AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SpaceX: ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್ ಕಂಪೆನಿ ಮೌಲ್ಯ 7.51 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು

ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ನೇತೃತ್ವದ ಸ್ಪೇಸ್​ಎಕ್ಸ್ ಕಂಪೆನಿಯು 100 ಬಿಲಿಯನ್ ಯುಎಸ್​ಡಿ ದಾಟಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

SpaceX: ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ ಎಕ್ಸ್ ಕಂಪೆನಿ ಮೌಲ್ಯ 7.51 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Oct 09, 2021 | 2:40 PM

Share

ಬಿಲಿಯನೇರ್ ಎಲಾನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ಕಂಪೆನಿಯಾದ “ಸ್ಪೇಸ್ ಎಕ್ಸ್” (SpaceX) ಈ ವಾರದ ಆರಂಭದಲ್ಲಿ ಪ್ರಕಟಿಸಿದ ಸೆಕೆಂಡರಿ ಷೇರು ಮಾರಾಟದ ನಂತರ 100 ಬಿಲಿಯನ್ ಡಾಲರ್ ಮೌಲ್ಯಮಾಪನದ್ದಾಗಿದೆ ಎಂದು ಸಿಎನ್​ಬಿಸಿ ಅಕ್ಟೋಬರ್ 8ರಂದು ವರದಿ ಮಾಡಿದೆ. ಹೊಸ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಒಳಗಿನವರಿಂದ 755 ಮಿಲಿಯನ್ ಯುಎಸ್​ಡಿ ಮೌಲ್ಯದ ಸ್ಟಾಕ್ ಅನ್ನು ಪ್ರತಿ ಷೇರಿಗೆ 560 ಯುಎಸ್​ಡಿ ಬೆಲೆಯಲ್ಲಿ ಮಾರಾಟ ಮಾಡಲು ಸ್ಪೇಸ್‌ಎಕ್ಸ್ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಪ್ರಸ್ತಾಪವು ಅಸ್ತಿತ್ವದಲ್ಲಿರುವ ಷೇರುಗಳ ಸೆಕೆಂಡರಿ ಮಾರಾಟವನ್ನು ಪ್ರತಿನಿಧಿಸುತ್ತದೆ, ಎಂದು ಈ ಮೇಲೆ ಉಲ್ಲೇಖಿಸಿದ ಜನರು ಹೇಳಿದ್ದಾರೆ. ಇದು ಸ್ಪೇಸ್‌ಎಕ್ಸ್‌ನ ಹೊಸ ಮೌಲ್ಯಮಾಪನವನ್ನು 100.3 ಬಿಲಿಯನ್‌ ಡಾಲರ್​ಗೆ ಕೊಂಡೊಯ್ಯುತ್ತದೆ. ಇದು ಫೆಬ್ರವರಿಯಲ್ಲಿ 74 ಶತಕೋಟಿ ಡಾಲರ್​ ಇದ್ದದ್ದು ಶೇ 33ರಷ್ಟು ಹೆಚ್ಚಾಗಿದೆ.

ಫೆಬ್ರವರಿ ತಿಂಗಳಲ್ಲಿ ಮಸ್ಕ್ ನೇತೃತ್ವದ ಸಂಸ್ಥೆಯು ಇದೇ ರೀತಿಯ ಸೆಕೆಂಡರಿ ವಹಿವಾಟನ್ನು ಹೊಂದಿತ್ತು. ಒಳಗಿನವರಿಗೆ 750 ಮಿಲಿಯನ್ ಯುಎಸ್​ಡಿವರೆಗೆ ಮಾರಾಟ ಮಾಡಲು ಒಪ್ಪಂದವಾಗಿತ್ತು. ಸ್ಪೇಸ್‌ಎಕ್ಸ್‌ನ ಹೊಸ ಮೌಲ್ಯಮಾಪನವು 100.3 ಬಿಲಿಯನ್ ಯುಎಸ್​ಡಿಯೊಂದಿಗೆ ಕಂಪೆನಿಯನ್ನು “ಸೆಂಟಿಕಾರ್ನ್” ಅಥವಾ “ಹೆಕ್ಟೊಕಾರ್ನ್” – ಗಣ್ಯ ಪಟ್ಟಿಯಲ್ಲಿ ಸೇರುವಂತೆ ಮಾಡಿದೆ. -ಇದರ ಅರ್ಥ ಏನೆಂದರೆ ಯೂನಿಕಾರ್ನ್‌ಗಿಂತ 100 ಪಟ್ಟು ಮೌಲ್ಯದ ಕಂಪೆನಿಗಳು. ಅದಕ್ಕಾಗಿ ಈ ಪದಗಳಲ್ಲಿ ಉಲ್ಲೇಖಿಸಲಾಗುತ್ತದೆ. ಯೂನಿಕಾರ್ನ್​ನ ಆರಂಭದ ಹಂತವು 1 ಬಿಲಿಯನ್ ಯುಎಸ್​ಡಿಯೊಂದಿಗೆ ಆಗುತ್ತದೆ.

ಸಿಬಿ ಒಳನೋಟಗಳ ಪ್ರಕಾರ, ಸ್ಪೇಸ್ ಎಕ್ಸ್ ವಿಶ್ವದ ಎರಡನೇ ಅತ್ಯಮೂಲ್ಯ ಖಾಸಗಿ ಕಂಪೆನಿಯಾಗಿದೆ. ಇದರರ್ಥ ಇದು ಚೀನಾದ ಹೊಸ ಮಾಧ್ಯಮ ದೈತ್ಯ ಬೈಟ್​ಡ್ಯಾನ್ಸ್‌ಗಿಂತ ಮಾತ್ರ ಹಿಂದಿದೆ. ಸ್ಪೇಸ್‌ಎಕ್ಸ್ 100 ಬಿಲಿಯನ್ ಮೌಲ್ಯಮಾಪನವನ್ನು ತಲುಪುವ ಕುರಿತು ಹೇಳಿಕೆಯನ್ನು ನೀಡಬೇಕಿದೆ. ಏರೋಸ್ಪೇಸ್ ಸಂಸ್ಥೆಯಾದ ಸ್ಪೇಸ್​ ಎಕ್ಸ್ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪೆನಿಯಾಗಿಲ್ಲದ ಕಾರಣ ವರದಿಗಳಲ್ಲಿ ಉಲ್ಲೇಖಿಸಲಾದ ಮೂಲಗಳು ತಮ್ಮ ಹೆಸರು ಹಾಗೂ ಇತರ ಮಾಹಿತಿಯನ್ನು ತಿಳಿಸಿಲ್ಲ. ಅಂದರೆ ಕಂಪೆನಿಯು ಈ ಮಾಹಿತಿಯನ್ನು ಸಾರ್ವಜನಿಕವಾಗಿ ತಿಳಿಸಲು ಆಯ್ಕೆ ಮಾಡದ ಹೊರತು ಹಣಕಾಸಿಗೆ ಸಂಬಂಧಿಸಿದ ವಿವರಗಳು ಖಾಸಗಿಯಾಗಿ ಇರುತ್ತವೆ.

ಇದನ್ನೂ ಓದಿ:Gaganyaan: ಗಗನಯಾನ ಮಿಷನ್​ಗಾಗಿ ಇಸ್ರೋದಿಂದ ವಿಕಾಸ್ ಎಂಜಿನ್ 3ನೇ ಟೆಸ್ಟ್ ಯಶಸ್ವಿ​; ಎಲಾನ್ ಮಸ್ಕ್​ ಅಭಿನಂದನೆ

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌