ಮಾಸಿಕ ಕೇವಲ ರೂ. 1,000 ಕಂತು ಕಟ್ಟಿ ನಿವೃತ್ತಿ ನಂತರ ರೂ. 20,000 ಪಿಂಚಣಿ ಪಡೆಯುವುದು ಹೇಗೆ ಗೊತ್ತಾ?

ಇದು ಸರ್ಕಾರದಿಂದ ಪ್ರಯೋಜಿತವಾಗಿರುವ ಸ್ಕೀಮ್ ಆಗಿದ್ದು ಉದ್ಯೋಗದಲ್ಲಿರುವ ವರ್ಷಗಳಲ್ಲಿ ಜನ ಮಾಸಿಕ ಕಂತುಗಳನ್ನು ಕಟ್ಟಿ ನಿವೃತ್ತರಾದ ನಂತರ ನಿಯಮಿತವಾಗಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.

ಮಾಸಿಕ ಕೇವಲ ರೂ. 1,000 ಕಂತು ಕಟ್ಟಿ ನಿವೃತ್ತಿ ನಂತರ ರೂ. 20,000 ಪಿಂಚಣಿ ಪಡೆಯುವುದು ಹೇಗೆ ಗೊತ್ತಾ?
ರಾಷ್ಟ್ರೀಯ ಪಿಂಚಣಿ ಯೋಜನೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 17, 2022 | 1:23 PM

ನಿವೃತ್ತಿಯ ವಯಸ್ಸು ಹತ್ತಿರವಾಗುತ್ತಿದ್ದಂತೆಯೇ ಜನರಿಗೆ ವಿಶ್ರಾಂತ ಬದುಕಿನ ಬಗ್ಗೆ ಚಿಂತೆ ಕಾಡಲಾರಂಭಿಸುತ್ತದೆ. ಮಕ್ಕಳ ಓದು-ಮದುವೆಗಳಿಗೆ ಉಳಿತಾಯ (savings) ಹೆಚ್ಚುಭಾಗ ಅದಾಗಲೇ ಕರಗಿ ಹೋಗಿರುತ್ತದೆ. ಹಾಗಾಗಿ ಆರ್ಥಿಕ ಭದ್ರತೆ (financial security) ವಯಸ್ಕರನ್ನು ಕಾಡುವ ಬಹುದೊಡ್ಡ ಚಿಂತೆಯಾಗಿದೆ. ಆದರೆ, ದೂರಾಲೋಚನೆಯುಳ್ಳ ಜನ ನಿವೃತ್ತಿ ನಂತರದ ಆದಾಯದ ಬಗ್ಗೆ ಬಹಳ ಅದ್ಭುತವೆನಿಸುವ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ನಿವೃತ್ತಿ ನಂತರ ನಿಯಮಿತವಾಗಿ ಆದಾಯ ಒದಗಿಸುವ ಹಲವಾರು ಸ್ಕೀಮ್ ಗಳು ಲಭ್ಯವಿವೆ. ರಾಷ್ಟ್ರೀಯ ಪೆನ್ಷನ್ ಸ್ಕೀಮ್ (National Pension Scheme) ಅವುಗಳಲ್ಲಿ ಒಂದಾಗಿದೆ.

ಇದು ಸರ್ಕಾರದಿಂದ ಪ್ರಯೋಜಿತವಾಗಿರುವ ಸ್ಕೀಮ್ ಆಗಿದ್ದು ಉದ್ಯೋಗದಲ್ಲಿರುವ ವರ್ಷಗಳಲ್ಲಿ ಜನ ಮಾಸಿಕ ಕಂತುಗಳನ್ನು ಕಟ್ಟಿ ನಿವೃತ್ತರಾದ ನಂತರ ನಿಯಮಿತವಾಗಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ಪೆನ್ಷನ್ ಸ್ಕೀಮ್ (ಎನ್ ಪಿಎಸ್) ಅಂದರೇನು?

ರಾಷ್ಟ್ರೀಯ ಪೆನ್ಷನ್ ಸ್ಕೀಮ್ ಸರ್ಕಾರಿ ಉದ್ಯೋಗಿಗಳಿಗಾಗಿ 2004 ರಲ್ಲಿ ರೂಪಿಸಲಾಗಿರುವ ಸರ್ಕಾರೀ ಪ್ರಾಯೋಜಿತ ಸ್ಕೀಮ್ ಆಗಿದೆ. ನಂತರ 2009 ರಲ್ಲಿ ಸದರಿ ಸ್ಕೀಮನ್ನು ಎಲ್ಲ ವರ್ಗಗಳಿಗೆ ವಿಸ್ತರಿಸಲಾಯಿತು. ಎನ್ ಪಿ ಎಸ್ ಭಾರತದ ವಯಸ್ಕರಿಗಾಗಿ ಭಾರತ ಸರ್ಕಾರವು ಲಾಂಚ್ ಮಾಡಿರುವ ಪೆನ್ಶನ್-ಕಮ್- ಇನ್ವಸ್ಟ್ ಮೆಂಟ್ ಸ್ಕೀಮ್ ಆಗಿದೆ. ಈ ಸ್ಕೀಮ್ ದೀರ್ಘಾವಧಿ ಉಳಿತಾಯ ಯೋಜನೆಯ ಒಂದು ಪರಿಣಾಮಕಾರಿ ಸಾಧನವಾಗಿದ್ದು ಸುರಕ್ಷಿತ ಮತ್ತು ಮಾರುಕಟ್ಟೆ-ಆಧಾರಿತ ಹಾಗೂ ನಿಯಂತ್ರಿತ ಆದಾಯವನ್ನು ನಿಯಮಿತವಾಗಿ ಒದಗಿಸುತ್ತದೆ.

ಎನ್ ಪಿಎಸ್ ಸ್ಕೀಮ್ : ರೂ. 20,000 ಪೆನ್ಷನ್ ಹೇಗೆ ಪಡೆಯುವುದು?

ಒಬ್ಬ ವ್ಯಕ್ತಿಯು 20 ನೇ ವಯಸ್ಸಿನಲ್ಲಿ ಎನ್ ಪಿಎಸ್ ಗೆ ಸೇರಿ ಮಾಸಿಕ 1,000 ರೂಪಾಯಿಗಳ ಕಂತು ಕಟ್ಟಲು ಪ್ರಾರಂಭಿಸಿದರೆ, ನಿವೃತ್ತಿಯ ಸಮಯದವರೆಗೆ ಅವನು ಒಟ್ಟು ರೂ. 5.4 ಲಕ್ಷ ಕಟ್ಟಿದಂತಾಗುತ್ತದೆ. ಜಮೆಯಾಗುತ್ತಿರುವ ಅವನ ಹಣಕ್ಕೆ ನಿರೀಕ್ಷಿತ ಶೇಕಡಾ 10ರಷ್ಟು ರಿಟರ್ನ್ಸ್ ಸಿಕ್ಕರೆ ಒಟ್ಟು ಹೂಡಿಕೆಯ ಮೊತ್ತ ರೂ.1.05 ಕೋಟಿ ಆಗುತ್ತದೆ.

ಎನ್‌ಪಿಎಸ್ ಚಂದಾದಾರರು ಕಾರ್ಪಸ್‌ನ ಶೇ 40 ರಷ್ಟನ್ನು ವರ್ಷಾಶನವಾಗಿ ಪರಿವರ್ತಿಸಿದರೆ ಮೌಲ್ಯವು 42.28 ಲಕ್ಷ ರೂ. ಆಗುತ್ತದೆ. ಶೇಕಡ 10 ರಷ್ಟು ವರ್ಷಾಶನ ದರವನ್ನು ಊಹಿಸಿದರೆ, ಮಾಸಿಕ ಪಿಂಚಣಿ 21,140 ರೂಪಾಯಿ ಆಗಬಹುದು. ಅಷ್ಟು ಮಾತ್ರವಲ್ಲದೆ, ಎನ್‌ಪಿಎಸ್ ಚಂದಾದಾರರು ಲಮ್ಸಮ್ ಮೊತ್ತದ ರೂಪದಲ್ಲಿ ಸುಮಾರು 63.41 ಲಕ್ಷ ರೂಪಾಯಿ ಪಡೆಯುತ್ತಾರೆ!

ಮಾಸಿಕ ಕೊಡುಗೆ ಮೊತ್ತವು ಹೆಚ್ಚಾದಂತೆ, ನಿವೃತ್ತಿಯ ನಂತರದ ಆದಾಯವೂ ಹೆಚ್ಚಾಗುತ್ತದೆ. ಉದಾಹರಣೆಗೆ, ವ್ಯಕ್ತಿಯೊಬ್ಬ ಮಾಸಿಕ ಕಂತನ್ನು 2,500 ರೂ.ಗೆ ಹೆಚ್ಚಿಸಿದರೆ, 65 ವರ್ಷ ವಯಸ್ಸಿನ ನಂತರ ಅವನು ತಿಂಗಳಿಗೆ ಸುಮಾರು 52,000 ರೂ. ಪಿಂಚಣಿ ಪಡೆಯುತ್ತಾನೆ.

ಎನ್ ಪಿಎಸ್ ಲೆಕ್ಕಾಚಾರ (NPS calculator): ಅದನ್ನು ಬಳಸುವುದು ಹೇಗೆ?

ಎನ್ ಪಿ ಎಸ್ ಕ್ಯಾಲ್ಕುಲೇಟರ್ ಬಳಸಬೇಕಾದರೆ ಮೊದಲು ಅದರ ಲಿಂಕ್ ಗೆ https://www.npstrust.org.in/content/pension-calculator ಗೆ ಹೋಗಿ.

-ನಂತರ ನಿಮ್ಮ ಜನ್ಮದಿನಾಂಕವನ್ನು ನಮೂದಿಸಿ

-ಈಗ ನೀವು ಅಂದುಕೊಂಡಿರುವ ಮಾಸಿಕ ಕಂತು ಮತ್ತು ಅದನ್ನು ಯಾವ ವಯಸ್ಸಿನವರೆಗೆ ತುಂಬಲು ಸಾಧ್ಯ ಅನ್ನೋದನ್ಉ ನಮೂದಿಸಿ.

-ನಿಮ್ಮ ಹೂಡಿಕೆಯ ಮೇಲೆ ನೀವು ನಿರೀಕ್ಷಿಸುವ ರಿಟರ್ನ್ ಮತ್ತು ಪಿಂಚಣಿಯನ್ನು ನಮೂದಿದಸಿರಿ

ಇದನ್ನೆಲ್ಲ ಮಾಡಿದ ನಂತರ ನೀವು ಪಡೆಯಬಹುದಾದ ಮಾಸಿಕ ಪಿಂಚಣಿ, ಆದಾಯದ ಮೌಲ್ಯ ಮತ್ತು ಲಮ್ಸಮ್ ಆಗಿ ಪಡೆಯಬಹುದಾದ ಮೊತ್ತ ನಿಮ್ಮ ಕಂಪ್ಯೂಟರ ಸ್ಕ್ರೀನಿನ ಬಲಭಾಗದಲ್ಲಿ ಕಾಣಿಸುತ್ತದೆ.

ಯಾರೆಲ್ಲ ಎನ್ ಪಿಎಸ್ ಸೇರಬಹುದು?

ಯಾರೇ ಎನ್ ಪಿಎಸ್ ಸೇರಲು ಬಯಸಿದರೂ ಅರ್ಹತಾ ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಭಾರತೀಯ ನಾಗರಿಕ, ನಿವಾಸಿ ಅಥವಾ ಅನಿವಾಸಿ ಭಾರತೀಯ; ಅರ್ಜಿದಾರ ಅವನ/ಅವಳ ಅರ್ಜಿ ಸಲ್ಲಿಸುವ ದಿನಾಂಕದಂದು 18 ರಿಂದ 70 ವರ್ಷ ವಯಸ್ಸಿನೊಳಗಿನಗಿರಬೇಕು; ಮತ್ತು ಅರ್ಜಿದಾರರು ಯೋಜನೆಯಿಂದ ಸೂಚಿಸಲಾದ ಕೆವೈಸಿ ಮಾನದಂಡಗಳನ್ನು ಅನುಸರಿಸಬೇಕು.

ರಿಸ್ಕ್ ರೇಟಿಂಗ್ ಸಿಸ್ಟಮ್

ಭಾರತೀಯ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್ ಆರ್ ಡಿ ಎ) ನಿಯಮಗಳು ಎನ್ ಪಿ ಎಸ್ ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಆರು ಹಂತದ ಅಪಾಯಗಳನ್ನು ವಿವರಿಸಿದೆ – ಕಡಿಮೆ ಅಪಾಯ, ಕಡಿಮೆಯಿಂದ ಮಧ್ಯಮ ಹಂತದ ಅಪಾಯ, ಮಧ್ಯಮ ಅಪಾಯ, ಮಧ್ಯಮ ಅಪಾಯಕ್ಕಿಂತ ಹೆಚ್ಚಿನ ಅಪಾಯ ಮತ್ತು ಅತಿ ಹೆಚ್ಚಿನ ಅಪಾಯ.

ಫಂಡ್ ಮ್ಯಾನೇಜರ್‌ಗಳು ಚಂದಾದಾರರಿಗೆ ತಾವು ಹೂಡಿಕೆ ಮಾಡಲು ಯೋಜಿಸುತ್ತಿರುವ ಯೋಜನೆಯಲ್ಲಿ ಯಾವೆಲ್ಲ ಅಪಾಯಗಳಿವೆ ಎಂಬುದನ್ನು ವಿವರಿಸಬೇಕು.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಯೋಜನೆಗಳು ವ್ಯಕ್ತಿಯೊಬ್ಬನ ದೀರ್ಘಾವಧಿಯ ಉಳಿತಾಯ ಹೂಡಿಕೆಗೆ ಪ್ರಮುಖ ಆರ್ಥಿಕ ಪ್ರಯೋಜನದ ಮಾರ್ಗವಾಗಿದೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಹೂಡಿಕೆ ಮಾಡಿದರೆ ಪಿಂಚಣಿಗಾಗಿ ಅಪೇಕ್ಷಿತ ಕಾರ್ಪಸ್ ಅನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪಿಂಚಣಿ ನಿಧಿಗಳ ಯೋಜನೆಗಳ ವಿವಿಧ ವರ್ಗಗಳ ಅಡಿಯಲ್ಲಿ ಹೂಡಿಕೆಯು ಚಂದಾದಾರರಿಗೆ ವಿವಿಧ ಹಂತದ ಅಪಾಯಗಳನ್ನು ಒಳಗೊಂಡಿರುತ್ತದೆ ಮತ್ತು ಆದ್ದರಿಂದ, ಎನ್ ಪಿಎಸ್ ನ ವಿವಿಧ ಯೋಜನೆಗಳಲ್ಲಿ ಒಳಗೊಂಡಿರುವ ಅಪಾಯಗಳ ಬಗ್ಗೆ ಚಂದಾದಾರರಲ್ಲಿ ಜಾಗೃತಿ ಮೂಡಿಸಲು ಸಂಸ್ಥೆಯು ನೆರವಾಗ ಬಯಸುತ್ತದೆ,’ ಎಂದು ಸುತ್ತೋಲೆಯೊಂದರಲ್ಲಿ ಪಿ ಎಫ್ ಆರ್ ಡಿ ಎ ಹೇಳಿದೆ.

ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ