Fact Check: ಆಧಾರ್ ಕಾರ್ಡ್ ಮೂಲಕ ಹಣಕಾಸಿನ ವಹಿವಾಟು ಟ್ರ್ಯಾಕ್ ಮಾಡಬಹುದಾ? ಏನಿದರ ಸತ್ಯಾಸತ್ಯತೆ!
ಆಧಾರ್‌ನ ಉಪಯುಕ್ತತೆ ಹೆಚ್ಚುತ್ತಿದ್ದು, UIDAI ವ್ಯಕ್ತಿಗಳಿಗೆ ಆಧಾರ್‌ನಲ್ಲಿ ಹೆಸರು, ಲಿಂಗ, ಜನ್ಮ ದಿನಾಂಕ, ಬಯೋಮೆಟ್ರಿಕ್ ಇತ್ಯಾದಿಗಳಂತಹ ಮಾಹಿತಿಯನ್ನು ನವೀಕರಿಸಲು ಅನುಮತಿಸುತ್ತದೆ.
ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದು. ಆಧಾರ್ ಕಾರ್ಡ್ ವಿಲ್ಲದೆ ಯಾವುದೇ ಪ್ರಮುಖ ಕೆಲಸವಾಗುವುದಿಲ್ಲ. ಇದನ್ನು ಹಣಕಾಸಿನ ಕೆಲಸಕ್ಕೆ ಐಡಿಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಪ್ಯಾನ್ ಕಾರ್ಡ್ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರೆಗೆ ಪ್ರತಿಯೊಂದು ಕಾರ್ಯಕ್ಕೂ ಆಧಾರ್ ಕಾರ್ಡ್ ಅಗತ್ಯ ಬಳಕೆಯಾಗಿದೆ. ಇದಲ್ಲದೆ ರೈಲು ಮತ್ತು ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಸರ್ಕಾರಿ ಸಂಸ್ಥೆ UIDAI ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ನೀಡುವ ಕೆಲಸ ಮಾಡುತ್ತದೆ.
#AadhaarMythBusters #AadhaarFacts#UIDAI केवल न्यूनतम जानकारी नामांकन/अपडेट के समय लेता हैं , इसमें आपका नाम, पता, लिंग,जन्म तिथि, उंगलियों के निशान, आइरिस स्कैन,और चेहरे की तस्वीर शामिल है।#UIDAI कभी भी निवासी की कोई वित्तीय जानकारी / डेटा नहीं रखती है। आधार है तो विश्वास है । pic.twitter.com/2GyvM6Eo13
— Aadhaar (@UIDAI) September 12, 2022
ಆಧಾರ್‌ನ ಉಪಯುಕ್ತತೆ ಹೆಚ್ಚುತ್ತಿದ್ದು, UIDAI ವ್ಯಕ್ತಿಗಳಿಗೆ ಆಧಾರ್‌ನಲ್ಲಿ ಹೆಸರು, ಲಿಂಗ, ಜನ್ಮ ದಿನಾಂಕ, ಬಯೋಮೆಟ್ರಿಕ್ ಇತ್ಯಾದಿಗಳಂತಹ ಮಾಹಿತಿಯನ್ನು ನವೀಕರಿಸಲು ಅನುಮತಿಸುತ್ತದೆ. ಪ್ರತಿ ಕಾರ್ಯಕ್ಕೂ ಆಧಾರ್‌ನ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, UIDAI ತನ್ನ ಅಧಿಕೃತ ಟ್ವಿಟರ್ನಲ್ಲಿ ಆಧಾರ್‌ಗೆ ಸಂಬಂಧಿಸಿದ ಯಾವುದೇ ತಪ್ಪು ಮಾಹಿತಿಯ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಸಂಖ್ಯೆಯ ಮೂಲಕ ಯಾರಾದರೂ ನಮ್ಮ ಹಣಕಾಸಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಆಧಾರ್ ಸಂಖ್ಯೆಯ ಮೂಲಕ ಹಣಕಾಸು ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ಯುಐಡಿಎಐ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. ಯಾವುದೇ ಸಂದರ್ಭದಲ್ಲೂ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಯುಐಡಿಎಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿ ನೀಡಿದೆ. UIDAI ಯಾವುದೇ ನಿವಾಸಿ ಹಣಕಾಸು ಮಾಹಿತಿ ಅಥವಾ ಡೇಟಾವನ್ನು ಹೊಂದಿಲ್ಲ. ಆಧಾರ್ ಸಂಖ್ಯೆಯ ಮೂಲಕ ಯಾವುದೇ ಹಣಕಾಸಿನ ಮಾಹಿತಿಯನ್ನು ಪ್ರವೇಶಿಸಲಾಗುವುದಿಲ್ಲ. ಇಂತಹ ನಕಲಿ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ಅದಕ್ಕೆ ಮರುಳಾಗಬೇಡಿ ಎಂದು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಜನರಿಗೆ ತಲುಪಿಸಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.