Bitcoin: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ 60 ಸಾವಿರ ಯುಎಸ್​ಡಿ ಸಮೀಪಕ್ಕೆ

ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ 60000 ಯುಎಸ್​ಡಿ ಸಮೀಪ ವಹಿವಾಟು ನಡೆಸುತ್ತಿದೆ. ಏಪ್ರಿಲ್​ ತಿಂಗಳಲ್ಲಿ ತಲುಪಿದ್ದ ಮಟ್ಟವನ್ನು ಮುಟ್ಟುವ ಕಡೆಗೆ ಬಿಟ್​ಕಾಯಿನ್ ಪಯಣ ನಡೆಸಿದೆ.

Bitcoin: ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ 60 ಸಾವಿರ ಯುಎಸ್​ಡಿ ಸಮೀಪಕ್ಕೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Oct 15, 2021 | 2:50 PM

ಕ್ರಿಪ್ಟೋಕರೆನ್ಸಿಗಳ ಪೈಕಿ ಬಿಟ್‌ಕಾಯಿನ್ ಬೆಲೆಗಳು 60,000 ಯುಎಸ್​ಡಿ ಗಡಿ ತಲುಪಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ ತಲುಪಿದ್ದ ದಾಖಲೆಯ ಮಟ್ಟವನ್ನು ಸಾಗುತ್ತಿದೆ. ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಆದ ಬಿಟ್​ ಕಾಯಿನ್​ ಶೇ 3ಕ್ಕಿಂತ ಹೆಚ್ಚಾಗಿ 59,989 ಯುಎಸ್​ಡಿಯಲ್ಲಿ ವಹಿವಾಟು ನಡೆಸುತ್ತಿತ್ತು. ಬಿಟ್‌ಕಾಯಿನ್ ಈ ವರ್ಷ ಏಪ್ರಿಲ್‌ನಲ್ಲಿ ಸುಮಾರು 65,000 ಡಾಲರ್‌ಗಳ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತು ಮತ್ತು ಈ ವರ್ಷ (ಜನವರಿಯಿಂದ ಇಲ್ಲಿಯವರೆಗೆ) ಶೇ 105ಕ್ಕಿಂತ ಹೆಚ್ಚಾಗಿದೆ. ಯುಎಸ್ ಸೆಕ್ಯೂರಿಟೀಸ್ ಅಂಡ್ ಎಕ್ಸ್​ಚೇಂಜ್ ಕಮಿಷನ್ (ಎಸ್‌ಇಸಿ) ಮುಂದಿನ ವಾರ ಅಮೆರಿಕದ ಮೊದಲ ಬಿಟ್‌ಕಾಯಿನ್ ಫ್ಯೂಚರ್ಸ್ ಇಟಿಎಫ್ ವಹಿವಾಟು ಆರಂಭಿಸಲು ಅವಕಾಶ ನೀಡುತ್ತಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಗುರುವಾರ ವರದಿ ಮಾಡಿದೆ. ಆ ನಂತರ ಈ ಬೆಳವಣಿಗೆ ಆಗಿದೆ.

ಎಥೆರಿಯಮ್ ಬ್ಲಾಕ್‌ಚೈನ್​ಗೆ ಜೋಡಣೆ ಆಗಿರುವ ಮತ್ತು ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಶೇ 5ರಷ್ಟು ಹೆಚ್ಚಾಗಿ, 3,840 ಯುಎಸ್​ಡಿಗೆ ಏರಿಕೆಯಾಗಿದೆ. ಕಾರ್ಡಾನೊ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದ್ದು, 2.19 ಯುಎಸ್​ಡಿಯಲ್ಲಿತ್ತು. ಆದರೆ dogecoin ಬೆಲೆಗಳು ಸುಮಾರು 0.23 ಯುಎಸ್​ಡಿಯಲ್ಲಿತ್ತು. ಮತ್ತೊಂದೆಡೆ, XRP, Uniswap, Stellar, Binance Coinನಂತಹ ಇತರ ಡಿಜಿಟಲ್ ಟೋಕನ್‌ಗಳು ಸಹ ಕಳೆದ 24 ಗಂಟೆಗಳಲ್ಲಿ ಮಿಶ್ರ ವಹಿವಾಟು ನಡೆಸುತ್ತಿವೆ. “ಈ ತಿಂಗಳ ಆರಂಭದಿಂದಲೂ ಬಿಟ್ ಕಾಯಿನ್ ಉತ್ತಮ ಏರಿಕೆ ದಾಖಲು ಮಾಡುತ್ತಿದೆ. 14ನೇ ಅಕ್ಟೋಬರ್‌ನಲ್ಲಿ ಬಿಟ್​ಕಾಯಿನ್ 58,000 ಯುಎಸ್​ಡಿ ದಾಟಿತು ಮತ್ತು ಟ್ರೆಂಡ್ ಏರಿಕೆಯ ಹಾದಿಯಲ್ಲಿ ಮೇಲೇರುತ್ತಿದೆ. ನಾವು 57K ಯುಎಸ್​ಡಿನಿಂದ 58K ಯುಎಸ್​ಡಿ ಮಟ್ಟಗಳಲ್ಲಿ ರೆಸಿಸ್ಟೆಂಟ್ ನಿರೀಕ್ಷಿಸಬಹುದು. ಒಂದು ಸಣ್ಣ ಇಳಿಕೆ ಕಂಡುಬಂದರೆ ಆಗ ಬುಲ್​ ಖರೀದಿಸುವುದನ್ನು ಹೆಚ್ಚಿಸಬಹುದು,” ಎಂದು ಕ್ರಿಪ್ಟೋ ಎಕ್ಸ್‌ಚೇಂಜ್ ವಜೀರ್​ ಎಕ್ಸ್‌ನ ಸಿಒಒ ಸಿದ್ಧಾರ್ಥ್ ಮೆನನ್ ಹೇಳಿದ್ದಾರೆ.

ಎಥೆರಿಯಮ್ ತ್ರಿಕೋನ ಮಾದರಿಯಲ್ಲಿ ವಹಿವಾಟು ನಡೆಸುತ್ತಿದೆ. ಬಿಟ್ ಕಾಯಿನ್ ಪ್ರಚಂಡ ಬುಲ್ ರನ್​ನಲ್ಲಿ ತನ್ನ ಪಾಲನ್ನು ಹೊಂದಿದೆ. ಪ್ರಸ್ತುತ ವೇಗವನ್ನು ಆಧರಿಸಿ ಹೇಳುವುದಾದರೆ ಈ ನಮೂನೆಯಿಂದ ETH ಆ ಹಂತವನ್ನು ದಾಟುವುದರಲ್ಲಿದೆ. ಇದು ಇತರ ಆಲ್ಟ್‌ಕಾಯಿನ್‌ಗಳನ್ನು ಬುಲಿಷ್ ಏರಿಕೆಯಲ್ಲಿ ಹೊಂದಿಸುತ್ತದೆ ಎಂದು ಮೆನನ್ ಹೇಳಿದ್ದಾರೆ. ಈ ಮಧ್ಯೆ, ಚೈನಾಲಿಸಿಸ್ ಅಧ್ಯಯನದ ಪ್ರಕಾರ, ಕ್ರಿಪ್ಟೋಕರೆನ್ಸಿ ವಹಿವಾಟುಗಳ ಮೇಲೇ ಚೀನಾ ಮುರಿದುಕೊಂಡು ಬಿದ್ದಿರುವುದರಿಂದ ಪೂರ್ವ ಏಷ್ಯಾದ ಜಾಗತಿಕ ಕ್ರಿಪ್ಟೋಕರೆನ್ಸಿ ವಹಿವಾಟು ಸಂಪುಟಗಳ ಪಾಲು ಅರ್ಧದಷ್ಟು ಕಡಿಮೆಯಾಗಿದೆ. ಈ ಪ್ರದೇಶವು 590.9 ಶತಕೋಟಿ ಡಾಲರ್ ಕ್ರಿಪ್ಟೋ ಕರೆನ್ಸಿಯನ್ನು ಜುಲೈ 2020 ಮತ್ತು ಜೂನ್ 2021ರ ನಡುವೆ ಪಡೆದಿದೆ. ಇದು ಆ ಅವಧಿಯಲ್ಲಿ ಜಾಗತಿಕ ಚಟುವಟಿಕೆಯ ಶೇ 14ರಷ್ಟಕ್ಕೆ ಸಮಾನವಾಗಿದೆ. ಇದು ಜುಲೈ 2019 ಮತ್ತು ಜೂನ್ 2020ರ ನಡುವೆ ಶೇ 31ರಷ್ಟಿತ್ತು ಎಂಬ ಹೋಲಿಕೆಯನ್ನು ವರದಿ ತೋರಿಸಿದೆ.

ಇದನ್ನೂ ಓದಿ: Cryptocurrency Mining: ಕ್ರಿಪ್ಟೋಕರೆನ್ಸಿ ಮೈನಿಂಗ್​ಗೆ ದೇಶಾದ್ಯಂತ ನಿರ್ಬಂಧ ಹೇರುವುದಾಗಿ ಹೇಳಿದ ಚೀನಾದ ಕೇಂದ್ರ ಬ್ಯಾಂಕ್