Closing Bell: ಸೆನ್ಸೆಕ್ಸ್ 327 ಪಾಯಿಂಟ್ಸ್, ನಿಫ್ಟಿ 83 ಪಾಯಿಂಟ್ಸ್ ಏರಿಕೆ; ಹಿಂದೂಸ್ತಾನ್ ಯುನಿಲಿವರ್ ಶೇ 4ರಷ್ಟು ಗಳಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜುಲೈ 4ನೇ ತಾರೀಕಿನ ಸೋಮವಾರದಂದು ಏರಿಕೆ ದಾಖಲಿಸಿದ್ದು, ಪ್ರಮುಖವಾಗಿ ಏರಿಕೆ- ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.

Closing Bell: ಸೆನ್ಸೆಕ್ಸ್ 327 ಪಾಯಿಂಟ್ಸ್, ನಿಫ್ಟಿ 83 ಪಾಯಿಂಟ್ಸ್ ಏರಿಕೆ; ಹಿಂದೂಸ್ತಾನ್ ಯುನಿಲಿವರ್ ಶೇ 4ರಷ್ಟು ಗಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 04, 2022 | 4:27 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಜುಲೈ 4ನೇ ತಾರೀಕಿನ ಸೋಮವಾರದಂದು ಏರಿಕೆಯಲ್ಲಿ ಮುಕ್ತಾಯ ಕಂಡಿವೆ. ನಿಫ್ಟಿ ಸೂಚ್ಯಂಕವು 15,800 ಪಾಯಿಂಟ್ಸ್ ಮೇಲ್ಪಟ್ಟು ವ್ಯವಹಾರವನ್ನು ಚುಕ್ತಾ ಮಾಡಿದೆ. ಬಿಎಸ್​ಇ ಸೆನ್ಸೆಕ್ಸ್ 326.84 ಪಾಯಿಂಟ್ಸ್ ಅಥವಾ ಶೇ 0.62ರಷ್ಟು ಹೆಚ್ಚಳವಾಗಿ 53,234.77 ಪಾಯಿಂಟ್ಸ್​​ನಲ್ಲಿ ವಹಿವಾಟು ಮುಗಿಸಿದ್ದರೆ, ನಿಫ್ಟಿ 83.40 ಅಥವಾ ಶೇ 0.53ರಷ್ಟು ಮೇಲೇರಿ 15,835.40 ಪಾಯಿಂಟ್ಸ್​ನಲ್ಲಿ ಕೊನೆಗೊಂಡಿದೆ. ಇಂದಿನ ವಹಿವಾಟಿನಲ್ಲಿ 1976 ಕಂಪೆನಿ ಷೇರುಗಳು ಏರಿಕೆಯೊಂದಿಗೆ ಮುಕ್ತಾಯ ಕಂಡಿದ್ದರೆ, 1330 ಕಂಪೆನಿ ಷೇರುಗಳು ಇಳಿಕೆಯಲ್ಲಿ ವ್ಯವಹಾರ ಕೊನೆಗೊಳಿಸಿದವು. ಇನ್ನು 171 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ.

ವಲಯವಾರು ಗಮನಿಸುವುದಾದರೆ, ಎಫ್​ಎಂಸಿಜಿ, ಬ್ಯಾಂಕ್, ಕ್ಯಾಪಿಟಲ್ ಗೂಡ್ಸ್ ಶೇ 1ರಿಂದ 2ರಷ್ಟು ಹೆಚ್ಚಳವನ್ನು ದಾಖಲಿಸಿದವು. ಆದರೆ ಲೋಹದ ಸೂಚ್ಯಂಕವು ಶೇ 1.5ರಷ್ಟು ಇಳಿಕೆಯನ್ನು ದಾಖಲಿಸಿತು. ಬಿಎಸ್ಇ ಮಿಡ್​ಕ್ಯಾಪ್ ಸೂಚ್ಯಂಕವು ಶೇ 0.8ರಷ್ಟು ಮೇಲೇರಿದ್ದರೆ, ಸ್ಮಾಲ್​ಕ್ಯಾಪ್ ಸೂಚ್ಯಂಕವು ಶೇ 0.6ರಷ್ಟು ನೆಲ ಕಚ್ಚಿತು.

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಹಿಂದೂಸ್ತಾನ್ ಯುನಿಲಿವರ್ ಶೇ 4.07

ಬ್ರಿಟಾನಿಯಾ ಶೇ 3.24

ಇಂಡಸ್​ಇಂಡ್ ಬ್ಯಾಂಕ್ ಶೇ 3.07

ಐಟಿಸಿ ಶೇ 2.66

ಐಸಿಐಸಿಐ ಬ್ಯಾಂಕ್ ಶೇ 2.30

ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಜೆಎಸ್​ಡಬ್ಲ್ಯು ಸ್ಟೀಲ್ ಶೇ -4.72

ಒಎನ್​ಜಿಸಿ ಶೇ -3.85

ಟಿಸಿಎಸ್​ ಶೇ -2.41

ಟಾಟಾ ಸ್ಟೀಲ್ ಶೇ -2.10

ಸಿಪ್ಲಾ ಶೇ -1.96

ಇದನ್ನೂ ಓದಿ: Stock Market Prediction For July: ಷೇರು ಮಾರುಕಟ್ಟೆಯಲ್ಲಿ ಜುಲೈನಲ್ಲಿ ಏನೇನಾಗಲಿದೆ? ಇಲ್ಲಿದೆ ಖ್ಯಾತ ಟಾರೋ ಕಾರ್ಡ್ ರೀಡರ್ ಭವಿಷ್ಯ

Published On - 4:27 pm, Mon, 4 July 22

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ