್ಟು

ದೇಶಾದ್ಯಂತ ಅಲ್ಟ್ರಾ ಹೈವೋಲ್ಟೇಜ್ ಟ್ರಾನ್ಸ್​ಮಿಶನ್ ಕಾರಿಡಾರ್​ಗಳನ್ನು ನಿರ್ಮಿಸಲಾಗುತ್ತದೆ. ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ನವೀಕರಣ ಇಂಧನವನ್ನು ಈ ಕಾರಿಡಾರ್ ಮೂಲಕ ಬೇರೆಡೆ ಸಾಗಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us