
ನವದೆಹಲಿ, ನವೆಂಬರ್ 22: 2047ರ ವೇಳೆಗೆ $26.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪಲು ಸುಮಾರು $106 ಟ್ರಿಲಿಯನ್ ಹಣಕಾಸು ಸ್ವತ್ತುಗಳು ಬೇಕಾಗಬಹುದು ಎಂದು ಸಿಐಐ ಅಂದಾಜಿಸಿದೆ (ಪ್ರಸ್ತುತ ಇದು ಸುಮಾರು $7 ಟ್ರಿಲಿಯನ್ ಇದೆ). ಬ್ಯಾಂಕಿಂಗ್ ಸ್ವತ್ತುಗಳು ನಾಮಮಾತ್ರದ ಜಿಡಿಪಿಗಿಂತ (nominal GDP) 3–3.5 ಶೇಕಡಾಂಶ ಹೆಚ್ಚು ವೇಗವಾಗಿ ಬೆಳೆಯಬೇಕಿದ್ದು, ಜಿಡಿಪಿಗೆ ಬ್ಯಾಂಕ್ ಸ್ವತ್ತುಗಳ ಅನುಪಾತವು ಪ್ರಸ್ತುತ ಇರುವ ಸುಮಾರು 1 ರಿಂದ 1.5ಕ್ಕೆ ಏರಬೇಕೆಂದು ವರದಿ ತಿಳಿಸಿದೆ.
ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯು ಪ್ರಸ್ತುತ ಜಿಡಿಪಿಯ ಸುಮಾರು ಶೇ. 15ರಷ್ಟಿದ್ದು (ಚೀನಾದಲ್ಲಿ ಶೇ. 36 ಮತ್ತು ದಕ್ಷಿಣ ಕೊರಿಯಾದಲ್ಲಿ ಶೇ. 80ಕ್ಕಿಂತ ಹೆಚ್ಚು), ಇದನ್ನು ಇನ್ನಷ್ಟು ಆಳಗೊಳಿಸುವ ಅಗತ್ಯವಿದೆ ಎಂದು ಸಿಐಐ ಗಮನಸೆಳೆದಿದೆ. ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಒಟ್ಟಾರೆ ಆರ್ಥಿಕ ವಲಯಗಳಲ್ಲಿ 15 ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದೆ.
ಇದನ್ನೂ ಓದಿ: ಸೇನಾ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಉಲ್ಲೇಖ: ಭದ್ರತಾ ಅಪಾಯದ ಕುರಿತು ದೇಶೀಯ ಉದ್ಯಮದ ಎಚ್ಚರಿಕೆ
ಸಿಐಐ ಶಿಫಾರಸು ಮಾಡಿರುವ 15 ಸುಧಾರಣಾ ಕ್ರಮಗಳಲ್ಲಿ ಕೆಲವು ಈ ಕೆಳಕಂಡಂತಿವೆ:
ಇದನ್ನೂ ಓದಿ: ಅಮೆರಿಕದ ನಾಸ್ಡಾಕ್ ಅನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಲಿಸ್ಟೆಡ್ ಎಕ್ಸ್ಚೇಂಜ್ ಆಪರೇಟರ್ ಆದ ಎನ್ಎಸ್ಇ
2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ‘ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತ ಉನ್ನತ ಮಟ್ಟದ ಸಮಿತಿ’ (ಆರು ತಿಂಗಳ ಅವಧಿಯ ಕಾರ್ಯಯೋಜನೆ) ರಚನೆಯ ಹಿನ್ನೆಲೆಯಲ್ಲಿ ಈ ಶಿಫಾರಸುಗಳು ಬಂದಿವೆ. ದೀರ್ಘಕಾಲೀನ ಬಂಡವಾಳ, ವ್ಯಾಪಕ ಸಾಲ ಲಭ್ಯತೆ ಮತ್ತು ಹಣಕಾಸು ನಾವೀನ್ಯತೆಗೆ ತಕ್ಕ ನಿಯಮಗಳು ಅತ್ಯಗತ್ಯ ಎಂದು ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ