ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ

ಸಾಲ ಅನ್ನೋದೇ ದೊಡ್ಡ ತಲೆ ನೋವು. ಕೆಲವರು ಸಾಲ ಮಾಡಿ ತೀರಿಸಲಾಗದೇ ಒದ್ದಾಡುತ್ತಾರೆ. ಆದರೆ ತಿಂಗಳ ಸಂಬಳ, ಇಎಂಐ ಮೊತ್ತ ಹೆಚ್ಚಳ, ಹೆಚ್ಚು ಬಡ್ಡಿ ಸಾಲಕ್ಕೆ ಮೊದಲ ಆದ್ಯತೆ, ಆದಾಯ ಹೆಚ್ಚಳ ಈ ಎಲ್ಲಾ ಅಂಶಗಳ ಮೇಲೆ ಕೇಂದ್ರೀಕರಿಸಿದರೆ ಸಾಲ ಹೊರೆಯಿಂದ ತಪ್ಪಿಸಿಕೊಳ್ಳಬಹುದು. ಈ ಕುರಿತಾದ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಸಾಲದ ಹೊರೆ ಕಡಿಮೆಯಾಗ್ಬೇಕು ಅಂದ್ರೆ ಈ ಕೆಲ್ಸಗಳನ್ನು ಮೊದ್ಲು ಮಾಡಿ
ಸಾಂದರ್ಭಿಕ ಚಿತ್ರ
Image Credit source: David Talukdar/Moment/Getty Images

Updated on: Oct 14, 2026 | 8:28 PM

ಅತಿಯಾದ್ರೆ ಅಮೃತ ಕೂಡ ವಿಷ ಅನ್ನೋ ಮಾತಿದೆ. ಈ ಮಾತು ಸಾಲದ (debt) ವಿಷ್ಯದಲ್ಲೂ ಅನ್ವಯಿಸುತ್ತದೆ. ಸಾಲದ ಸಮಸ್ಯೆಯೂ ಬಹುತೇಕರನ್ನು ಕಾಡುತ್ತಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಳಿದ್ದಷ್ಟು ಸುಲಭವಲ್ಲ. ಆದರೆ ಈ ಮಾಡಿದ ಹಣವನ್ನು ತೀರಿಸುವ ಆರ್ಥಿಕ ತಂತ್ರಗಳ ಬಗ್ಗೆ ತಿಳಿದಿರುವುದು ಮುಖ್ಯ. ಸರಿಯಾದ ಯೋಜನೆ, ಬಜೆಟ್ ನಿರ್ವಹಣೆ ಮತ್ತು ಮರುಪಾವತಿ ಕ್ರಮಗಳನ್ನು ಅನುಸರಿಸಿದ್ರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.

ಸಾಲದಿಂದ ಮುಕ್ತರಾಗಲು ಇಲ್ಲಿದೆ ಸರಳ ಟಿಪ್ಸ್

ಬಜೆಟ್ ರಚಿಸಿಕೊಳ್ಳಿ, ವೆಚ್ಚ ನಿಯಂತ್ರಿಸಿ: ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಬಜೆಟ್ ರಚಿಸಿಕೊಳ್ಳುವುದು ಮುಖ್ಯ. ಮೊದಲಿಗೆ ಮಾಸಿಕ ಆದಾಯ ಖರ್ಚುಗಳ ಪಟ್ಟಿ ಮಾಡಿ, ಅನಗತ್ಯವಾದ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ.

ಸಾಲದ ಕಂತುಗಳನ್ನು ಹೆಚ್ಚಿಸಿ: ಸಾಲ ನೀಡಿದ ಬ್ಯಾಂಕ್ ಅಥವಾ ಸಂಸ್ಥೆಯೊಂದಿಗೆ ಸಾಲದ ಕಂತುಗಳನ್ನು ಹೆಚ್ಚಿಸಿ. ಹೀಗೆ ಮಾಡುವುದರಿಂದ ಸಾಲವನ್ನು ಬೇಗನೇ ತೀರಿಸಬಹುದು.

ನಿಮ್ಮ ಸಾಲದ ಬಗ್ಗೆ ತಿಳಿದಿರಲಿ: ನೀವು ಮಾಡಿರುವ ಸಾಲ ಹಾಗೂ ಅದರ ಬಡ್ಡಿದರದ ಬಗ್ಗೆ ತಿಳಿದಿರಲಿ. ಇದು ನಿಮಗೆ ಯಾವ ಸಾಲ ಮೊದಲು ತೀರಿಸಬೇಕು ಎಂಬ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ.

ಅಧಿಕ ಬಡ್ಡಿದರದ ಸಾಲಗಳಿಗೆ ಮೊದಲ ಆದ್ಯತೆ: ಸಾಲದ ಹೊರೆ ಹೆಚ್ಚಾಗಲು ಮೊದಲು ಕಾರಣ ಈ ಬಡ್ಡಿದರ. ಕ್ರೆಡಿಟ್ ಕಾರ್ಡ್ ಸಾಲ ಅಥವಾ ಹೆಚ್ಚು ಬಡ್ಡಿ ಇರುವ ಸಾಲಗಳತ್ತ ಹೆಚ್ಚು ಗಮನ ಕೊಡಿ.

ಹೊಸ ಸಾಲ ಮಾಡ್ಲೇಬೇಡಿ: ಈಗಾಗಲೇ ನೀವು ಸಾಲ ಮಾಡಿದ್ದರೆ ಅದನ್ನು ಮೊದಲು ತೀರಿಸಿಕೊಳ್ಳಿ. ಹೊಸ ಸಾಲ ಮಾಡುವತ್ತ ಆಸಕ್ತಿ ತೋರಿಸಬೇಡಿ.

ಆದಾಯದ ಮೂಲ ಹೆಚ್ಚಿಸಿ: ಮಾಡಿದ ಸಾಲ ತೀರಿಸಬೇಕಾದರೆ ಆದಾಯವು ಮುಖ್ಯ. ಹೀಗಾಗಿ ಪಾರ್ಟ್ ಟೈಮ್ ಕೆಲಸಕ್ಕೆ ಗಮನ ಕೊಡಿ, ಈ ರೀತಿ ವಿವಿಧ ಆದಾಯ ಮೂಲವನ್ನು ಹೆಚ್ಚಿಸಲು ಪ್ರಯತ್ನ ಮಾಡಿ.

ಇದನ್ನೂ ಓದಿ: ಆರ್​ಬಿಐ ರೆಪೋ ದರ ಹೆಚ್ಚಳ; ಸಾಲಗಳ ಇಎಂಐನಲ್ಲಿ ಎಷ್ಟು ಹೆಚ್ಚಳವಾಗಬಹುದು ಇತ್ಯಾದಿ ವಿವರ ಇಲ್ಲಿದೆ

ಸಾಲಗಳನ್ನು ಕ್ರೋಢಿಕರಿಸಿಕೊಳ್ಳಿ: ನೀವು ಬೇರೆ ಬೇರೆ ಕಡೆ ಹೆಚ್ಚು ಬಡ್ಡಿಗೆ ಸಾಲ ಮಾಡಿದ್ದರೆ ಮೊದಲಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದು, ಹಳೆಯ ಎಲ್ಲಾ ಸಾಲಗಳನ್ನು ತೀರಿಸಿ. ಹೆಚ್ಚು ಹಣ ಪಾವತಿಸಿ ಬೇಗನೇ ಸಾಲ ತೀರಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 8:22 pm, Wed, 14 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us