AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CP Gurnani: ಎಐ ತಂತ್ರಜ್ಞಾನದಿಂದ ಉದ್ಯೋಗನಷ್ಟಕ್ಕಿಂತ ಉದ್ಯೋಗಸೃಷ್ಟಿ ಹೆಚ್ಚು ಎಂದ ಟೆಕ್ ಮಹೀಂದ್ರ ನಿರ್ಗಮಿತ ಸಿಇಒ

AI Technology and Jobs: ಎಐ ತಂತ್ರಜ್ಞಾನದಿಂದ ಕೆಲಸ ಹೋಗುವುದಕ್ಕಿಂತ ಹೆಚ್ಚು ಹೊಸ ಉದ್ಯೋಗಸೃಷ್ಟಿ ಆಗುತ್ತದೆ ಎಂದು ಸಿ.ಪಿ. ಗುರ್ನಾನಿ ಹೇಳಿದ್ದಾರೆ. ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮಾರುಕಟ್ಟೆ ಬೆಳೆಯುತ್ತದೆ ಎಂದು ಟೆಕ್ ಮಹೀಂದ್ರದ ನಿರ್ಗಮಿತ ಸಿಇಒ ಅಭಿಪ್ರಾಯಪಟ್ಟಿದ್ದಾರೆ. ಯುವಕರು ಹೊಸ ಟೆಕ್ನಾಲಜಿ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಗುರ್ನಾನಿ ಕರೆ ನೀಡಿದ್ದಾರೆ.

CP Gurnani: ಎಐ ತಂತ್ರಜ್ಞಾನದಿಂದ ಉದ್ಯೋಗನಷ್ಟಕ್ಕಿಂತ ಉದ್ಯೋಗಸೃಷ್ಟಿ ಹೆಚ್ಚು ಎಂದ ಟೆಕ್ ಮಹೀಂದ್ರ ನಿರ್ಗಮಿತ ಸಿಇಒ
ಸಿ.ಪಿ. ಗುರ್ನಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 18, 2023 | 6:35 PM

ಮುಂಬೈ, ಡಿಸೆಂಬರ್ 18: ಮುಂದಿನ ವರ್ಷಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅದ್ವಿತೀಯ ಬೆಳವಣಿಗೆಯ ಘಟ್ಟ. ನೂರು ಮಂದಿ ಮಾಡುವ ಕೆಲಸವನ್ನು ಎಐ ಟೆಕ್ನಾಲಜಿ ಮೂಲಕ ಒಬ್ಬರೇ ಮಾಡಬಹುದು. ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬಂತಹ ಸುದ್ದಿ ಕೆಲವಾರು ತಿಂಗಳುಗಳಿಂದ ದಟ್ಟವಾಗಿ ಹಬ್ಬುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಟೆಕ್ ಮಹೀಂದ್ರದ ನಿರ್ಗಮಿತ ಸಿಇಒ ಸಿ.ಪಿ. ಗುರ್ನಾನಿ (CP Gurnani) ಅವರು, ಎಐ ಟೆಕ್ನಾಲಜಿಯಿಂದ (AI Technology) ಉದ್ಯೋಗನಷ್ಟ ಆಗುತ್ತದೆ ಎಂದು ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಜನರೇಟಿವ್ ಎಐ ಟೆಕ್ನಾಲಜಿಯಿಂದ ಉದ್ಯೋಗನಷ್ಟ ಆಗುವುದಕ್ಕಿಂತ ಹೆಚ್ಚು ಉದ್ಯೋಗಸೃಷ್ಟಿ ಆಗುತ್ತದೆ ಎಂದು ಗುರ್ನಾನಿ ಹೇಳಿದ್ದಾರೆ. ‘ಜನರೇಟಿವ್ ಎಐನ ಉಪಯೋಗಗಳನ್ನು ಇನ್ನೂ ನಿರ್ದಿಷ್ಟಪಡಿಸಲಾಗುತ್ತಿದೆ. ಅಂದರೆ ಭವಿಷ್ಯದಲ್ಲಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಅವಕಾಶ ಇದೆ ಎಂದರ್ಥ. ಎಐನಿಂದ ಸಾಧ್ಯತೆಗಳೇನು ಎಂಬುದು ಈಗ ಶುರುವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ಹೆಚ್ಚೆಚ್ಚು ಕಾಣಲಿದ್ದೇವೆ,’ ಎಂದು ಟೆಕ್ ಮಹೀಂದ್ರ ಮಾಜಿ ಸಿಇಒ ತಿಳಿಸಿದ್ದಾರೆ.

ಇದನ್ನೂ ಓದಿ: Business Idea: ಕಡಿಮೆ ಬಂಡವಾಳದಲ್ಲಿ ಸ್ಕ್ರಬ್ಬರ್ ಫ್ಯಾಕ್ಟರಿ ಆರಂಭಿಸಿ; ಲಕ್ಷಾಂತರ ರೂ ಆದಾಯಮೂಲ ಸೃಷ್ಟಿಸಿ

ಉದ್ಯಮ ವಲಯದ ಕೆಲವು ಸಿಇಒಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಮೂರನೇ ಒಂದು ಭಾಗದಷ್ಟು ಉದ್ಯೋಗಗಳು ಹೋಗುವ ಸಾಧ್ಯತೆ ಬಗ್ಗೆ ಮಾತನಾಡಿರುವುದಿದೆ. ಟೆಕ್ ಮಹೀಂದ್ರದ ಗುರ್ನಾನಿ ಅಭಿಪ್ರಾಯ ಇದಕ್ಕೆ ಭಿನ್ನವಾಗಿದೆ. ಕೌಶಲ್ಯವಂತ ಉದ್ಯೋಗಿಗಳ ಕೆಲಸ ಕಿತ್ತುಕೊಳ್ಳಲು ಆಗುವುದಿಲ್ಲ ಎನ್ನುವ ನಾರಾಯಣಮೂರ್ತಿ ಮತ್ತಿತರ ವಾದವನ್ನು ಸಮರ್ಥಿಸಿದ್ದಾರೆ.

‘ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮಾರುಕಟ್ಟೆ ಬೆಳೆಯುತ್ತದೆ’ ಎಂದು ಹೇಳಿರುವ ಸಿ.ಪಿ. ಗುರ್ನಾನಿ, ‘ಬದಲಾಗುತ್ತಿರುವ ಜಗತ್ತಿಗೆ ಎಂಜಿನಿಯರುಗಳು ಹೊಂದಿಕೊಳ್ಳಬೇಕು. ಹೊಸ ಕೌಶಲ್ಯಗಳನ್ನು ಸ್ವತಂತ್ರವಾಗಿ ಕಲಿಯಲು ಸಮಯ ವಿನಿಯೋಗ ಮಾಡಬೇಕು. ಇನ್ಫೋಸಿಸ್ ಅಥವಾ ಟೆಕ್ ಮಹೀಂದ್ರ ಕಂಪನಿಗಳಂತೆ ಲರ್ನಿಂಗ್ ಕ್ಯಾಂಪಸ್​ಗಳನ್ನು ಸ್ಥಾಪಿಸುವ ದಿನಗಳು ಮುಗಿದವು’ ಎಂದು ಕರೆ ನೀಡಿದ್ದಾರೆ.

ಸಿ.ಪಿ. ಗುರ್ನಾನಿ ಅವರು ಸುದೀರ್ಘ ಕಾಲ ಟೆಕ್ ಮಹೀಂದ್ರದಲ್ಲಿ ಸಿಇಒ ಆಗಿದ್ದವರು. ಡಿಸೆಂಬರ್ 19ಕ್ಕೆ ಅವರು ನಿರ್ಗಮಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ