AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ 0, ನಂತರ 100, ಬಳಿಕ 200; ಜೆನೆರಿಕ್ ಔಷಧಗಳಿಗೆ ಟ್ರಂಪ್ ಟ್ಯಾರಿಫ್ ಪ್ಲಾನ್ ಪ್ರಕಟ; ಭಾರತದ ಪ್ರಬಲ ಫಾರ್ಮಾ ಉದ್ಯಮಕ್ಕೆ ಹೊಡೆತ?

Donald Trump announces tariff measures on Generic drugs: ಜೆನೆರಿಕ್ ಔಷಧಗಳ ಮೇಲೆ ಭಾರೀ ಟ್ಯಾರಿಫ್ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸದ್ಯ ಎರಡು ವರ್ಷ ಟ್ಯಾರಿಫ್ ಇರುವುದಿಲ್ಲ. ನಂತರ ಶೇ. 100, ಹಾಗೂ 2029ರ ಆಗಸ್ಟ್​ನಿಂದ ಶೇ. 200ರಷ್ಟು ಟ್ಯಾರಿಫ್ ಹಾಕಲಿದ್ದಾರೆ. ಅಮೆರಿಕದ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರುವ ಭಾರತದ ಫಾರ್ಮಾ ಉದ್ಯಮಕ್ಕೆ ಹೊಡೆತ ಬೀಳುವ ಸಾಧ್ಯತೆ ಇಲ್ಲದಿಲ್ಲ.

ಈಗ 0, ನಂತರ 100, ಬಳಿಕ 200; ಜೆನೆರಿಕ್ ಔಷಧಗಳಿಗೆ ಟ್ರಂಪ್ ಟ್ಯಾರಿಫ್ ಪ್ಲಾನ್ ಪ್ರಕಟ; ಭಾರತದ ಪ್ರಬಲ ಫಾರ್ಮಾ ಉದ್ಯಮಕ್ಕೆ ಹೊಡೆತ?
ಡೊನಾಲ್ಡ್ ಟ್ರಂಪ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 22, 2026 | 12:09 PM

Share

ವಾಷಿಂಗ್ಟನ್, ಜುಲೈ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೊಸ ಟ್ಯಾರಿಫ್ ಬೆದರಿಕೆ ಹಾಕಿದ್ದಾರೆ. ಈ ಬಾರಿ ಜೆನೆರಿಕ್ ಔಷಧಗಳ ಆಮದು ಮೇಲೆ ಸುಂಕ ಹಾಕುವ ಪ್ಲಾನ್ ಪ್ರಕಟಿಸಿದ್ದಾರೆ. ಎರಡು ವರ್ಷಗಳವರೆಗೆ ಜೆನೆರಿಕ್ ಔಷಧಗಳ ಕಂಪನಿಗಳಿಗೆ ಟ್ಯಾರಿಫ್​ನಿಂದ ವಿನಾಯಿತಿ ನೀಡಿದ್ದಾರೆ. ಆದರೆ, ನಂತರ ಶೇ. 200ರಷ್ಟು ಸುಂಕ ಹಾಕುವುದಾಗಿ ಅವರು ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ತಿಳಿಸಿದ್ದಾರೆ. ಔಷಧ ಸಂಸ್ಥೆಗಳು ಅಮೆರಿಕದಲ್ಲಿ ತಯಾರಿಸಲು ಉತ್ತೇಜಿಸಲು ಸರ್ಕಾರ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

2026ರ ಆಗಸ್ಟ್ 1ರಿಂದ ಆರಂಭಗೊಂಡು ಎರಡು ವರ್ಷಗಳ ಕಾಲ, ಅಂದರೆ, 2028ರ ಜುಲೈ 31ರವರೆಗೆ ಜೆನೆರಿಕ್ ಔಷಧಗಳ ಆಮದು ಮೇಲೆ ಯಾವುದೇ ಟ್ಯಾರಿಫ್ ಇರುವುದಿಲ್ಲ. 2028ರ ಆಗಸ್ಟ್​ನಿಂದ ಒಂದು ವರ್ಷ ಕಾಲ ಈ ಔಷಧಗಳ ಮೇಲೆ ಶೇ. 100ರಷ್ಟು ಟ್ಯಾರಿಫ್ ಹಾಕಲಾಗುವುದು, 2029ರ ಆಗಸ್ಟ್​ನಿಂದ ಈ ಟ್ಯಾರಿಫ್ ಶೇ. 200ಕ್ಕೆ ಏರುತ್ತದೆ ಎಂದು ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 30,000 ರೂವರೆಗೂ ಏರಿಕೆಯಾಗಲಿದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ಬೆಲೆ

ಅಮೆರಿಕದ ಟ್ಯಾರಿಫ್​ನಿಂದ ಭಾರತದ ಫಾರ್ಮಾ ಉದ್ಯಮಕ್ಕೆ ಯಾಕೆ ಆತಂಕ?

ಭಾರತದ ಔಷಧ ಉದ್ಯಮ ಬಹಳ ಪ್ರಬಲವಾಗಿ ಬೆಳೆದಿದೆ. ವಿಶ್ವದ ಫಾರ್ಮಸಿ ಎಂದೇ ಖ್ಯಾತವಾಗಿರುವ ಭಾರತದ ಫಾರ್ಮಾ ಕಂಪನಿಗಳು ಜೆನೆರಿಕ್ ಮೆಡಿಸಿನ್​ಗಳನ್ನು ತಯಾರಿಸಲು ನಿಷ್ಣಾತವಾಗಿವೆ. 2024-25ರ ಹಣಕಾಸು ವರ್ಷದಲ್ಲಿ ಭಾರತದ ಫಾರ್ಮಾ ಸೆಕ್ಟರ್​ನಿಂದ 30 ಬಿಲಿಯನ್ ಡಾಲರ್​ನಷ್ಟು ರಫ್ತಾಗಿದೆ. ಅಂದರೆ, ಸುಮಾರು 2.7 ಲಕ್ಷ ಕೋಟಿ ರೂನಷ್ಟು ರಫ್ತನ್ನು ಈ ಸಂಸ್ಥೆಗಳು ಮಾಡಿವೆ. ಇದರಲ್ಲಿ ಅಮೆರಿಕವೊಂದಕ್ಕೇ ಶೇ. 30ಕ್ಕಿಂತಲೂ ಹೆಚ್ಚಿನ ರಫ್ತು ಹೋಗುತ್ತದೆ. ಅದರಲ್ಲೂ ಜೆನೆರಿಕ್ ಔಷಧಗಳನ್ನು ಭಾರತ ಹೆಚ್ಚಾಗಿ ರಫ್ತು ಮಾಡುತ್ತದೆ.

ಹೀಗಾಗಿ, ಡೊನಾಲ್ಡ್ ಟ್ರಂಪ್ ಅವರು ಜೆನೆರಿಕ್ ಮೆಡಿಸಿನ್ ಮೇಲೆ ಟ್ಯಾರಿಫ್ ವಿಧಿಸುವ ಯೋಜನೆ ಪ್ರಕಟಿಸಿರುವುದು ಭಾರತದ ಫಾರ್ಮಾ ಉದ್ಯಮದ ಮೇಲೆ ಆತಂಕ ಛಾಯೆ ಮೂಡುವಂತೆ ಮಾಡಿದೆ. ಅಮೆರಿಕದ ಮಾರುಕಟ್ಟೆಗೆ ಅತಿಹೆಚ್ಚು ರಫ್ತು ಮಾಡುವ ಭಾರತೀಯ ಔಷಧ ಕಂಪನಿಗಳಿಗೆ ಹೊಡೆತ ಬೀಳಲಿದೆ. ಸನ್ ಫಾರ್ಮಾ, ಡಾಕ್ಟರ್ ರೆಡ್ಡಿಸ್ ಲ್ಯಾಬೊರೇಟರಿಸ್ ಮತ್ತು ಅರಬಿಂದೋ ಫಾರ್ಮಾ ಸಂಸ್ಥೆಗಳು ಅಮೆರಿಕದಿಂದ ಹೆಚ್ಚಿನ ವರಮಾನ ಹೊಂದಿವೆ. ಸಿಪ್ಲಾ, ಲುಪಿನ್, ಗ್ಲ್ಯಾಂಡ್ ಫಾರ್ಮಾ ಮೊದಲಾದ ಭಾರತೀಯ ಕಂಪನಿಗಳು ಕೂಡ ಸಾಕಷ್ಟು ಔಷಧಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತವೆ.

ಇದನ್ನೂ ಓದಿ: ಅದೃಷ್ಟ ಮತ್ತು ಅಂಡಾಶಯದ ಲಾಟರಿ; ತಮ್ಮ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ವಾರನ್ ಬಫೆಟ್

ಡೊನಾಲ್ಡ್ ಟ್ರಂಪ್ ಅವರು ಜೆನೆರಿಕ್ ಔಷಧ ಮೇಲೆ ಟ್ಯಾರಿಫ್ ಅಸ್ತ್ರ ಬಿಟ್ಟಿದ್ದು ಯಾಕೆ?

ಡೊನಾಲ್ಡ್ ಟ್ರಂಪ್ ಅವರು ಅಮೆರಿಕವನ್ನು ಮತ್ತೊಮ್ಮೆ ಮ್ಯಾನುಫ್ಯಾಕ್ಚರಿಂಗ್ ದೈತ್ಯ ದೇಶವನ್ನಾಗಿ ಮಾಡುವ ಗುರಿ ಇಟ್ಟು, ಆ ನಿಟ್ಟಿನಲ್ಲಿ ಟ್ಯಾರಿಫ್ ಅಸ್ತ್ರ ಬಳಸುತ್ತಿದ್ದಾರೆ. ಅಮೆರಿಕದಲ್ಲಿ ಫಾರ್ಮಾ ಕಂಪನಿಗಳಿಗೆ ಉತ್ಕೃಷ್ಟ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವುದಾಗಿ ಭರವಸೆ ನೀಡಿದ್ದಾರೆ. ಫಾರ್ಮಾ ಆಮದು ಮೇಲೆ ಎರಡು ವರ್ಷದ ಟ್ಯಾರಿಫ್ ವಿನಾಯಿತಿ ಅವಧಿಯು, ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಘಟಕ ಆರಂಭಿಸಲು ನೀಡಿರುವ ಗಡವು ಅದಾಗಿದೆ. ಈಗ ಭಾರತೀಯ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಹೆಚ್ಚಿಸಬೇಕು, ಅಥವಾ ಬೇರೆ ಮಾರುಕಟ್ಟೆಗಳಿಗೆ ರಫ್ತು ವಿಸ್ತರಿಸುವ ಪ್ಲಾನ್ ಹಾಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Wed, 22 July 26

Follow Us
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
ಬಿಜೆಪಿ ಕಚೇರಿ ಮುತ್ತಿಗೆಗೆ ಯುವ ಕಾಂಗ್ರೆಸ್​​ ಕಾರ್ಯಕರ್ತರ ಯತ್ನ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
‘ಕರಾವಳಿ’ ಪ್ರೀಮಿಯರ್ ಶೋ; ರಿಲೀಸ್​​ಗೂ ಮೊದಲೇ ಮೆಚ್ಚುಗೆ
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ರೌಡಿಶೀಟರ್‌ಗಳಿಗೆ ಚಳಿ ಬಿಡಿಸಿದ ದಾವಣಗೆರೆ ಎಸ್‌ಪಿ ಡಾ. H T ಶೇಖರ್‌
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
ತುಮಕೂರಲ್ಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಮೇಶ್ವರ್​​ ಆಗ್ರಹ
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
'ನಾವು ಮಾಡಿದ್ದು ತಪ್ಪು' ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು!
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಲಾರಿ ಪಲ್ಟಿ, ಟ್ರಾಫಿಕ್ ಜಾಮ್
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಸ್ವದೇಶಿ ನಿರ್ಮಿತ ಮಾಲ್ವಾಣ್ ಯುದ್ಧನೌಕೆ ಹೇಗಿದೆ? ವಿಶೇಷಗಳೇನು?
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ