AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ನಿರೀಕ್ಷಿಸಿ ಹೊಸ ಸ್ವರೂಪದ ಇಪಿಎಫ್​ಒ; ಸೈಟ್ಸ್ ಅಳವಡಿಕೆ; ವೇಗದ ಸೇವೆ ಸುಲಭ ಬಳಕೆ; ಇನ್ನೇನಿದೆ ಇದರ ವಿಶೇಷತೆ?

EPFO with new technical upgrade coming this week: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒದ ಡಿಜಿಟಲ್ ಪ್ಲಾಟ್​ಫಾರ್ಮ್ ಹೊಸ ಸ್ವರೂಪದೊಂದಿಗೆ ಬರುತ್ತಿದೆ. ಹೊಸ ತಂತ್ರಜ್ಞಾನ ಸ್ಪರ್ಶ ಪಡೆದಿರುವ ಇಪಿಎಫ್​ಒ ಹೆಚ್ಚು ವೇಗದ ಸೇವೆ ನೀಡಲಿದೆ. ಕ್ಲೇಮ್​ಗಳು ಬೇಗ ಆಗಲಿವೆ. ಇದರ ಬಳಕೆ ಸುಲಭವಿರಲಿದೆ. ಹೆಚ್ಚು ಪಾರದರ್ಶಕತೆ ಇರಲಿದೆ.

ಈ ವಾರ ನಿರೀಕ್ಷಿಸಿ ಹೊಸ ಸ್ವರೂಪದ ಇಪಿಎಫ್​ಒ; ಸೈಟ್ಸ್ ಅಳವಡಿಕೆ; ವೇಗದ ಸೇವೆ ಸುಲಭ ಬಳಕೆ; ಇನ್ನೇನಿದೆ ಇದರ ವಿಶೇಷತೆ?
ಇಪಿಎಫ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 08, 2026 | 6:04 PM

Share

ಮುಖ್ಯಾಂಶಗಳು

  • ಇಪಿಎಫ್​ಒದ ಡಿಜಿಟಲ್ ಪ್ಲಾಟ್​ಫಾರ್ಮ್ ಹೊಸ ಸ್ವರೂಪದೊಂದಿಗೆ ಬರುತ್ತಿದೆ.
  • ಹೊಸ ತಂತ್ರಜ್ಞಾನ ಸ್ಪರ್ಶ ಪಡೆದಿರುವ ಇಪಿಎಫ್​ಒ ಹೆಚ್ಚು ವೇಗದ ಸೇವೆ ನೀಡಲಿದೆ.
  • ಕ್ಲೇಮ್​ಗಳು ಬೇಗ ಆಗಲಿವೆ. ಬಳಕೆ ಸುಲಭವಿರಲಿದೆ. ಹೆಚ್ಚು ಪಾರದರ್ಶಕತೆ ಇರಲಿದೆ.

ನವದೆಹಲಿ, ಜುಲೈ 8: ಇಪಿಎಫ್‌ಒ (EPFO – ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ತನ್ನ ಡಿಜಿಟಲ್ ಸೇವೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ‘EPFO 2.01’ ಎಂಬ ಹೊಸ ಸ್ವರೂಪದಲ್ಲಿ ಈ ವಾರದಲ್ಲಿ ಪ್ರಾರಂಭಿಸಲಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ತಾಂತ್ರಿಕ ಬದಲಾವಣೆಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದೆ ಇಪಿಎಫ್ ಡಿಜಿಟಲ್ ಪ್ಲಾಟ್​ಫಾರ್ಮ್ ಸಾರ್ವಜನಿಕವಾಗಿ ಅಲಭ್ಯವಾಗಿದ್ದು ಇದೇ ಕಾರಣಕ್ಕೆ. ಹೊಸ ಕೇಂದ್ರೀಕೃತ ಸಿಸ್ಟಂ ಅಳವಡಿಕೆಯಾಗುತ್ತಿದ್ದುದರಿಂದ ಇಪಿಎಫ್​ಒ ಡಿಜಿಟಲ್ ಪ್ಲಾಟ್​ಫಾರ್ಮ್ ಪುನಾರಂಭಗೊಳ್ಳುವುದು ವಿಳಂಬವಾಗಿತ್ತು. ಕೇಂದ್ರ ಸರ್ಕಾರದ ಸೈಟ್ಸ್ (CITES- Centralised IT Enabled Services) ಅಡಿಯಲ್ಲಿ ಪ್ಲಾಟ್​ಫಾರ್ಮ್​ಗೆ ಉನ್ನತ ತಂತ್ರಜ್ಞಾನದ ಸ್ಪರ್ಶ ತರಲಾಗಿದೆ. ಇಪಿಎಫ್ ಸೇವೆಗಳು ಹೆಚ್ಚು ವೇಗ, ಹೆಚ್ಚು ಪಾರದರ್ಶಕ ಮತ್ತು ಹೆಚ್ಚು ಸುಲಭವಾಗಿರುವಂತೆ ಈ ತಂತ್ರಜ್ಞಾನ ನೆರವಾಗಿದೆ. ಹೊಸ ಸ್ವರೂಪದ EPFO 2.01 ದಲ್ಲಿ ಏನೆಲ್ಲಾ ಬದಲಾವಣೆ ಇದೆ?

EPFO 2.01 ದಲ್ಲಿ ಪ್ರಮುಖ ಸೌಲಭ್ಯಗಳಿವು

  • ಕೇಂದ್ರೀಕೃತ ವ್ಯವಸ್ಥೆ (Centralized System): ಹಿಂದೆ ಪ್ರತಿಯೊಂದು ಪ್ರಾದೇಶಿಕ ಕಚೇರಿಯು ತನ್ನದೇ ಆದ ಡೇಟಾಬೇಸ್ ಹೊಂದಿತ್ತು. ಈಗ ಎಲ್ಲ ಸದಸ್ಯರ ವಿವರಗಳನ್ನು ಒಂದೇ ರಾಷ್ಟ್ರೀಯ ಡೇಟಾಬೇಸ್‌ಗೆ ತರಲಾಗಿದೆ. ಇದರಿಂದಾಗಿ ಸದಸ್ಯರು ತಮ್ಮ ಖಾತೆ ಇರುವ ಕಚೇರಿಗೆ ಮಾತ್ರ ಹೋಗುವ ಅವಶ್ಯಕತೆ ಇಲ್ಲ, ದೇಶದ ಯಾವುದೇ ಅಧಿಕೃತ ಇಪಿಎಫ್‌ಒ ಕಚೇರಿಯಲ್ಲಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು.
  • ವೇಗದ ಕ್ಲೈಮ್‌ಗಳು (Faster Claims): ಕ್ಲೈಮ್‌ಗಳನ್ನು ಸಲ್ಲಿಸುವ ಮೊದಲು ಸಿಸ್ಟಮ್ ಸ್ವಯಂಚಾಲಿತವಾಗಿ ಅರ್ಜಿಯನ್ನು ಪರಿಶೀಲಿಸುತ್ತದೆ, ಇದರಿಂದಾಗಿ ತಿರಸ್ಕಾರಗಳು ಕಡಿಮೆಯಾಗುತ್ತವೆ. ಅಡ್ವಾನ್ಸ್ ಕ್ಲೈಮ್‌ಗಳಿಗಾಗಿ ಆಟೊ-ಸೆಟ್ಲ್‌ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಏಕೀಕೃತ ಸದಸ್ಯ ಪೋರ್ಟಲ್ (Unified Member Portal): ಇನ್ನುಮುಂದೆ ಬ್ಯಾಲೆನ್ಸ್ ಪರಿಶೀಲನೆ, ಕ್ಲೈಮ್ ಸ್ಥಿತಿ, ಪಿಂಚಣಿ ವಿವರಗಳು ಎಲ್ಲವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪಡೆಯಬಹುದು. ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಬ್ಯಾಲನ್ಸ್ ನೋಡಲು, ಕ್ಲೇಮ್ ಸಲ್ಲಿಸಲು ಇತ್ಯಾದಿಗೆ ಬೇರೆ ಬೇರೆ ಪ್ಲಾಟ್​ಫಾರ್ಮ್​ಗಳಿಗೆ ಹೋಗಬೇಕಿತ್ತು. ಈಗ ಒಂದೇ ಕಡೆ ಎಲ್ಲಾ ಸೇವೆಗಳು ಸಿಗುತ್ತವೆ.
  • ಪಿಂಚಣಿದಾರರಿಗೆ ಅನುಕೂಲ: ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (CPPS): ಇಪಿಎಸ್ (EPS) ಪಿಂಚಣಿದಾರರು ಈಗ ದೇಶದ ಯಾವುದೇ ಇಪಿಎಫ್‌ಒ ಕಚೇರಿಯಲ್ಲಿ ಸೇವೆಗಳನ್ನು ಪಡೆಯಬಹುದು ಮತ್ತು ದೇಶದ ಯಾವುದೇ ಬ್ಯಾಂಕ್ ಖಾತೆಗೆ ತಮ್ಮ ಪಿಂಚಣಿಯನ್ನು ನೇರವಾಗಿ ಪಡೆಯಬಹುದು.

ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ

ಈ ಮೇಲ್ದರ್ಜೆಯು ಇಪಿಎಫ್‌ಒ ಸೇವೆಗಳನ್ನು ಹೆಚ್ಚು ಪಾರದರ್ಶಕ, ವೇಗವಾದ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಇಪಿಎಫ್ ಬಡ್ಡಿ ಜಮಾ ಸದ್ಯದಲ್ಲೇ

ಇಪಿಎಫ್ ಅಕೌಂಟ್​ಗಳಿಗೆ 2025-26ನೇ ಸಾಲಿನ 8.25% ಬಡ್ಡಿಯು (EPF interest ಮುಂದಿನ ವಾರದಲ್ಲಿ ಜಮೆಯಾಗಲಿದೆ. ಸುಮಾರು 34 ಕೋಟಿ ಖಾತೆಗಳಿಗೆ ಒಟ್ಟು ₹1.44 ಲಕ್ಷ ಕೋಟಿ ಬಡ್ಡಿ ಹಣ ಜಮೆಯಾಗಲಿದೆ. ಸದಸ್ಯರು ಜುಲೈ 15 ರ ವೇಳೆಗೆ ತಮ್ಮ ಪಾಸ್‌ಬುಕ್‌ನಲ್ಲಿ ಈ ಹಣವನ್ನು ನೋಡಬಹುದು.

ಇಪಿಎಫ್ ಹಣ ಯುಪಿಐನಿಂದ ಹಿಂಪಡೆಯಬಹುದೆ?

ಇಪಿಎಫ್​ಒ ಸಿಸ್ಟಂ ಅಪ್​ಗ್ರೇಡ್ ಆಗಿರುವುದು ಯುಪಿಐ ಫೀಚರ್ ಜಾರಿ ಕುರಿತು ನಿರೀಕ್ಷೆ ಹೆಚ್ಚಿದೆ. ವರದಿ ಪ್ರಕಾರ, ಯುಪಿಐ ಮತ್ತು ಎಟಿಎಂ ಮೂಲಕ ಇಪಿಎಫ್ ಹಣ ಹಿಂಪಡೆಯುವ ಸೌಲಭ್ಯ ಬಹಳ ಶೀಘ್ರದಲ್ಲೇ ಬರಬಹುದು ಎನ್ನಲಾಗಿದೆ. ಆದರೆ, ಯಾವ ದಿನದೊಳಗೆ ಇದು ಆಗುತ್ತದೆ ಗೊತ್ತಿಲ್ಲ.

ಇದನ್ನೂ ಓದಿ: ವಿಶ್ವ ಬ್ಯಾಂಕ್​ನ ಮೇಲ್ಮಧ್ಯಮ ಆದಾಯ ಮಟ್ಟ ದಾಟಿದ ಕರ್ನಾಟಕ; ತಮಿಳುನಾಡನ್ನೂ ಮೀರಿಸಿದ ಕರುನಾಡು; ಟಾಪ್-5ನಲ್ಲಿ ದಕ್ಷಿಣ ರಾಜ್ಯಗಳೇ ಹೆಚ್ಚು

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ಮತ್ತು ಉತ್ತರಗಳು (FAQs)

ಪ್ರಶ್ನೆ: ಇಪಿಎಫ್ ಬಡ್ಡಿಹಣ ಯಾವಾಗ ಜಮೆ ಆಗುತ್ತದೆ?

ಉತ್ತರ: 2025-26ರ ವರ್ಷಕ್ಕೆ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಂದಾಯ 2026ರ ಜುಲೈ 2ನೇ ವಾರದಲ್ಲಿ ಆಗುತ್ತದೆ.

ಪ್ರಶ್ನೆ: ಪರಿಷ್ಕೃತ EPFO ಪೋರ್ಟಲ್​ನ ವಿಶೇಷತೆ ಏನು?

ಉತ್ತರ: Unified Member Portal ​ನಲ್ಲಿ ಬ್ಯಾಲೆನ್ಸ್ ಪರಿಶೀಲನೆ, ಕ್ಲೈಮ್ ಸ್ಥಿತಿ, ಪಿಂಚಣಿ ಎಲ್ಲ ವಿವರವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪಡೆಯಬಹುದು.

ಪ್ರಶ್ನೆ: ಇಪಿಎಫ್ ಅಕೌಂಟ್​ನಲ್ಲಿ ಸಮಸ್ಯೆಯಾದರೆ ನಿಗದಿತ ಪ್ರಾದೇಶಿಕ ಕಚೇರಿಗೆ ಹೋಗಬೇಕಾ?

ಉತ್ತರ: ಹೊಸ ಇಪಿಎಫ್ ಸಿಸ್ಟಂನಲ್ಲಿ ಕೇಂದ್ರೀಕೃತ ವ್ಯವಸ್ಥೆ ತರಲಾಗಿದೆ. ದೇಶದ ಯಾವುದೇ ಇಪಿಎಫ್ ಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಳ್ಳಬಹುದು.

ಪ್ರಶ್ನೆ: ಇಪಿಎಫ್​ನಲ್ಲಿ ಯುಪಿಐ, ಎಟಿಎಂ ಫೀಚರ್ ಯಾವಾಗ?

ಉತ್ತರ: ಇಪಿಎಫ್ ಹಣವನ್ನು ಯುಪಿಐ ಅಥವಾ ಎಟಿಎಂನಲ್ಲಿ ವಿತ್​ಡ್ರಾ ಮಾಡುವ ಸೌಲಭ್ಯ ಬಹಳ ಶೀಘ್ರದಲ್ಲೇ ಬರಲಿದೆ.

Published On - 5:58 pm, Wed, 8 July 26

Follow Us
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ