ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ

FDI inflow sees huge increase: 2025-26ರ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ ಒಂದೂಕಾಲು ಲಕ್ಷ ಕೋಟಿ ರೂನಷ್ಟು ಎಫ್​ಡಿಐ ಹರಿದು ಬಂದಿದೆ. ಆ ವರ್ಷ ಭಾರತದಲ್ಲಿ ಅತಿಹೆಚ್ಚು ಎಫ್​ಡಿಐ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನಕ್ಕೆ ಜಿಗಿದಿದೆ. ಮಹಾರಾಷ್ಟ್ರಕ್ಕೆ 1.75 ಲಕ್ಷ ಕೋಟಿ ರೂಗೂ ಹೆಚ್ಚು ಎಫ್​ಡಿಐ ಸಿಕ್ಕಿದೆ.

ಭಾರತಕ್ಕೆ ಸರಾಗವಾಗಿ ಬರುತ್ತಿರುವ ವಿದೇಶೀ ನೇರ ಹೂಡಿಕೆ; ಕರ್ನಾಟಕಕ್ಕೆ ಭರ್ಜರಿ ಹೂಡಿಕೆ ಹೆಚ್ಚಳ; ಎರಡನೇ ಸ್ಥಾನಕ್ಕೆ ಜಿಗಿತ
ಹೂಡಿಕೆ
Image Credit source: Getty Images

Updated on: Jul 22, 2026 | 1:51 PM

ನವದೆಹಲಿ, ಜುಲೈ 22: ಭಾರತದ ವಿವಿಧ ಕ್ಷೇತ್ರಗಳಿಗೆ ವಿದೇಶೀ ನೇರ ಹೂಡಿಕೆಗಳು (FDI- Foreign Direct Investment) ಭರಪೂರವಾಗಿ ಹರಿದುಬರುವುದು ಮುಂದುವರಿದಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ (Jitin Prasada) ಅವರು 2020-21ರಿಂದ 2025-26ರವರೆಗೆ ಭಾರತದಲ್ಲಿ ರಾಜ್ಯವಾರು ಎಫ್​ಡಿಐ ಹರಿವಿನ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಕರ್ನಾಟಕದಲ್ಲಿ ಎಫ್​ಡಿಐ ಹರಿವು ಸಖತ್ ಏರಿಕೆಯಾಗಿದೆ. ಮಹಾರಾಷ್ಟ್ರದ ನಂತರ ಅತಿಹೆಚ್ಚು ಎಫ್​ಡಿಐ ಪಡೆದಿರುವ ರಾಜ್ಯವೆಂದರೆ ಕರ್ನಾಟಕ.

ಎಫ್​ಡಿಐ, ಎರಡನೇ ಸ್ಥಾನಕ್ಕೆ ಏರಿದ ಕರ್ನಾಟಕ

2025-26ರಲ್ಲಿ ಕರ್ನಾಟಕಕ್ಕೆ 12.94 ಬಿಲಿಯನ್ ಡಾಲರ್​ನಷ್ಟು (ಸುಮಾರು 1.25 ಲಕ್ಷ ಕೋಟಿ ರೂ) ಎಫ್​ಡಿಐ ಬಂದಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ವಿದೇಶೀ ಹೂಡಿಕೆಗಳು ದುಪ್ಪಟ್ಟಾಗಿವೆ. ಭಾರತಕ್ಕೆ ಬಂದ ಒಟ್ಟು ಎಫ್​ಡಿಐನಲ್ಲಿ ಕರ್ನಾಟಕಕ್ಕೆ ಸಿಕ್ಕ ಪಾಲು ಶೇ. 21.99. ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಂ. 2 ಎನಿಸಿದೆ.

ಇದನ್ನೂ ಓದಿ: ಈಗ 0, ನಂತರ 100, ಬಳಿಕ 200; ಜೆನೆರಿಕ್ ಔಷಧಗಳಿಗೆ ಟ್ರಂಪ್ ಟ್ಯಾರಿಫ್ ಪ್ಲಾನ್ ಪ್ರಕಟ; ಭಾರತದ ಪ್ರಬಲ ಫಾರ್ಮಾ ಉದ್ಯಮಕ್ಕೆ ಹೊಡೆತ?

2025-26ರಲ್ಲಿ ಅತಿಹೆಚ್ಚು ಎಫ್​ಡಿಐ ಪಡೆದ ರಾಜ್ಯಗಳು

  1. ಮಹಾರಾಷ್ಟ್ರ: 18.42 ಬಿಲಿಯನ್ ಡಾಲರ್
  2. ಕರ್ನಾಟಕ: 12.94 ಬಿಲಿಯನ್ ಡಾಲರ್
  3. ಕೇಂದ್ರಾಡಳಿತ ಪ್ರದೇಶಗಳು: 6.37 ಬಿಲಿಯನ್ ಡಾಲರ್
  4. ಗುಜರಾತ್: 5.71 ಬಿಲಿಯನ್ ಡಾಲರ್
  5. ತಮಿಳುನಾಡು: 4.72 ಬಿಲಿಯನ್ ಡಾಲರ್
  6. ಹರ್ಯಾಣ: 4.53 ಬಿಲಿಯನ್ ಡಾಲರ್
  7. ತೆಲಂಗಾಣ: 2.25 ಬಿಲಿಯನ್ ಡಾಲರ್
  8. ರಾಜಸ್ಥಾನ: 1.01 ಬಿಲಿಯನ್ ಡಾಲರ್
  9. ಉತ್ತರಪ್ರದೇಶ: 950 ಮಿಲಿಯನ್ ಡಾಲರ್
  10. ಆಂಧ್ರಪ್ರದೇಶ: 609 ಮಿಲಿಯನ್ ಡಾಲರ್

ಇಲ್ಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ, ಚಂಡೀಗಡ ನಗರಗಳೂ ಸೇರುತ್ತವೆ. ಹೀಗಾಗಿ, ಅತಿಹೆಚ್ಚು ಹೂಡಿಕೆ ಪಡೆದಿರುವ ರಾಜ್ಯಗಳ ಪಟ್ಟಿಯಲ್ಲಿ ಇದು ಸೇರಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್, ಈ ಮೂರು ರಾಜ್ಯಗಳು ಶೇ. 50ರಷ್ಟು ಎಫ್​ಡಿಐ ಆಕರ್ಷಿಸಿವೆ.

ಇದನ್ನೂ ಓದಿ: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ

ಭಾರತಕ್ಕೆ ಕಳೆದ ಎರಡು ವರ್ಷದಿಂದ ವಿದೇಶೀ ಹೂಡಿಕೆಗಳ ಒಳಹರಿವು ಹೆಚ್ಚುತ್ತಿದೆ. ಕೋವಿಡ್​ಗಿಂತ ಮುಂಚೆ ಭಾರತಕ್ಕೆ ಬಂದ ವಿದೇಶೀ ಹೂಡಿಕೆಯು ಜಿಡಿಪಿ ಶೇ. 2.4ರಷ್ಟಿತ್ತು. 2024ರಲ್ಲಿ ಅದು ಶೇ. 0.7ಕ್ಕೆ ಕುಸಿಯಿತು. ನಂತರ 2025ರಲ್ಲಿ ಅದು ಶೇ. 1 ಮುಟ್ಟಿತು. ಈಗ ಅದು ಇನ್ನಷ್ಟು ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us