Business Idea: ಕಡಿಮೆ ಬಂಡವಾಳದಲ್ಲಿ ಸ್ಕ್ರಬ್ಬರ್ ಫ್ಯಾಕ್ಟರಿ ಆರಂಭಿಸಿ; ಲಕ್ಷಾಂತರ ರೂ ಆದಾಯಮೂಲ ಸೃಷ್ಟಿಸಿ

Scrubber Factory: ಕಡಿಮೆ ಬಂಡವಾಳ ಬೇಕಿರುವ ಬಿಸಿನೆಸ್​ಗಳಲ್ಲಿ ಸ್ಕ್ರಬ್ಬರ್ ತಯಾರಿಸುವ ಫ್ಯಾಕ್ಟರಿ ಸ್ಥಾಪನೆ ಒಂದು. ಖಾದಿ ಗ್ರಾಮೋದ್ಯೋಗ ಮಂಡಳಿ ಸ್ಕ್ರಬ್ಬರ್ ಬಿಸಿನೆಸ್​ನಿಂದ ಲಾಭ ಹೇಗೆ ಸಿಗುತ್ತದೆ ಎಂದು ವಿವರಗಳಿರುವ ವರದಿ ಸಿದ್ಧಪಡಿಸಿದೆ. ಫ್ಯಾಕ್ಟರಿ ಸ್ಥಾಪನೆಗೆ 1,200ರಿಂದ 1,800 ಚದರಡಿ ವಿಸ್ತೀರ್ಣದ ಕಟ್ಟಡ ಹಾಗೂ ಸುಮಾರು 12 ಲಕ್ಷ ರೂ ಹೆಚ್ಚುವರಿ ಬಂಡವಾಳ ಬೇಕಾಗುತ್ತದೆ.

Business Idea: ಕಡಿಮೆ ಬಂಡವಾಳದಲ್ಲಿ ಸ್ಕ್ರಬ್ಬರ್ ಫ್ಯಾಕ್ಟರಿ ಆರಂಭಿಸಿ; ಲಕ್ಷಾಂತರ ರೂ ಆದಾಯಮೂಲ ಸೃಷ್ಟಿಸಿ
ಸ್ಕ್ರಬ್ಬರ್ ಫ್ಯಾಕ್ಟರಿ
Follow us
|

Updated on: Dec 18, 2023 | 1:55 PM

ಬಿಸಿನೆಸ್ ಮಾಡಬೇಕೆನ್ನುವವರಿಗೆ ಸಾಕಷ್ಟು ಆಯ್ಕೆಗಳಿವೆ. ಆದರೆ, ಎಲ್ಲವೂ ಯಶಸ್ಸು ತಂದುಕೊಡುತ್ತದಾ, ಪ್ರಬಲ ಆದಾಯ ಮೂಲ ಸೃಷ್ಟಿಸುತ್ತಾ ಎಂದು ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ಕಡಿಮೆ ರಿಸ್ಕ್ ಇರುವ ಬಿಸಿನೆಸ್ ಐಡಿಯಾಗಳು ನಿಮಗೆ ತಿಳಿದಿರಲಿ. ಇದರಲ್ಲಿ ಸ್ಕ್ರಬರ್ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ (scrubber manufacturing unit) ಒಂದು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಪ್ರಾಡಕ್ಟ್ ಇದು. ಇದಕ್ಕೆ ಉತ್ಪಾದನಾ ವೆಚ್ಚವೂ ಕಡಿಮೆಯೇ. ಸರ್ಕಾರದ ಸಾಲ ಸೌಲಭ್ಯವೂ ಸುಲಭವಾಗಿ ಸಿಗುತ್ತದೆ.

ಏನಿದು ಸ್ಕ್ರಬರ್?

ಇದು ಪಾತ್ರೆ ತೊಳೆಯಲು ಇರುವ ಬ್ರಷ್. ಕಠಿಣ ಗ್ರೀಸ್​ಗಳನ್ನು ನೀಗಿಸಬಲ್ಲ ಸ್ಟೀಲ್​ನ ಸ್ಕ್ರಬ್ಬರ್​ಗೆ ಬೇಡಿಕೆ ಇದೆ. ಮನೆಗಳಲ್ಲಿ ಮಾತ್ರವಲ್ಲದೆ, ಹೋಟೆಲ್, ರೆಸ್ಟೋರೆಂಟ್​ಗಳಲ್ಲೂ ಇದು ಬೇಕಾದ ಉತ್ಪನ್ನ. ಸ್ಟೀಲ್ ಸ್ಕ್ರಬ್ಬರ್ ಮಾತ್ರವಲ್ಲ, ತೆಂಗಿನ ನಾರು, ಬಟ್ಟೆನಾರು, ಪ್ಲಾಸ್ಟಿಕ್ ಇತ್ಯಾದಿ ವಿವಿಧ ವಸ್ತುಗಳಿಂದ ಸ್ಕ್ರಬ್ಬರ್ ತಯಾರಿಸಲಾಗುತ್ತದೆ.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಸ್ಕ್ರಬ್ಬರ್ ಬಿಸಿನೆಸ್ ಬಗ್ಗೆ ಒಂದು ವರದಿ ಸಿದ್ಧಪಡಿಸಿದೆ. ಈ ಬಿಸಿನೆಸ್​ನಿಂದ ಹೇಗೆ ಲಾಭ ಗಳಿಸಬಹುದು ಎಂಬ ವಿವರ ಆ ವರದಿಯಲ್ಲಿ ನಮೂದಿಸಲಾಗಿದೆ.

ಇದನ್ನೂ ಓದಿ: ಎರಡು ಕ್ವಾರ್ಟರ್​ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್

ಸ್ಕ್ರಬ್ಬರ್ ಬಿಸಿನೆಸ್ ಆರಂಭಿಸುವುದು ಹೇಗೆ?

ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ಯಾವುದಾದರೂ ಬ್ಯಾಂಕಿನಲ್ಲಿ 10 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಸ್ಕ್ರಬ್ಬರ್ ಫ್ಯಾಕ್ಟರಿ ಸ್ಥಾಪಿಸಲು 1,200ರಿಂದ 1,800 ಚದರಡಿ ವಿಸ್ತೀರ್ಣದ ಜಾಗ ಬೇಕು. ನಿಮ್ಮದೇ ಸ್ವಂತ ಜಾಗದಲ್ಲಿ ಮಾಡಬಹುದು, ಅಥವಾ ಬಾಡಿಗೆ ಪಡೆದು ಫ್ಯಾಕ್ಟರಿ ಆರಂಭಿಸಬಹುದು.

ಸ್ಕ್ರಬ್ಬರ್ ಫ್ಯಾಕ್ಟರಿಯ ವೆಚ್ಚಗಳು

  • ಫ್ಯಾಕ್ಟರಿ ಕಟ್ಟಡ ಸ್ಥಾಪನೆಗೆ ವೆಚ್ಚ. ಅಥವಾ ಬಾಡಿಗೆ ವೆಚ್ಚ
  • ಸ್ಕ್ರಬ್ಬರ್ ತಯಾರಿಕೆಗೆ ಯಂತ್ರೋಪಕರಣಗಳು: 8.10 ಲಕ್ಷ ರೂ
  • ಪೀಠೋಪಕರಣ ಇತ್ಯಾದಿ: 50,000 ರೂ
  • ಬಂಡವಾಳ: 3.71 ಲಕ್ಷ ರೂ

ಇದರಲ್ಲಿ ಮುದ್ರಾ ಸ್ಕೀಮ್​ನಲ್ಲಿ ನಿಮಗೆ 10 ಲಕ್ಷ ರೂ ಸಾಲ ಪಡೆಯಬಹುದು. ಇನ್ನುಳಿದ ವೆಚ್ಚಕ್ಕೆ ನಿಮ್ಮ ಕೈಯಿಂದ ಹಣ ಹೊಂದಿಸಬಹುದು. ಅಥವಾ ಬೇರೆ ಮೂಲಗಳಿಂದ ಸಾಲ ಪಡೆಯಬಹುದು. ಗೋಲ್ಡ್ ಲೋನ್ ಇತ್ಯಾದಿ ಪಡೆದು ಫ್ಯಾಕ್ಟರಿ ಆರಂಭಿಸಬಹುದು.

ಸ್ಕ್ರಬ್ಬರ್​ಗಳ ಮಾರುಕಟ್ಟೆ ಹೇಗೆ?

ನೀವು ಫ್ಯಾಕ್ಟರಿಯಲ್ಲಿ ತಯಾರಿಸಿದ ಸ್ಕ್ರಬ್ಬರ್​​ಗಳನ್ನು ಮಾರುಕಟ್ಟೆ ವ್ಯವಸ್ಥೆ ಮಾಡುವುದು ಒಂದು ಸವಾಲಿನ ಕೆಲಸ. ಮೊದಲಿಗೆ ಸೂಪರ್ ಮಾರ್ಕೆಟ್​ಗಳು, ಅಂಗಡಿಗಳನ್ನು ಸಂಪರ್ಕಿಸಿ ನಿಮ್ಮ ಉತ್ಪನ್ನ ಪಡೆಯಲು ಡೀಲ್ ಮಾಡಿಕೊಳ್ಳಿ. ಒಮ್ಮೆ ಸರಬರಾಜಿಗೆ ಆರ್ಡರ್ ಸಿಕ್ಕರೆ ಉತ್ಪನ್ನ ಮಾರಾಟದ ಬಗ್ಗೆ ಹೆಚ್ಚಿನ ಚಿಂತೆ ಪಡಬೇಕಿಲ್ಲ.

ಇದನ್ನೂ ಓದಿ: ಹತ್ತಕ್ಕಿಂತ ಕಡಿಮೆ ಇದ್ದ ಭಾರತೀಯ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ನಾಲ್ಕೇ ವರ್ಷದಲ್ಲಿ 1,180ಕ್ಕೆ: ಸಚಿವ ಜಿತೇಂದ್ರ ಸಿಂಗ್

ಖಾದಿ ಗ್ರಾಮೋದ್ಯೋಗ ಮಂಡಳಿಯ ಫೀಸಿಬಿಲಿಟಿ ರಿಪೋರ್ಟ್​ನಲ್ಲಿ ಸ್ಕ್ರಬ್ಬರ್ ಫ್ಯಾಕ್ಟರಿಯಿಂದ ಐದು ವರ್ಷದಲ್ಲಿ ಹೇಗೆಲ್ಲಾ ಆದಾಯ ಮಾಡಬಹುದು ಎಂದು ಅಂದಾಜು ಮಾಡಲಾಗಿದೆ. ಮೊದಲ ವರ್ಷ 2.97 ಲಕ್ಷ ರೂ ನಿವ್ವಳ ಲಾಭ ಸಿಗುತ್ತದೆ. ಐದನೇ ವರ್ಷದಲ್ಲಿ ಈ ಲಾಭದ ಪ್ರಮಾಣ 6.37 ಲಕ್ಷಕ್ಕೆ ಏರುತ್ತದೆ ಎನ್ನಲಾಗಿದೆ. ಅಂದರೆ ತಯಾರಿಕೆಯ ವೆಚ್ಚ ಬಿಟ್ಟು ಬರುವ ನಿವ್ವಳ ಲಾಭ ಇದು.

(ಗಮನಿಸಿ: ಇಲ್ಲಿ ನೀಡಿರುವುದು ಬಿಸಿನೆಸ್ ಐಡಿಯಾ ಮಾತ್ರ. ಖಾದಿ ಗ್ರಾಮೋದ್ಯೋಗ ಮಂಡಳಿಯ ವರದಿಯಲ್ಲಿರುವ ಅಂಶವನ್ನು ಉಲ್ಲೇಖಿಸಲಾಗಿದೆ. ವಾಸ್ತವಿಕವಾಗಿ ಇದರ ಖರ್ಚು ವೆಚ್ಚಗಳು, ಮಾರಾಟ ಪ್ರಮಾಣ ಬೇರೆಯೇ ಆಗಬಹುದು. ರಿಸ್ಕ್ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಇರುತ್ತದೆ.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ