EPFO update: ಇಪಿಎಫ್ಒ ಸದಸ್ಯರಿಂದಲೇ ತಂದೆ, ತಾಯಿ, ಸಂಗಾತಿ ಹೆಸರಿನಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗೆ ಅವಕಾಶ; ಇಲ್ಲಿದೆ ಕ್ರಮ
Know how to make changes in names of member's father, mother and spouse: ಇಪಿಎಫ್ ಸದಸ್ಯರು ತಮ್ಮ ಖಾತೆಯಲ್ಲಿ ನಮೂದಿಸಿರುವ ತಂದೆ ಅಥವಾ ತಾಯಿ ಅಥವಾ ಸಂಗಾತಿಯ ಹೆಸರಿನಲ್ಲಿ ಬದಲಾವಣೆ ಮಾಡಬಹುದು. ಈ ಬಗ್ಗೆ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಇಪಿಎಫ್ಒ ಸಂಸ್ಥೆ ಸರಣಿ ಪೋಸ್ಟ್ಗಳ ಮೂಲಕ ಮಾಹಿತಿ ನೀಡಿದೆ. ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳ ಪಟ್ಟಿ ನೀಡಲಾಗಿದೆ.
ನವದೆಹಲಿ, ಆಗಸ್ಟ್ 20: ಇಪಿಎಫ್ ಸದಸ್ಯರು ಅಥವಾ ಖಾತೆದಾರರು ತಮ್ಮ ಅಕೌಂಟ್ನಲ್ಲಿ ನೀಡಲಾಗಿರುವ ಅವರ ತಂದೆ, ತಾಯಿ ಅಥವಾ ಸಂಗಾತಿಯ ಹೆಸರಿನಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗಳನ್ನು ಮಾಡಲು ಸಾಧ್ಯ. ಇಪಿಎಫ್ಒ ಕಳೆದ ವಾರಾಂತ್ಯದಲ್ಲಿ ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಿದೆ. ಹೆಸರು ತಿದ್ದುಪಡಿ ಮಾಡುವುದು ಹೇಗೆ, ಯಾವ ದಾಖಲೆಗಳು ಬೇಕು ಎಂಬುದನ್ನು ತನ್ನ ಎಕ್ಸ್ ಪೋಸ್ಟ್ಗಳಲ್ಲಿ ತಿಳಿಸಿದೆ. ಇಪಿಎಫ್ಒ ಹೆಸರಿನಲ್ಲಿ ಸಣ್ಣ ಬದಲಾವಣೆ ಯಾವುದು, ದೊಡ್ಡ ಬದಲಾವಣೆ ಯಾವುದು, ಯಾವ ದಾಖಲೆಗಳು ಬೇಕು ಎಂಬಿತ್ಯಾದಿ ವಿವರವನ್ನು ಮುಂದೆ ಓದಿರಿ.
ಹೆಸರಿನಲ್ಲಿ ದೊಡ್ಡ ಬದಲಾವಣೆ ಎಂದರೇನು?
- ಹೆಸರನ್ನು ಮೊದಲ ಬಾರಿಗೆ ಸೇರಿಸುತ್ತಿದ್ದರೆ
- ಹೆಸರನ್ನು ವಿಸ್ತರಿಸುತ್ತಿದ್ದರೆ
- ಮೂರು ಮತ್ತು ಇನ್ನೂ ಹೆಚ್ಚು ಅಕ್ಷರಗಳು ಬದಲಾಗುತ್ತಿದ್ದರೆ
- ಹೆಸರಿನ ಉಚ್ಚಾರಣೆ ಬದಲಾಗುತ್ತಿದ್ದರೆ
ಹೆಸರಿನಲ್ಲಿ ಸಣ್ಣ ಬದಲಾವಣೆ ಎಂದರೇನು?
- ಹೆಸರಿನ ಉಚ್ಚಾರಣೆ ಬದಲಾಗದಿದ್ದರೆ ಮತ್ತು 3 ಕ್ಕಿಂತ ಕಡಿಮೆ ಅಕ್ಷರಗಳ ಬದಲಾವಣೆ ಆಗುವುದಿದ್ದರೆ
- ಶ್ರೀ, ಡಾ. ಮಿಸ್ಟರ್, ಮಿಸಸ್, ಮಿಸ್ ಇತ್ಯಾದಿ ಪೂರ್ವ ನಾಮಸೂಚಕಗಳನ್ನು ಮಾತ್ರವೇ ತೆಗೆಯುತ್ತಿದ್ದರೆ
ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಖಾತೆಗಳಿಗೆ ಹೊಸ ನಿಯಮ; ದುರ್ಬಳಕೆ ತಪ್ಪಿಸಲು ಈ ಕ್ರಮ
ಹೆಸರು ತಿದ್ದುಪಡಿಗೆ ಬೇಕಾಗುವ ದಾಖಲೆಗಳ ಪಟ್ಟಿ
- ಇಪಿಎಫ್ ಸದಸ್ಯರ ಪಾಸ್ಪೋರ್ಟ್
- ರೇಷನ್ ಕಾರ್ಡ್ ಅಥವಾ ಪಿಡಿಎಸ್ ಕಾರ್ಡ್
- ಸಿಜಿಎಚ್ಎಸ್/ಎಸಿಎಚ್ಎಸ್/ಮೆಡಿಕ್ಲೇಮ್ ಕಾರ್ಡ್
- ಪೆನ್ಷನ್ ಕಾರ್ಡ್
- ಜನನ ಪ್ರಮಾನಪತ್ರ
- ವಿವಾಹ ಪ್ರಮಾಣಪತ್ರ
- ಆಧಾರ್ ಕಾರ್ಡ್, ಮನ್ರೇಗಾ ಕಾರ್ಡ್, ಅರ್ಮಿ ಕ್ಯಾಂಟೀನ್ ಕಾರ್ಡ್ ಇತ್ಯಾದಿ
- ಹೆಸರು ಬದಲಾವಣೆ ಮಾಡಲಾಗುವ ವ್ಯಕ್ತಿಯ ಹೆಸರು ಒಳಗೊಂಡಿರುವ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- 10 ಅಥವಾ 12ನೆ ತರಗತಿ ಅಂಕಪಟ್ಟಿ
- ಡ್ರೈವಿಂಗ್ ಲೈಸೆನ್ಸ್
ಈ ಮೇಲಿನ 11 ದಾಖಲೆಗಳ ಪೈಕಿ ದೊಡ್ಡ ಹೆಸರು ಬದಲಾವಣೆಗೆ ಯಾವುದೇ ಮೂರು ದಾಖಲೆಗಳಾದರೆ ಸಾಕು. ಸಣ್ಣ ಹೆಸರು ಬದಲಾವಣೆಗೆ ಎರಡು ದಾಖಲೆಗಳು ಸಾಕು.
Members can make major corrections in their father’s name, mother’s name, spouse’s name by uploading any 3 documents from the list given.
Click on the link below https://t.co/P5EvZy52mJ#JointDeclaration #MemberPortal #EPFO #HumHainNaa #EPFOwithYou #ईपीएफओ pic.twitter.com/ldVgbalSQQ
— EPFO (@socialepfo) August 18, 2024
Members can make minor corrections in their father’s name, mother’s name, or spouse’s name by uploading any 2 documents from the list given.
Click on the link belowhttps://t.co/P5EvZy52mJ#JointDeclaration #MemberPortal #EPFO #HumHainNaa #EPFOwithYou #ईपीएफओ pic.twitter.com/cKLDcztYvx
— EPFO (@socialepfo) August 18, 2024
ಹೆಸರು ಬದಲಾವಣೆಯ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಈ ವಿಡಿಯೋದಲ್ಲಿದೆ…
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ