ಇಟಿಎಫ್ ಎನ್ನುವುದು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಆಗಿದ್ದು, ನಿಫ್ಟಿ, ಸೆನ್ಸೆಕ್ಸ್‌ನಂತಹ ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಅಥವಾ ಸೂಚ್ಯಂಕದ ತೂಕದ ಪ್ರಕಾರ ಪಿಎಸ್‌ಯು, ಬ್ಯಾಂಕಿಂಗ್ ಅಥವಾ ಐಟಿ ಸ್ಟಾಕ್‌ಗಳಂತಹ ವಿವಿಧ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಒಂದು ವಿಧದ ಮ್ಯೂಚುಯಲ್ ಫಂಡ್ ಇದಾಗಿದೆ. ಆದರೆ ಇವು ಮ್ಯೂಚುಯಲ್ ಫಂಡ್‌ಗಳಿಗಿಂತ ಸ್ವಲ್ಪ ಭಿನ್ನವಾಗಿಯೇ ವ್ಯವಹಾರ ನಡೆಸುತ್ತವೆ. ಅದಲ್ಲದೇ, ಚಿನ್ನ, ಸ್ವತ್ತು ಅಥವಾ ನಿಗದಿತ ವಸ್ತುಗಳ ರೀತಿಯಲ್ಲಿ ಇಎಫ್’ಟಿ ಅಡಿಯಲ್ಲಿ ಷೇರುಗಳ ರೀತಿಯಲ್ಲಿ ಇ’ಎಫ್’ಟಿ’ಗಳು ಒಳಗೊಂಡಿದೆ.
ಈ ಇಎಫ್’ಟಿಗಳು ಷೇರು ವಿನಿಮಯಗಳ ವ್ಯವಹಾರಗಳ ರೀತಿಯಲ್ಲಿ ಮಾರುಕಟ್ಟೆ ಭದ್ರತೆ ಒದಗಿಸುವುದರೊಂದಿಗೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಆದರೆ ಹೂಡಿಕೆಗೂ ಮುನ್ನ ಈ ಇಟಿಎಫ್‌ಗಳನ್ನು ಎಲ್ಲಿ ಖರೀದಿಸಬಹುದು ಹಾಗೂ ಮಾರಾಟ ಮಾಡಬಹುದು. ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಇವುಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಹೊಂದಿರುವುದು ಬಹಳ ಅವಶ್ಯಕವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Fri, 20 December 24